ನೇರಳೆಹಣ್ಣು:ಬಾಯಲ್ಲ ಬಣ್ಣ,ಆರೋಗ್ಯದಣ್ಣ,ಖರೀದಿ ಬಲುಜೋರಣ್ಣ!!
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ನೇರಳೆಹಣ್ಣು ನೋಡಲು ನೀಲಿವರ್ಣವಾದರು ಅವುಗಳ ಸವಿ ಬಲ್ಲವನೆ ಬಲ್ಲ ಎನ್ನುವಂತೆ ಬಹಳ ರುಚಿಕರವಾದ ಹಾಗೂ ಆರೋಗ್ಯಕರವಾದ ಹಣ್ಣಾಗಿದ್ದು ಇದೀಗ ಮಾರ್ಕೆಟಿಗೆ ಲಗ್ಗೆಯಿಟ್ಟಿದ್ದು ಎಲ್ಲೆಡೆ ಖರೀದಿ ಬಲುಜೋರಾಗಿದೆ
ಇತ್ತೀಚಿನ ಪೀಳಿಗೆ ಪಿಜ್ಜಾ ಬರ್ಗರ್ ಗೋಬಿ ಪಾನಿಪುರಿ ಅಬ್ಬರದಲ್ಲಿ ಹಣ್ಣುಗಳ ರುಚಿ ಹಾಗೂ ಅವುಗಳಲ್ಲಿ ಅಡಗಿರುವ ಅಗಾಧವಾದ ಶಕ್ತಿ ಯಾವುದನ್ನು ಅರಿಯದೆ ನೇರಳೆ ಕಂಡರೆ ಕೆಲವರು ಮೂಗುಮುರಿಯುವವರೆ ಹೆಚ್ಚು ಆದರೆ ಅದರಲ್ಲಿ ಸಾಕಷ್ಟು ಉಪಯುಕ್ತವಾದ ಆರೋಗ್ಯದ ಅಂಶಗಳಿವೆ ಎಂದು ಗೊತ್ತಾದರೆ ಅದನ್ನು ಸವಿಯದೆ ಇರುವುದಿಲ್ಲ
ನೇರಳೆಹಣ್ಣು ಇದೀಗ ಲಿಂಗಸಗೂರು ಪಟ್ಟಣಕ್ಕೆ ಬಂದಿದ್ದು ಎಲ್ಲೆಡೆ ದೊರೆಯುತ್ತಿದೆ ಬೆಲೆ ಸ್ವಲ್ಪ ದುಬಾರಿಯಾಗಿ ಕಂಡರು ಖರೀದಿದಾರರು ಸಾಕಷ್ಟು ಪ್ರಮಾಣದಲ್ಲಿ ಹಣ್ಣುಗಳನ್ನು ಖರೀದಿ ಮಾಡುವುದು ಕಂಡು ಬರುತ್ತಿದೆ ಸುಮಾರು ಮೂರು ನೂರರಿಂದ ನಾಲ್ಕುನೂರು ವರೆಗೆ ಒಂದು ಕೆಜಿ ಬೆಲೆಯಲ್ಲಿ ಮಾರಾಟವಾಗುತ್ತಿವೆಯಾದರು ಮಾರಾಟ ಮಾತ್ರ ಉತ್ತಮವಾಗಿಯೆ ನಡೆದಿದೆ ಎನ್ನುತ್ತಾರೆ ಮಾರಾಟಗಾರರು
ನಮ್ಮಲ್ಲಿ ಲಭ್ಯ ಬಹಳ ಕಡಿಮೆ ಆದರೆ ಬೆಳಗಾವಿ, ಗಜೇಂದ್ರಗಡ, ಹೊಸಪೇಟೆ ಹೀಗೆ ಬೇರೆಬೇರೆಕಡೆಯಿಂದ ಹಣ್ಣುಗಳು ಬರುತ್ತವೆ ಇದರಲ್ಲಿ ಜವಾರಿ ನೇರಳೆ ಬಹಳ ಸಿಹಿಯಾಗಿರುತ್ತದೆ ಜಂಬುನೇರಳೆ ಗಾತ್ರದಲ್ಲಿ ದೊಡ್ಡದಿರುತ್ತದೆ ಆದರೆ ಸಿಹಿಯಲ್ಲಿ ಸ್ವಲ್ಪ ಕಡಿಮೆ ಎನ್ನಬಹುದು
ನೇರಳೆಹಣ್ಣು ಬಾಯಿಗಿಟ್ಟರೆ ಸಾಕು ಬಾಯಲ್ಲ ನೀಲಿಬಣ್ಣವಾಗುತ್ತದೆ ಒಗರು ಹುಳಿ ಸಿಹಿ ಮಿಶ್ರಿತ ರುಚಿಯಲ್ಲಿ ತಿನ್ನಲು ಬಹಳ ರುಚಿಯಾಗಿರುತ್ತದೆ ಬಾಲಿಗೆಗೆ ಹೀಗೆ ರುಚಿಯಾದರೆ ಉದರಕ್ಕೆ ಅದರ ಕೊಡುಗೆ ಇನ್ನು ಬಹಳ ಸಕ್ಕರೆ ಖಾಯಿಲೆಗೆ ತಡೆಯುತ್ತದೆ ಕ್ಯಾನ್ಸರ್ ನಿಯಂತ್ರಿಸುತ್ತದೆ ಸೇರಿದಂತೆ ಅದರ ಆರೋಗ್ಯದ ಗುಟ್ಟಿನ ಬಗೆಗೆ ಸಾಕಷ್ಟು ಹೇಳಲಾಗುತ್ತಿದೆ
ಉಪಯೋಗಗಳು:ಇದರ ಎಲೆ ಹಾಗೂ ತಗಟೆಯನ್ನು ವಿವಿಧ ಆರೋಗ್ಯದ ಸಮಸ್ಯೆಗಳಿಗೆ ಬಳಸಲಾಗುತ್ತದೆ ಇದರ ಬೀಜವನ್ನು ಔಷಧಿಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ ಬೀಜದ ಚೂರ್ಣವನ್ನು ಮಧುಮೇಹ ರೋಗ ನಿವಾರಣೆಗೆ ಬಳಸಲಾಗುತ್ತಿದೆ ಎನ್ನುವ ಮಾತುಗಳಿವೆ
ಹೀಗೆ ಸಾಕಷ್ಟು ಉಪಯುಕ್ತವಾದ ನೇರಳೆಹಣ್ಣು ಇದೀಗ ಮಾರ್ಕೆಟ್ ನಲ್ಲಿ ಬಂದಿದ್ದು ಅದರ ರುಚಿಯನ್ನೊಮ್ಮೆ ನೀವುನೋಡಿ ರುಚಿ ಎನಿಸಿದರೆ ಇತರರಿಗೂಕೊಡಿ ಏನಂತಿರಾ?