ಖಾಸಗಿ ಆಸ್ಪತ್ರೆಗಳು ಕೆಪಿಎಂಇ ನಿಯಮದಡಿ ನೋಂದಣಿ ಆಗಿದ್ದೆಷ್ಟು? ಪಾಲನೆಯಾಗಿದ್ದೆಷ್ಟು? ಕ್ರಮ ಯಾವಾಗ?
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ತಾಲೂಕಿನಲ್ಲಿ ನಡೆಯುತ್ತಿರುವ ವಿವಿಧ ಖಾಸಗಿ ಆಸ್ಪತ್ರೆಗಳು,ಡೈಯೋಗ್ನಾಸ್ಟಿಕ್ ಸೆಂಟರ್ ಗಳು ಸ್ಕಾö್ಯನಿಂಗ್ ಸೆಂಟರಗಳು ಕೆಪಿಎಂಇ ನಿಯಮದಡಿ ನೋಂದಣಿ ಆಗಿದ್ದೆಷ್ಟು,ಪಾಲನೆ ಎಷ್ಟು ಎಂದು ನೋಡುವುದಾದರೆ ಬೆಚ್ಚಿಬೀಳಿಸುವ ಆತಂಕ ಕಂಡು ಬರುತ್ತದೆ
ಕರ್ನಾಟಕ ಖಾಸಗಿ ವೈದ್ಯಕೀಯ ಸ್ಥಾಪನೆ ಕಾಯ್ದೆ ೨೦೦೭ರ ಅಡಿಯಲ್ಲಿ ನೋಂದಣಿ ಮಾಡಿಕೊಂಡು ಅದರಂತೆ ತಮ್ಮಲ್ಲಿ ದೊರೆಯುವ ಚಿಕಿತ್ಸೆ,ಸಂದರ್ಶನ ಶುಲ್ಕ, ತಪಾಸಣೆ ಶುಲ್ಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಮಾಲೀಕರು,ವ್ಯವಸ್ಥಾಪಕರ ಹೆಸರು ಪ್ರದರ್ಶನ, ಕಪಿಎಂಇ ನೋಂದಣಿ ಪ್ರಮಾಣ ಪತ್ರ ಸಾರ್ವಜನಿಕರ ಮಾಹಿತಿಗಾಗಿ ಪ್ರದರ್ಶಿಸಬೇಕು
ಅಲ್ಲದೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಎಲ್ಲಾ ಖಾಸಗಿ ವೈದ್ಯಕೀಯ ಸೌಲಭ್ಯಗಳು, ತಮ್ಮ ಸ್ಥಳದ ಮುಂದೆ ಪ್ರತ್ಯೇಕ ಫಲಕವನ್ನು ಸ್ಥಾಪಿಸಲು ನಿರ್ದೇಶಿಸಲು ಸೂಚಿಸಿದೆ
ಆದರೆ ತಾಲೂಕಿನಲ್ಲಿ ಸದರಿ ನಿಯಮವನ್ನು ಅದೆಷ್ಟು ಖಾಸಗಿ ಆಸ್ಪತ್ರೆಗಳು ಪಾಲನೆ ಮಾಡುತ್ತಿವೆ ಕೆಪಿಎಂಇ ಅಡಿ ನೋಂದಣಿಯಾದವೆಷ್ಟು ಎನ್ನುವುದನ್ನು ತಿಳಿಯಲು ಮಾಹಿತಿ ಹಕ್ಕಿನಡಿ ಅಮರೇಶ ಗೊಸ್ಲೆ ಎನ್ನುವವರು ಆರೋಗ್ಯ ಇಲಾಖೆಗೆ ಅರ್ಜಿ ಸಲ್ಲಿಸಿದಾಗ ತಿಳಿದುಬಂದಿರುವುದೇನAದರೆ ಕೆಲವೇ ಕೆಲ ಆಸ್ಪತ್ರೆಗಳು ಮಾತ್ರ ನೋಂದಣಿಯಾಗಿದ್ದು ಇನ್ನು ಸಾಕಷ್ಟು ಪ್ರಮಾಣದಲ್ಲಿ ನೊಂದಣಿಯಾಗಿಲ್ಲ ಮತ್ತು ತಾಲೂಕಾ ಆರೋಗ್ಯ ಅಧಿಕಾರಿ ಅತ್ತ ಗಮನಹರಿಸಿಲ್ಲವೋ ಅಥವ ಗಮನಕ್ಕೆ ಇದ್ದರು ಮೌನವಾಗಿರುವರೋ ತಿಳಿಯದಾಗಿದೆ
ನಕಲಿ ವೈದ್ಯರನ್ನು ತಡೆಗಟ್ಟುವಲ್ಲಿ ಈ ನಿಯಮ ಹೆಚ್ಚು ಉಪಯುಕ್ತ ಎನ್ನುವ ಕಾರಣಕ್ಕೆ ಜಾರಿ ಮಾಡಲಾಗಿದ್ದು ಹಲವಾರು ಕಡೆಯಲ್ಲಿ ಪಾಲನೆಯಾಗುತ್ತಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ
ತಾಲೂಕಿನಲ್ಲಿ ಕೆಪಿಎಂಇ ಅಡಿಯಲ್ಲಿ ನೋಂದಣಿಯಾಗಿರುವ ಆಸ್ಪತ್ರೆಗಳ ಬಗೆಗೆ ತಾಲೂಕಾ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದಂತೆ ತಾಲೂಕಿನ ಮೈಕ್ರೋ ಕೇರ್ ಲ್ಯಾಬ್ ಡೈಗ್ನೋಸ್ಟಿಕ್ ಲಿಂಗಸಗೂರು,ಸುರಕ್ಷಾ ಹೀ ಟಚ್ ಡೈಗ್ನೋಸ್ಟಿಕ್ ಸೆಂಟರ್ ಲಿಂಗಸಗೂರು, ಕಿರಣ ಎಕ್ಸರೆ ಯುನಿಟ್ ಹಟ್ಟಿ, ಕಾವೇರಿ ಡೈಯೋಗ್ನೆöÊಸ್ಟಿಕ್ ಸೆಂಟರ್ ಲಿಂಗಸಗೂರು, ಶಿವಾ ಡೈಗ್ನೊಸ್ಟಿಕ್ ಸೆಂಟರ್ ಲಿಂಗಸಗೂರು, ಅನ್ನದಾನಗೌಡ ಬಯ್ಯಾಪುರ ಸ್ಪೇಷಾಲಿಸ್ಟ ಕ್ಲಿನಿಕ್ ಮತ್ತು ಸ್ಕಾö್ಯನಿಂಗ್ ಸೆಮಟರ್ ಮುದಗಲ್, ಶ್ರೀ ಅಮರೇಶ್ವರ ಕ್ಲಿನಿಕ್ ಮತ್ತು ಗಾಯತ್ರಿ ಸ್ಕಾö್ಯನಿಂಗ್ ಸೆಮಟರ್ ಲಿಂಗಸಗೂರು, ಅನ್ನದಾನಗೌಡ ಬಯ್ಯಾಪುರ ಸ್ಪೇಷಾಲಿಸ್ಟ ಕ್ಲಿನಿಕ್ ಮತ್ತು ಸ್ಕಾö್ಯನಿಂಗ್ ಸೆಂಟರ್ ಮುದಗಲ್, ಮನೋಜ್ ಕ್ಲಿನಿಕ್ ಹಟ್ಟಿ, ಶ್ರೀ ಬಸವೇಶ್ವರ ಡೆಂಟಲ್ ಕ್ಲಿನಿಕ್ ಲಿಂಗಸಗೂರು ಇವರು ಮಾತ್ರ ಕೆಪಿಎಂಇ ಅಡಿಯಲ್ಲಿ ನೋಂದಣಿಯಾಗಿವೆ ಎಂದು ತಾಲೂಕಾ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ
ಹಾಗಾದರೆ ಉಳಿದ ಖಾಸಗಿ ವೈದ್ಯಕೀಯ ಸೇವೆ ನೀಡುವ ಆಸ್ಪತ್ರೆಗಳು ಲ್ಯಾಬ್ ಗಳು ಸ್ಕಾö್ಯನಿಂಗ್ ಸೆಂಟರ್ ಗಳು ನೋಂದಣಿಯಾಗದೆ ಹಾಗೆಯೆ ಚಿಕಿತ್ಸೆ ನೀಡುತ್ತಿವೆಯಾ ಎನ್ನುವ ಪ್ರಶ್ನೆಗಳು ಸಾರ್ವಜನಿಕರು ಕೇಳುವಂತಾಗಿದ್ದು ಕ್ರಮ ಯಾವಾಗ ಎನ್ನಲಾಗುತ್ತಿದೆ
ಅಲ್ಲದೆ ತಾಲೂಕಿನಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ ಕೆಲಸಲ ಜೀವಹಾನಿಯಾಗಿರುವ ಉದಾಹರಣೆಗಳು ಇವೆ ಇದೆಲ್ಲವನ್ನು ಗಮನಿಸುವುದಾದರು ಯಾವಾಗ ? ನಕಲಿಗಳನ್ನು ತಡೆಯುವುದಾದರು ಯಾವಾಗ?
ತಾಲೂಕಾ ವೈದ್ಯಾಧಿಕಾರಿಮೊಬೈಲ್ ಸ್ವಿಚ್ ಆಫ್: ಮಾಹಿತಿ ಪಡೆಯಬೇಕೆಂದು ತಾಲೂಕಾ ವೈದ್ಯಾಧಿಕಾರಿಗೆ ಕರೆ ಮಾಡಿದರೆ ಸರಕಾರಿ ನಂಬರ್ ಸೇವೆಗಳು ಲಭ್ಯವಿಲ್ಲವೆಂದರೆ ಖಾಸಗಿ ನಂಬರ್ ಬಂದ್ ಆಗಿತ್ತು