ಲಿಂಗಸಗೂರು:ಮೈಕ್ರೋಫೈನಾನ್ಸ್ ಕಿರುಕುಳಕ್ಕೆ ಅಂಗನವಾಡಿ ಶಿಕ್ಷಕಿ ಅಮರಮ್ಮ ಬಲಿ, ಕ್ರಮಯಾವಾಗ?
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ಮೈಕ್ರೋಫೈನಾನ್ಸ್ ಕಿರುಕುಳದ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚುತ್ತಲೆ ಇವೆ ಅಂತಹದ್ದೆ ಒಂದು ಘಟನೆ ಪಟ್ಟಣದಲ್ಲಿ ನಡೆದಿದ್ದು ಫೈನಾನ್ಸ್ ನವರ ಕಿರುಕುಳ ತಾಳದೆ ಜೀವಬಿಟ್ಟ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ
ಪಟ್ಟಣದ ಅಮರಮಮ್ಮ ಎನ್ನುವ ಮಹಿಳೆ ತಾಲೂಕಿನ ಪೂಲಬಾವಿ ಗ್ರಾಮದ ೧ನೇ ಅಂಗನವಾಡಿ ಕೇಂದ್ರದಲ್ಲಿ ಅಂಗನವಾಡಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಳು ಈಕೆ ಬೇರೆ ಬೇರೆ ಮೈಕ್ರೋಫೈನಾನ್ಸ ಗಳಲ್ಲಿ ತನ್ನ ಸಂಬAಧಿಕರ ಹಾಗೂ ಸ್ನೇಹಿತರ ಹೆಸರಿನಲ್ಲಿ ಸಾಲಪಡೆದಿದ್ದಳು ಎಂದು ಹೇಳಲಾಗುತ್ತಿದ್ದು ಪಟ್ಟಣದಲಿರುವ ಹಿಂದುಸ್ತಾನ ಬ್ಯಾಂಕ್,ಸಮಸ್ತ ಬ್ಯಾಂಕ್ ಹಾಗೂ ಚೈತನ್ಯ ಬ್ಯಾಂಕ್ ಹೀಗೆ ಮೂರು ಬ್ಯಾಂಕಿನವರು ಮನೆಗೆ ಬಂದು ಕೂಡುತ್ತಿದ್ದರು ಎನ್ನಲಾಗುತ್ತಿದೆ
ಸದರಿ ಬ್ಯಾಂಕಿನವರು ಆಗಾಗ್ಗೆ ಮನೆಗೆ ಬರುತಿದ್ದರು ಕೆಲಸಲ ಈಕೆಯ ಮನೆಯಲ್ಲಿ ರಾತ್ರಿ ಹತ್ತು ಹನ್ನೊಂದು ಗಂಟೆಯವರೆಗೂ ಕೂಡುತ್ತಿದ್ದರು ಇದನ್ನು ಕಂಡAತ ಕೆಲವರು ರಾತ್ರಿಯಲ್ಲಿ ಮಹಿಳೆಯರ ಮನೆಯಲ್ಲಿ ಕೂಡುವುದು ಎಷ್ಟು ಸರಿ ಎಂದು ತಿಳಿಹೇಳಿ ಕಳುಹಿಸಿದ ಸಾಕಷ್ಟು ಘಟನೆಗಳು ನಡೆದಿವೆ ಎಂದು ಹೇಳಲಾಗುತ್ತಿದೆ
ಅದರಂತೆ ನವಂಬರ ೧ ೨೦೨೪ರಂದು ಅಮರಮ್ಮನ ಮನೆಗೆ ಬ್ಯಾಂಕಿನವರು ಬಂದಿದ್ದಾರೆ ಅವರನ್ನು ಮನೆಯಲ್ಲಿ ಕೂಡಿಸಿ ಸಾಲಪಡೆದ ಗುಂಪಿನ ಮಹಿಳೆಯರಲ್ಲಿ ಹಣ ತೆಗೆದುಕೊಂಡು ಬರುತ್ತೇನೆ ಎಂದು ಹೊರಹೋದಾಕೆ ತಿರುಗಿ ಬರಲಿಲ್ಲವೆಂದು ಆಕೆಯ ಸಹೋದರಿ ಮಹಾದೇವಿ ಹೇಳುತ್ತಾಳೆ
ಅಮರಮ್ಮನ ಕೊನೆಯ ಆಡಿಯೋ ಕಾಲ್ ಪ್ರಕರಣಕ್ಕೆ ಪುಷ್ಟಿ ನೀಡುತ್ತದೆ:ಹೌದು ಅಂಗನವಾಡಿ ಶಿಕ್ಷಕಿ ಅಮರಮ್ಮ ಹಲವಾರು ಮೈಕ್ರೋಬ್ಯಾಂಕಿನಲ್ಲಿ ಸಾಲಪಡೆದಿದ್ದಳು ಮತ್ತು ಅದರಿಂದ ರೋಷಿಹೋಗಿದ್ದಳು ಎನ್ನುವುದಕ್ಕೆ ಆಕೆಯ ಕೊನೆಯ ಆಡಿಯೋ ಕಾಲ್ ಸಾಕ್ಷಿಕರಿಸುತ್ತದೆ ತಾನು ಕೆಲಸ ಮಾಡುವ ಪೂಲಬಾವಿ ಅಂಗನವಾಡಿಯ ಸಹಾಯಕಿಯ ಮಗನಿಗೆ ಕಾಲ್ ಮಾಡಿದ ಅಮರಮ್ಮ ತಾನು ಸಾಲಪಡೆದಿದ್ದು ಸಾಲಕೇಳಲು ಬ್ಯಾಂಕಿನವರು ಮನೆಗೆ ಬಂದಿರುವುದು ತನ್ನ ಮಾನ ಎಲ್ಲಿ ಹರಾಜಾಗುತ್ತದೆಯೋ ಎನ್ನುವ ಭಯದಲ್ಲಿ ಮಾತನಾಡುತ್ತಾಳೆ ಅಲ್ಲದೆ ತನಗೆ ಬಹಳ ಗಂಭೀರವಾದ ಪರಸ್ಥಿತಿ ಬಂದಿದೆ ನಾನು ಹೇಗೆ ಮುಖತೋರಿಸಲಿ ಎನ್ನುವ ಮಾತನಾಡುತ್ತಾಳೆ ಅದಕ್ಕೆ ಆ ವ್ಯಕ್ತಿಯು ನನ್ನ ಗಾಡಿಯನ್ನು ಒತ್ತೆ ಇಟ್ಟು ಹಣ ಜೋಡಿಸುವೆ ಎಂಬ ಭರವಸೆಯನ್ನು ತುಂಬುತ್ತಾನೆ ಆದರೆ ಅಮರಮ್ಮ ಅದಾವುದನ್ನು ಕೇಳದೆ ನಾನು ಫೋನ್ ಸ್ವಿಚ್ ಆಫ್ ಮಾಡುವೆ ಎನ್ನುತ್ತಾಳೆ ಅದೆಕೊನೆ ಅಮರಮ್ಮ ಬದುಕಲಿಲ್ಲ ಹಾಗೆ ಒತ್ತಡ ಹಾಕಿದ ಫೈನಾನ್ಸ್ ಗಳ ಮೇಲೆ ಅಧಿಕಾರಿಗಳು ಕ್ರಮಜರುಗಿಸಿ ಕಿರುಕುಳಕ್ಕೆ ಬಲಿಯಾದ ಅಮರಮ್ಮನಿಗೆ ನ್ಯಾಯಕೊಡಬಹುದೆ?
ಪಟ್ಟಣದಲ್ಲಿ ನೂರಾರು ಮೈಕ್ರೋಫೈನಾನ್ಸ್ ಕಂಪನಿಗಳು ತಲೆ ಎತ್ತಿದ್ದು ಹಲವಾರು ಗ್ರಾಹಕರಿಗೆ ನಿತ್ಯವು ಕಿರಿಕಿರಿ ಇರುತ್ತದೆ ಇವುಗಳಿಗೆ ಕಡಿವಾಣ ಹಾಕುವುದಾದರು ಎಂದು?