ಕನ್ನಡದಲ್ಲಿ ಸಹಿ ಸಂಗ್ರಹ ಜಾಥಾ ಆಗಮನ, ಸ್ವಾಗತ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು: ೮೭ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕನ್ನಡದಲಿ ಸಹಿ ಸಂಗ್ರಹ ಅಭಿಯಾನ ಜಾಥಾ ಪಟ್ಟಣಕೆ ಆಗಮಿಸಿದಾಗ ನಿವೃತ್ತ ತಹಶಿಲ್ದಾರ ಹಾಗೂ ಬಸಶ್ರೀ ಜನಕಲ್ಯಾಣ ಹಾಗೂ ಶಿಕ್ಷಣ ಗ್ರಾಮೀಣಾಭಿವೃದ್ಧಿ ಟ್ರಸ್ಟ ಗೌರವಾಧ್ಯಕ್ಷರಾದ ಅಮರೇಶಪ್ಪ ಹೂನೂನು ಕಲ್ಯಾಣ ಕರ್ನಾಟಕ ಕನ್ನಡ ಪತ್ರಿಕೆ ನೀಡುವ ಮೂಲಕ ಸ್ವಾಗತಿಸಿದರು
ನಂತರ ಜಾತಾದ ಸಂಚಾಲಕರಾದ ಡಾ ಸಿತಿಮಾ ವಜ್ಜಲ್ ಮಾತನಾಡಿ ನಮ್ಮ ಜಾತಾ ಇಲಕಲ್ ನಿಂದ ಪ್ರಾರಂಭವಾಗಿ ಹುನಗುಂದ, ಬಾಗಲಕೋಟ, ವಿಜಯಪುರ,ಯಾದಗಿರಿ,ಶಹಪುರ, ಸುರಪುರ, ಹಟ್ಟಿ,ಮಾರ್ಗವಾಗಿ ಲಿಂಗಸಗೂರು ತಲುಪಿದೆ ಮಸ್ಕಿ, ಕಾರಟಗಿ,ಗಂಗಾವತಿ ಹಂಪಿ ಕ,ವಿ,ವಿ,ಬಳ್ಳಾರಿ ಮಾರ್ಗವಾಗಿ ಮಂಡ್ಯ ತಲುಪಿ ಸಾಹಿತ್ಯ ಸಮ್ಮೇಳನದಲಿ ಗಣ್ಯರ ಸಮ್ಮುಖದಲ್ಲಿ ಸಹಿಸಂಗ್ರಹ ಧ್ವಜ ನೀಡಲಾಗುವುದು ಎಂದರು
ಡಾ ಅಮರೇಶ ಕುಂಬಾರ, ನಮ್ಮ ಕರವೆ ಮಹಿಳಾ ತಾಲೂಕಾ ಘಟಕದ ಅಧ್ಯಕ್ಷೆ ಜ್ಯೋತಿ ಸುಂಕದ ಕನ್ನದ ಕೆಲಸಕ್ಕೆ ಸಹಾಯ ಸಹಕಾರ ನೀಡುವುದಾಗಿ ಹೇಳಿದರು
ಸಹಿ ಸಂಗ್ರಹದ ಮಾಹಿತಿ ಕರಪತ್ರ ಹಿಡಿದು ಜಾಗೃತಿ ಮೂಡಿಸಲಾಯಿತು
ಈ ಸಂದರ್ಭದಲ್ಲಿ ಮಹಿಳಾ ಒಕ್ಕೂಟದ ತಾಲೂಕಾಧ್ಯಕ್ಷೆ ಶರಣಮ್ಮ ಹೂನೂರು, ಕವಿ ವಿರುಪಾಕ್ಷಪ್ಪ ಹೂಗಾರ, ಲಕ್ಷ್ಮಣ ಬಾರಿಕೇರ್, ಅಮರಯ್ಯ ಘಂಟಿ, ರಮೇಶ ನಾಯ್ಕ, ಹನಮಂತ ಬಡಿಗೇರ, ಸೇರಿದಂತೆ ಇದ್ದರು