ಮುದಗಲ್:ವಿಂಡ ಪವರ ನಿರ್ಮಾಣ,ಕಾನೂನು ಪಾಲನೆಯಾಗಿಲ್ಲವೆಂದು ಸಾರ್ವಜನಿಕರ ಆರೋಪ, ಕ್ರಮ ಯಾವಾಗ?

Laxman Bariker
ಮುದಗಲ್:ವಿಂಡ ಪವರ ನಿರ್ಮಾಣ,ಕಾನೂನು ಪಾಲನೆಯಾಗಿಲ್ಲವೆಂದು ಸಾರ್ವಜನಿಕರ ಆರೋಪ, ಕ್ರಮ ಯಾವಾಗ?
WhatsApp Group Join Now
Telegram Group Join Now

ಮುದಗಲ್:ವಿಂಡ ಪವರ ನಿರ್ಮಾಣ,ಕಾನೂನು ಪಾಲನೆಯಾಗಿಲ್ಲವೆಂದು ಸಾರ್ವಜನಿಕರ ಆರೋಪ, ಕ್ರಮ ಯಾವಾಗ?
ಕಾಚಾಪೂರ,ಆಮದಿಹಾಳ,ಬನ್ನಿಗೋಳ ಸೇರಿದಂತೆ ಹಲವಾರಕಡೆ ವಿಂಡ್ ಪವರ ಸ್ಥಾಪನೆ

ಕಲ್ಯಾಣ ಕರ್ನಾಟಕ ವಾರ್ತೆ

(ಲಕ್ಷ್ಮಣ ಬಾರಿಕೇರ್)

ಲಿಂಗಸಗೂರು: ವಿಂಡ ಪವರ ಯಂತ್ರಗಳ ಸ್ಥಾಪನೆ ಮಾಡಿ ವಿದ್ಯುತ್ ಉತ್ಪತ್ತಿ ಮಾಡುವುದು ಇತ್ತೀಚೆಗೆ ತಾಲೂಕಿಗೂ ಕಾಲಿಟ್ಟಿದ್ದು ಮುದಗಲ್ ಭಾಗದಲ್ಲಿ ವಿಂಡ ಪವಾರಗಳ ಯಂತ್ರಗಳ ಸ್ಥಾಪನೆ ಕಾರ್ಯ ಭರದಿಂದ ನಡೆದಿದ್ದು ಅವುಗಳ ಸ್ಥಾಪನೆಯಲ್ಲಿ ಕಾನೂನುಗಳು ಪಾಲನೆಯಾಗುತ್ತಿಲ್ಲವೆಂದು ಸಾರ್ವಜನಿಕರ ಆರೋಪವಾಗಿದೆ
ಮುದಗಲ್ ಭಾಗದ ಕಾಚಾಪುರ, ಅಡವಿಬಾವಿ, ಆಮದಿಹಾಳ, ಜಾಂತಾಪೂರ, ಬನ್ನಿಗೋಳ, ಮಾಕಾಪುರ ಆದಾಪುರ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ವಿಂಡ್ ಪವರ ಯಂತ್ರಗಳ ಸ್ಥಾಪನೆ ಭರದಿಂದ ಸಾಗಿದ್ದು ಹಾಗೆ ಸ್ಥಾಪನೆ ಮಾಡುವ ಕಂಪನಿಗಳು ಸರಿಯಾದ ಕಾನೂನುಗಳನ್ನು ಪಾಲನೆ ಮಾಡದೆ ಸ್ಥಾಪನೆ ಮಾಡಲಾಗುತ್ತಿದೆ ಎನ್ನಲಾಗುತ್ತಿದೆ
ಆಯಾ ಗ್ರಾಮಪಂಚಾಯ್ತಿಗಳಿಂದ ನಿರಪೇಕ್ಷಣಾ (ಎನ್ ಓ ಸಿ) ಪಡೆಯುವಲ್ಲಿ ಹಲವಾರು ಗೋಲಮಾಲ್ ನಡೆದಿದೆ ಎನ್ನುವ ಬಲವಾದ ಆರೋಗಳು ಕೇಳಿ ಬರುತ್ತಿವೆ ಒಂದು ವಿಂಡ ಪವರ ಫ್ಯಾನ ಗೆ ಸುಮಾರು ಎಕರೆಯಷ್ಟು ಭೂಮಿ ಭೇಕಾಗಿದ್ದು ಅದನ್ನು ಸರಿಕಾರಿ ನಿಯಮದ ಪ್ರಕಾರವಾಗಿ ಬೆಲೆ ನೀಡಿ ಖರೀದಿಸಬೇಕು ಆದರೆ ಸದರಿ ಕಂಪನಿಯವರು ರೈತರಇಗೆ ಆಸೆ ಆಮಿಷ ತೋರಿಸಿ ಕಡಿಮೆ ಬೆಲೆಗೆ ಲೀಜ್ ಪಡೆಯುವುದು ಲಿಸ್ ಪಡೆದ ಮೇಲೆ ಆ ರೈತರಿಗೆ ಕಂಪನಿಯು ನೀಡಬೇಕಾದ ಸವಲತ್ತುಗಳನ್ನು ಗಾಳಿಗೆ ತೂರುವುದು ಹೀಗೆ ಹತ್ತಾರು ಗೋಲಮಾಲ್ ಗಳು ಸದರಿ ಕಂಪನಿಗಳು ತೆರೆಮರೆಯಲ್ಲಿ ನಡೆಸಿದ್ದು ಕಂಪನಿಗಳ ನಿಯಮಗಳ ಬಗೆಗೆ ಕೇಳಲು ಹೋದವರಿಗೆ ಸರಿಯಾದ ಮಾಹಿತಿ ನೀಡಿದೆ ಕಳುಹಿಸುವುದು ಎಲ್ಲಾ ನಿಯಮ ಪಾಲನೆಯಾಗಿದೆ ಎಂದು ಬರಿಬಾಯಿ ಮಾತಿನಲ್ಲಿ ಹೇಳುವುದು ಸರ್ಟಿಫಿಕೇಟ್ ತೋರಿಸಿ ಎಂದರೆ ಉಸ್ತುವಾರಿಗಳು ಬೇರೆಕಡೆ ಇದ್ದಾರೆ ಅಲ್ಲಿ ಭೇಟಿಯಾಗಿ ನಾವು ಬೇರೆ ರಾಜ್ಯದಿಂದ ಕೆಲಸಕ್ಕೆ ಬಂದಿದ್ದೇವೆ ನಮಗೆ ಏನು ತಿಳಿಯದು ಎಂದು ದೂರುವುದು ಸಾಮಾನ್ಯವಾಗಿದೆ ಆದರೆ ಕಾನೂನು ಪಾಲನೆಯಾಗುತ್ತಿಲ್ಲವೆಂದು ದಾಖಲೆಗಳನ್ನು ಹಿಡಿದು ಕುಳಿತವರಿಗೆ ಕೆಲಬೆದರಿಕೆಗಳು ಹಾಕುವುದು ಮಣಿಯದಾದಾಗ ಸಂದಾನದ ಮಾತುಕತೆಗಳು ಕೇಳಿಬಂದಿವೆ
ಅದೇನೆ ಸಂದಾನಗಳು ಇರಲಿಬಿಡಲಿ ಆದರೆ ಅಲ್ಲಿ ನಿಜ ರೈತಫಲಾನುಭವಿಗಳಿಗೆ ಭೂಮಿಕಳೆದುಕೊಂಡವರಿಗೆ ಸರಕಾರದ ನಿಯಮದ ಪ್ರಕಾರ ಕಂಪನಿಯಿಮದ ಬರಬೇಕಾದ ಸವಲತ್ತುಗಳನ್ನು ಮಾಡಿಕೊಂಡುವುದು ಕಂಪನಿಯ ಕೆಲಸವಾಗಿದೆ ಆದರೆ ಇಲ್ಲಿ ಇವರು ಕೊಡುವ ಅಲ್ಪಸ್ವಲ್ಪ ಹಣವೇ ರೈತರಿಗೆ ತಲುಪಿಸಿ ನಾವು ಎಲ್ಲಾ ನಿಡಿದ್ದೇವೆಂದು ಕೈತೊಳೆದುಕೊಂಡು ಬಿಡುತ್ತಾರೆ
ಎನ್ ಎ ದಲ್ಲಿ ಉದ್ದೇಶ ತಿಳಿಸದೆ ಯಂತ್ರ ಸ್ಥಾಪನೆ: ರೈತರಿಂದ ಕಂಪನಿಗಳು ಭೂಮಿಯನ್ನು ಖರೀದಿಸಿದ ನಂತರ ಅದನ್ನು ಕೃಷಿಯೇತರ ಚಟುವಟಿಕೆಗಾಗಿ ಎಂದು ಬದಲಾಯಿಸಬೇಕು ಅಲ್ಲದೆ ಅದರಲ್ಲಿ ಉದೇಶವನ್ನು ತಿಳಿಸಬೇಕು ಆದರೆ ಇವರು ಅದಾವುದನ್ನು ಮಾಡದೆ ಹಾಗೆ ಸ್ಥಾಪನೆ ಮಾಡಿದ್ದಾರೆ ಎನ್ನುವ ಬಲವಾದ ಕೂಗು ಕೇಳಿಬರುತ್ತಿವೆ
ಒಂದು ವಿಂಡ್ ಪವರ ಸ್ಥಾಪನೆಯಿಂದ ಹೊಲಕಳೆದುಕೊಂಡ ರೈತನಿಗೆ ಅಷ್ಟೆ ಅಲ್ಲದೆ ಅದರ ಅಕ್ಕಪಕ್ಕದ ಹೊಲದ ರೈತರ ಬೆಲೆಗಳಿಗೂ ಹಾನಿಯಾಗುತ್ತದೆ ಅಲ್ಲಿ ಸರಿಯಾದ ಫಸಲು ಬರುವುದು ಇಲ್ಲ ಮತ್ತು ಆಯಾ ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ಸದರಿ ಕಂಪನಿಯಿಂದ ದಾರಿ ಇತ್ಯಾದಿ ಸದುಪಯೋಗದ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವುದು ನಿಯಮವಾಗಿದೆ ಆದರೆ ಇಲ್ಲಿ ಅದಾವುದು ಪಾಲನೆ ಮಾಡದೆ ನಿಯಮಬಾಹಿರವಾಗಿ ವಿಂಡ್ ಪವರ ಯಂತ್ರಗಳನ್ನು ಸ್ಥಾಪನೆ ಮಾಡಲಾಗುತ್ತಿದೆ ಇದರಿಂದ ಆಯಾ ಗ್ರಾಮಪಂಚಾಯ್ತಿಗಳಿಗೆ ಆದಾಯ ಕುಂಟಿತವಾಗುವುದು ಒಂದೆಡೆಯಾದರೆ ಸರಕಾರಕ್ಕೆ ಬರಬೇಕಾದ ಆದಾಯಕ್ಕೂ ತೊಂದರೆ ಮೇಲು ನೋಟಕ್ಕೆ ಕಂಡುಬರುತ್ತಿದೆ ಕೂಡಲೆ ಸಂಬಂಧಿಸಿದ ಇಲಾಖೆ ಇವರ ಮೇಲೆ ಸೂಕ್ತಕ್ರಮ ಜರುಗಿಸಿ ಕ್ರಮಕೈಗೊಳ್ಳಬಹುದೆ ಕಾದುನೋಡೋಣ?

WhatsApp Group Join Now
Telegram Group Join Now
Share This Article