ಯರಡೋಣಿ: ಅಯ್ಯಪ್ಪ ಮಾಲಾಧಾರಿಗಳಿಗೆ ಮಸೀದಿಯಲ್ಲಿ ಅನ್ನಸಂತರ್ಪಣೆ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ಭಾರತ ಬಹುತ್ವವನ್ನು ಹೊಂದಿದ ದೇಶವಾಗಿದೆ ಎನ್ನುವುದಕ್ಕೆ ಹಲವಾರು ನಿದರ್ಶನಗಳು ನಿತ್ಯನಡೆಯುತ್ತಿವೆ ಅದಕ್ಕೆ ತಾಜಾ ಉದಾ ಎಂಬಂತೆ ತಾಲೂಕಿನ ಯರಡೋಣಿ ಗ್ರಾಮದಲ್ಲಿ ಅಯ್ಯಪ್ಪ ಮಾಲಾಧಾರಿಗಳಿಗೆ ಮುಸ್ಲಿಂ ಯುವಕರು ಮಸೀದಿಯಲ್ಲಿ ಅನ್ನಸಂತರ್ಪಣೆ ಮಾಡಿದ ಘಟನೆ ಜರುಗಿದೆ
ಯರಡೋಣಿ ಗ್ರಾಮದಲಿ ಅಯ್ಯಪ್ಪ ಮಾಲಾಧಾರಿಗಳಿಗೆ ಅದೆ ಗ್ರಾಮದ ಮುಸ್ಲಿಂ ಯುವಕರು ಸೇರಿಕೊಂಡು ಮಸೀದಿಯಲ್ಲಿ ಅನ್ನಸಂರ್ತಣೆ ಮಾಡುವ ಮೂಲಕ ಭಾವೈಕ್ಯತೆಯನ್ನು ಮೆರೆದಿದ್ದಾರೆ
ಮುಸ್ಲಿಂ ಯುವಕರಾದ ಮಜಹರ ಖಾಲಿದ್,ಸಿರಾಜ್ ತೋಟದ,ನಬಿಸಾಬ,ಖಾಸಿಂಸಾಬ, ಹಾಜಿಬಾಬು ಸರಾಫ್ ಸೇರಿದಂತೆ ಇದ್ದರು