ಪತ್ರಕರ್ತರನ್ನು ದೂರವಿಟ್ಟು ಮಕ್ಕಳ ಹಕ್ಕುಗಳ ಆಯೋಗ ಗೌಪ್ಯಸಭೆ ವಿಶೇಷವೇನು?
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸುಗೂರ.:ತಾಲೂಕಿನ ಅಧಿಕಾರಿರಿಗಳ ಬೇಜವಾಬ್ದಾರಿಯಿಂದ ತಾಲೂಕು ಪಂಚಾಯತ ಸಭಾಂಗಣದಲ್ಲಿ ಜರುಗಿದ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧಿಕಾರಿಗಳ ಸಭೆಗೆ ಸ್ಥಳೀಯ ರ‍್ರಕರ್ತರನ್ನು ಮಾಧ್ಯಮದವರನ್ನು ಆಹ್ವಾನಿಸದೆ ದೂರವಿಟ್ಟು ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳ ಗೌಪ್ಯ ಸಭೆ ನಡೆಸಿದ್ದು ವಿಶೇಷವಾಗಿತ್ತು
ತಾಲೂಕು ಪಂಚಾಯತ ಹಾಗೂ ಸಿಡಿಪಿಒ ತಾಲೂಕು ಅಡಳಿತ ಸಹಯೋಗದಲ್ಲಿ ತಾಲೂಕು ಪಂಚಾಯತ ಸಭಾಂಗಣದಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸಭೆ ಆಯೋಜಿಸಲಾಗಿತ್ತು ಮಕ್ಕಳ ಹಕ್ಕುಗಳ ಆಯೋಗದ ಸದ್ಯಸರಾದ ವೆಂಕಟೇಶ ಹಾಗೂ ಡಾ.ತಿಪ್ಪೆಸ್ವಾಮಿ ಭಾಗವಹಿಸಿ ಸಭೆಗೆ ಪರ್ತ್ರಕರ್ತರನ್ನು ಆಹ್ವಾನಿಸಲು ತಿಳಸಲಾಗಿತ್ತು. ಆದರೆ ಸಭೆಗೆ ಮಾತ್ರ ಪತ್ರಕರ್ತರನ್ನು ಆಹ್ವನಿಸದಿರುವುದು ಸ್ಥಳಿಯ ಅಧಿಕಾರಿಗಳ ಕೈವಾಡವೊ ಅಥವ ತನಿಖಾಧಿಕಾರಿಗಳ ಮುಂದೆ ತಮ್ಮ ಇಲಾಖೆಗಳ ಬಂಡವಾಳ ಹೊರಬರಬಹುದೆಂಬ ಭಯವೊ ತಿಳಿಯದಾಗಿದೆ
ಸಭೆಯಲ್ಲಿ ಸದ್ಯಸ ವೆಂಕಟೇಶ ಮಾತನಾಡಿ ಮಕ್ಕಳ ಹಕ್ಕುಗಳ ರಕ್ಷಣಾ ವಿಷಯದಲ್ಲಿ ಅತ್ಯಂತ ಬದ್ದತೆಯಿಂದ ಕೆಲಸ ಮಾಡಬೇಕು ಬಾಲ್ಯ ವಿವಾಹ ಬಾಲ ಕಾರ್ಮಿಕ ಪದ್ದತಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಸಿ ಮಕ್ಕಳ ಹಕ್ಕುಗಳನ್ನು ಎತ್ತಿಹಿಡಿಯುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು ಆರೋಗ್ಯ ಇಲಾಖೆಗೆ ಸಂಭಂದಿಸಿದಂತೆ ಮಕ್ಕಳ ಅಪೌಷ್ಠಿಕತತೆ ನಿವಾರಣೆಗೆ ಅಂಗನವಾಡಿ ಮತ್ತು ಶಾಲೆಗಳಲ್ಲಿ ದಾಖಲಾಗಿರುವ ಮಕ್ಕಳನ್ನು ಪ್ರತಿ ತಿಂಗಳು ಆರೋಗ್ಯ ತಪಾಸಣೆ ಮಾಡಬೇಕು ತೀವ್ರ ಅಪೌಷ್ಠಿಕತೆ ಮಕ್ಕಳನ್ನು ಎನ್.ಆರ್.ಸಿ ಕೇಂದ್ರಗಳಿಗೆ ದಾಖಲಿಸಿ ಸುಧಾರಣೆ ಮಾಡಲು ಕ್ರಮ ಕೈಗೂಳ್ಳುವಂತೆ ತಾಲೂಕು ಆರೋಗ್ಯ ಅಧಿಕಾರಿ ಮತ್ತು ಸಿಡಿಪಿಓ ರವರಿಗೆ ನಿರ್ದೇಶನ ನೀಡಿದರು.
ಅಂಗನವಾಡಿ ಕೇಂದ್ರಗಳಿಗೆ ಸರಿಯಾಗ ಪ್ರತಿ ತಿಂಗಳು ಆಹಾರ ಪೂರೈಸಬೇಕು ಕೇಂದ್ರಗಳು ಹಾಗೂ ಬಿಸಿಎಂ, ಸಮಾಜ ಕಲ್ಯಾಣ ಅಲ್ಪಸಂಖ್ಯಾಂತ ವಸತಿ ನಿಲಯ ಸ್ವಚ್ಛತೆ ಕಾಪಾಡಲು ಸಂಭಂದಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಗೆ ತಾಲೂಕು ಮಟ್ಟದ ಅಧಿಕಾರಿಗಳ ಭಾಗವಹಿಸದೆ ತಮ್ಮ ಸಹಾಯಕರನ್ನು ಕಳಿಸಿರುವುದು ಅಥವ ವಾರ್ಡನ್ ಸ್ಥಳದಲ್ಲೆ ಇದ್ದರು ಬಂದಿಲ್ಲವೆಂದು ಹೇಳುವುದು ವಸತಿ ನಿಲಯಗಳ ವ್ಯವಸ್ಥೆ ಕಂಡು ತರಾಟೆಗೆ ತೆಗೆದುಕೊಂಡಾಗ ಸಮಾಧಾನಿಸುವುದು ಸೇರಿದಂತೆ ನಡೆದವು ಎಂದು ಹೇಳಲಾಗುತ್ತಿದ್ದು ಇಲ್ಲಿಯ ವ್ಯವಸ್ಥೆಯ ಬಗೆಗೆ ಆಯೋಗ ಅಸಮಾಧಾನ ವ್ಯಕ್ತಪಡಿಸಿದರು. ಆಯೋಗ್ಯದ ಸದ್ಯಸ ಡಾ.ತಿಪ್ಪೆಸ್ವಾಮಿ ಮಾತನಾಡಿ ಸರಕಾರದ ಮಾರ್ಗಸೂಚಿ ಹಾಗೂ ಕ್ರಮಗಳ ಬಗ್ಗೆ ವಿವರಿಸಿದರು.
ಸಂದರ್ಭದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಅಮರೇಶ ಹಿರಿಯ ಸಹಾಯಕ ನಿರ್ದೇಶಕ ಮುದುಕಪ್ಪ, ಮಕ್ಕಳಾ ಸಾಂಸ್ಥನಿಕ ರಕ್ಷಣಾಧಿಕಾರಿ ಹನುಮೇಶ, ಗ್ರೇಡ್-೨ ತಹಶಿಲ್ದಾರ ಬಸವರಾಜ ಝಲಕಿಮಠ, ಕ್ಷೇತ್ರ ಶಿಕ್ಷಣಾಧಿಕಾರಿ ಹುಂಬಣ ರಾಥೋಡ, ಸಿಪಿಐ ಪುಂಡಲಿ ಪಟಾತರ್, ಶಿಶು ಅಭಿವೃದ್ದಿ ಅಧಿಕಾರಿ ಗೋಕುಲ, ಆರೋಗ್ಯ ಇಲಾಖೆ, ಗ್ರಾಮ ಪಂಚಾಯ ಅಭಿವೃದ್ದಿ ಅಧಿಕಾರಿಗಳು, ಬಿಸಿಎಂ ಅಧಿಕಾರಿ ರಮೇಶ ರಾಥೋಡ, ಪುರಸಭೆ ವ್ಯವಸ್ಥಾಪಕ ಹನುಮಂತ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದರು.