ತಾಲೂಕಿನಲ್ಲಿ೧೬೫೦೦ ಕ್ವಿಂಟಲ್ ಜೋಳ:
ಪಡಿತರ ವಿತರಣೆ ಜೋಳದಲ್ಲಿ ಧೂಳು,ಬಡವರಗೋಳು ಕೇಳುವವರು ಯಾರು..?
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ತಾಲೂಕಿನ ಪಡಿತರದಾರರಿಗೆ ವಿತರಣೆ ಮಾಡಲು ತಂದಿರುವ ಜನವರಿ ತಿಂಗಳ ಪಡಿತರ ಜೋಳ ಧೂಳು ಹಿಡಿದು ನುಸಿಹುಳು ತುಂಬಿದ್ದು ಪಡಿತರದಾರರಿಗೆ ಅದನ್ನೆ ವಿತರಣೆ ಮಾಡಲಾಗುತ್ತಿದ್ದು ಹಲವಾರು ನ್ಯಾಯಬೆಲೆ ಅಂಗಡಿಯ ಮುಂದೆ ಗ್ರಾಹಕರು ವಾಗ್ವಾದ ನಡೆಸಿದ ಘಟನೆ ತಾಲೂಕಿನಲ್ಲಿ ಕಂಡು ಬಂದಿದೆ
ತಾಲೂಕಿನ ಪಡಿತರದಾರರಿಗೆ ವಿತರಣೆ ಮಾಡಲು ತಂದಿರುವ ಜನವರಿ ತಿಂಗಳ ಪಡಿತರದ ಜೋಳವು ತಿನ್ನಲು ಯೋಗ್ಯವಾಗಿಲ್ಲ ಅದು ಧೂಳುಯುಕ್ತವಾಗಿದ್ದು ಅಲ್ಲಲ್ಲಿ ಕಸಕಡ್ಡಿ ಮತ್ತು ನುಸಿಹುಳು ಹಿಡಿದಿವೆ ಎಂದು ಪಡಿತರ ಗ್ರಾಹಕರು ದೂರುತಿದ್ದಾರೆ ಬಡವರ ಮಾತನ್ನು ಕಿವಿಗೆ ಹಾಕಿಕೊಳ್ಳದೆ ಅದನ್ನೆ ನ್ಯಾಯಬೆಲೆ ಅಂಗಡಿಯಿAದ ಹಂಚಿಕೆ ಮಾಡಲಾಗುತ್ತಿದೆ
ಜನವರಿ ತಿಂಗಳ ಪಡಿತರ ವಿತರಣೆಗಾಗಿ ತಾಲೂಕಿಗೆ ಸುಮಾರು ೧೬೫೦೦ ಕ್ವಿಂಟಲ್ ಜೋಳ ಬಂದಿದೆ ಎಂದು ಹೇಳಲಾಗುತ್ತಿದ್ದು ಅದು ಸಂಪೂರ್ಣವಾಗಿ ಧೂಳು ಹಿಡಿದಿದ್ದು ನುಸಿಹುಳು ಕಾಣಿಸಿಕೊಂಡಿದೆ ಆದರು ಅದನ್ನೆ ವಿತರಣೆ ಮಾಡಲಾಗುತ್ತಿದೆ ಅನಿವಾರ್ಯವಾಗಿ ಬಡವರು ಅದನ್ನೆ ತೆಗೆದುಕೊಂಡು ಹೋಗುತ್ತಿರುವುದು ಕಂಡು ಬರುತ್ತಿದೆ ಬಡವರ ಪಡಿತರಕ್ಕಾಗಿ ಸರಕಾರ ಸಾಕಷ್ಟು ಹಣ ಖರ್ಚು ಮಾಡುತ್ತಿದೆ ಆದರೆ ಖರೀದಿದಾರರು ಕಡಿಮೆ ಬೆಲೆಗೆ ಇಂತಹ ಕಳಪೆಮಟ್ಟದ ಆಹಾರಧಾನ್ಯಗಳನ್ನು ವಿತರಣೆ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ ಕೂಡಲೇ ಸಂಬAಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸಿ ಉತ್ತಮ ಗುಣಮಟ್ಟದ ಜೋಳ ವಿತರಣೆ ಮಾಡಬಹುದೆ ಕಾದುನೋಡಬೇಕಾಗಿದೆ
ತಾಲೂಕಿನ ಪಡಿತರದಾರರಿಗೆ ವಿತರಣೆ ಮಾಡಲು ಬಂದಿರುವ ಜೋಳ ಎಷ್ಟು ಎಂದು ಸಂಬAಧಿಸಿದ ಆಹಾರ ನಿರೀಕ್ಷಕ ಖಾದರವರಿಗೆ ಕೇಳಿದರೆ ಅವರು ಕೊನೆಯವರೆಗೂ ಸರಿಯಾದ ಮಾಹಿತಿಯನ್ನು ನೀಡಲಿಲ್ಲ ಕೊನೆಗೆ ಕರೆಸ್ವೀಕರಿಸಲಿಲ್ಲ ಹೇಗಿದೆ ನಮ್ಮ ಆಹಾರ ವಿತರಣೆಯ ಮಾಹಿತಿ ಅಲ್ಲವೇ..?