ಈಚನಾಳ:ಇಲ್ಲದ ವಾಲಿಬಾಲ್ ಗ್ರೌಂಡಗೆ ನಾಲ್ಕಲಕ್ಷಖರ್ಚು,ಅಧಿಕಾರಿ ಭೇಟಿ ಪರಿಶೀಲನೆ, ::ವಾಲಿಬಾಲ್ ಗ್ರೌಂಡ ನಿರ್ಮಾಣ ಮಾಡಿ ಉಳಿದಹಣ ಸಿಸಿರಸ್ತೆ ಮಾಡಲಾಗಿದೆ-ದೇಸಾಯಿ

Laxman Bariker
ಈಚನಾಳ:ಇಲ್ಲದ ವಾಲಿಬಾಲ್ ಗ್ರೌಂಡಗೆ ನಾಲ್ಕಲಕ್ಷಖರ್ಚು,ಅಧಿಕಾರಿ ಭೇಟಿ ಪರಿಶೀಲನೆ, ::ವಾಲಿಬಾಲ್ ಗ್ರೌಂಡ ನಿರ್ಮಾಣ ಮಾಡಿ ಉಳಿದಹಣ ಸಿಸಿರಸ್ತೆ ಮಾಡಲಾಗಿದೆ-ದೇಸಾಯಿ
WhatsApp Group Join Now
Telegram Group Join Now

ಈಚನಾಳ:ಇಲ್ಲದ ವಾಲಿಬಾಲ್ ಗ್ರೌಂಡಗೆ ನಾಲ್ಕಲಕ್ಷಖರ್ಚು,ಅಧಿಕಾರಿ ಭೇಟಿ ಪರಿಶೀಲನೆ,

ವಾಲಿಬಾಲ್ ಗ್ರೌಂಡ ನಿರ್ಮಾಣ ಮಾಡಿ ಉಳಿದಹಣ ಸಿಸಿರಸ್ತೆ ಮಾಡಲಾಗಿದೆ-ದೇಸಾಯಿ

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು:ತಾಲೂಕಿನ ಈಚನಾಳ ಗ್ರಾಮದ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ಉ,ಖಾ ಯೋಜನೆಯಲ್ಲಿ ವಾಲಿಬಾಲ್ ಗ್ರೌಂಡ ನಿರ್ಮಾಣ ಮಾಡಲಾಗಿದೆ ಎಂದು ಸುದ್ದಿ ಬಂದ ಹಿನ್ನೆಲೆಯಲ್ಲಿ ಉ,ಖಾ ಯೋಜನೆ ಅಧಿಕಾರಿ ವೆಂಕಟೇಶ ದೇಸಾಯಿ ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದ ಘಟನೆ ಜರುಗಿದೆ
ತಾಲೂಕಿನ ಈಚನಾಳ ಗ್ರಾಮದಲ್ಲಿ ೨೦೨೨-೨೩ನೇ ಸಾಲಿನಲ್ಲಿ ಉ,ಖಾ ಯೋಜನೆಯಲ್ಲಿ ೪ಲಕ್ಷ ಹಣದಲ್ಲಿ ಬಾಲಕಿಯರ ವಸತಿ ನಿಲಯದಲ್ಲಿ ವಾಲಿಬಾಲ್ ಗ್ರೌಂಡ ನಿರ್ಮಾಣ ಮಾಡಲಾಗಿದೆ ಎಂದು ದಾಖಲೆಯಲ್ಲಿ ಇದ್ದು ಆದರೆ ವಾಸ್ತವದಲ್ಲಿ ವಾಲಿಬಾಲ್ ಗ್ರೌಂಡ ನಿರ್ಮಾಣ ಮಾಡದೆ ಬಿಲ್ ಎತ್ತಲಾಗಿದೆ ಎಂದು ಸಾರ್ವಜನಿಕರು ಆರೋಪಗಳನ್ನು ಮಾಡಿದ್ದರು ಅದು ಪತ್ರಿಕೆಯಲ್ಲಿ ಬರುತ್ತಲೆ ಎಚ್ಚೆತ್ತುಕೊಂಡ ಅಧಿಕಾರಿ ವೆಂಕಟೇಶ ದೇಸಾಯಿ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು

ಕೆಲಸ ಆಗಿದೆ ಎನ್ನುವ ಅಧಿಕಾರಿ:ಸದರಿ ಸ್ಥಳಕ್ಕೆ ಉ,ಖಾ ಯೋಜನೆಯ ಅಧಿಕಾರಿ ವೆಂಕಟೇಶ ದೇಸಾಯಿ ಭೇಟಿ ನೀಡಿ ಪರಿಶೀಲನೆ ನಂತರ ಪತ್ರಿಕೆಯೊಂದಿಗೆ ಮಾತನಾಡುತ್ತಾ ಸದರಿ ಸ್ಥಳದಲ್ಲಿ ವಾಲಿಬಾಲ್ ಗ್ರೌಂಡ ನಿರ್ಮಾಣವಾಗಿದೆ ಉಳಿದ ಹಣವನ್ನು ಸಿಸಿರಸ್ತೆಗೆ ಹಾಕಲಾಗಿದೆ ಒಟ್ಟಾರೆಯಾಗಿ ಕೆಲಸವಾಗಿದೆ ಎನ್ನುತ್ತಾರೆ ಅದರ ಫೋಟೊ ಇದ್ದರೆ ಹಾಕಿ ಗ್ರೌಂಡ ಹೇಗೆದೆ ನೋಡೋಣ ಎಂದರೆ ಇದುವರೆಗೂ ಪೋಟೊ ಮಾತ್ರ ಹಾಕಲಿಲ್ಲ ಸಿಂಚನಾ ಎಂಟರ ಪ್ರೆಸಸ್ ನವರಿಗೆ ೩ಲಕ್ಷಕ್ಕೂ ಅಧಿಕ ಹಣದ ಬಿಲ್ ಹಾಕಲಾಗಿದೆ ಎಂದು ಹೇಳಲಾಗುತ್ತಿದ್ದು ಅವರು ಯಾವ ವಸ್ತುಗಳನ್ನು ನೀಡಿದ್ದಾರೋ ತಿಳಿಯದಾಗಿದೆ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ
ಕಾಮಗಾರಿ ಸ್ಥಳದಲ್ಲಿ ಎರಡುಪೋಲ್ ಬಿಟ್ಟರೆ ಮತ್ತೇನಿಲ್ಲ: ಅಧಿಕಾರಿ ಭೇಟಿ ನೀಡಿದ ಸ್ಥಳದಲ್ಲಿ ಕೇವಲ ಎರಡು ಪೋಲ್ ಗಳನ್ನು ಬಿಟ್ಟರೆ ಯಾವುದೆ ಗ್ರೌಂಡ ನಿರ್ಮಾನದ ಕುರುಹುಗಳಿಲ್ಲ ಅವೆರಡು ಪೋಲ್ ಗಳಿಗೆ ಮಾತ್ರ ನಾಲ್ಕುಲಕ್ಷ ಹಣ ಖರ್ಚಾಯಿತಾ ಎನ್ನುವುದು ಸೇರಿದ ಜನರ ಮಾತಾಗಿತ್ತು
ಹಣಬಂದದ್ದು ವಾಲಿಬಾಲ್ ಗ್ರೌಂಡಗೆ ಮಾಡಿದ್ದು ಸಿಸಿರಸ್ತೆ ಎನ್ನುವ ಅಧಿಕಾರಿ:ವಾಲಿಬಾಲ್ ಗ್ರೌಂಡ ನಿರ್ಮಾಣಕ್ಕೆ ೪ಲಕ್ಷ ಹಣ ಎಂದು ಕಾಮಗಾರಿಯ ನಾಮಫಲಕದಲ್ಲಿ ಹಾಕಿದ್ದರು ವಾಲಿಬಾಲ್ ಗ್ರೌಂಡ ನಿರ್ಮಾಣ ಹಾಗೂ ಸಿಸಿ ರಸ್ತೆ ಎರಡು ಮಾಡಿದ್ದಾರೆಂದು ಉ,ಖಾ ಯೋಜನೆಯ ಅಧಿಕಾರಿ ವೆಂಕಟೇಶ ದೇಸಾಯಿ ಸಮರ್ಥಿಸಿಕೊಳ್ಳುತ್ತಾನೆ ಇಂತಹ ಅಧಿಕಾರಿ ಇದ್ದರೆ ಒಂದೆ ಕಾಮಗಾರಿ ಇದ್ದರು ಎರಡೆರಡು ಕೆಲಸ ಮಾಡುತ್ತಾರೆ ಅಪರೂಪದ ಅಧಿಕಾರಿಯಾಗಿದ್ದಾನೆ ಆದರೆ ಇದುವರೆಗೂ ಮಾತ್ರ ವಾಲಿಬಾಲ್ ಗ್ರೌಂಡನ ಫೋಟೊ ಪತ್ರಿಕೆಗೆ ದೊರೆತಿಲ್ಲ ಎನ್ನುವುದೆ ವಿಚಿತ್ರವಾಗಿದೆ ಒಟ್ಟಾರೆಯಾಗಿ ನಾಲ್ಕುಲಕ್ಷ ಹಣ ಪೋಲ್ ಮಾಡಿದ ಅಧಿಕಾರಿಗಳ ತಂಡಕ್ಕೆ ಕ್ರಮಯಾವಾಗ ಎನ್ನುವುದೇ ಸಾರ್ವಜನಿಕರ ಪ್ರಶ್ನೆಯಾಗಿದೆ

WhatsApp Group Join Now
Telegram Group Join Now
Share This Article