ರಾಂಪೂರ ಕೆರೆ ದುರಸ್ಥಿಯಲ್ಲಿ ಗೋಲ್ ಮಾಲ್ ತಡೆಯುವಂತೆ ಗ್ರಾಮಸ್ಥರ ಒತ್ತಾಯ,
ಮೂರುನಾಲ್ಕು ದಿನವಾದರು ಮಾಹಿತಿ ನೀಡದ ಅಧಿಕಾರಿ, ಗುತ್ತಿಗೆದಾರರು!!
ಕಲ್ಯಾಣ ಕರ್ನಾಟಕ ವಾರ್ತೆ
(ಲಕ್ಷ್ಮಣ ಬಾರಿಕೇರ್)
ಲಿಂಗಸಗೂರು:ತಾಲೂಕಿನ ರಾಂಪೂರ(ಭೂ) ಕೆರೆಯ ಕಾಮಗಾರಿಯನ್ನು ಸಣ್ಣ ನೀರಾವರಿ ಇಲಾಖೆಯಿಂದ ದುರಸ್ಥಿ ಕಾಮಗಾರಿಯನ್ನು ಕೈಗೊಂಡಿದ್ದು ಕಾಮಗಾರಿಯ ಬಗೆಗೆ ಯಾವುದೆ ಮಾಹಿತಿಯನ್ನು ನೀಡದೆ ಪ್ರಾರಂಭ ಮಾಡಿದ್ದರಿಂದ ಎಚ್ಚೆತ್ತ ಗ್ರಾಮಸ್ಥರು ಅಂದಾಜುಪತ್ರಿಕೆಯಲ್ಲಿ ಏನಿದೆ ಅದನ್ನು ನಮ್ಮ ಗಮನಕ್ಕೆ ತಂದು ಕಾಮಗಾರಿ ಮಾಡಬೇಕೆಂದು ಒತ್ತಾಯಿಸಿದ ಘಟನೆ ನಡೆದಿದೆ

ತಾಲೂಕಿನ ರಾಂಪೂರ(ಭೂ)ಗ್ರಾಮದ ಕೆರೆ ಹಾಗೂ ತಾಲೂಕಿನ ಇತರೆ ಕೆರೆಗಳ ದುರಸ್ಥಿ ಕಾಮಗಾರಿಗಾಗಿ ಸಣ್ಣನೀರಾವರಿ ಇಲಾಖೆಯಿಂದ ಕೋಟ್ಯಂತರ ಹಣ ಮಂಜೂರಿಯಾಗಿದ್ದು ಅಂದಾಜು ಪತ್ರಿಕೆಯಲ್ಲಿ ಯಾವ ಯಾವ ಕಾಮಗಾರಿಗಳು ಇವೆ ಗುತ್ತಿಗೆದಾರರು ಯಾವ ಯಾವ ಕಾಮಗಾರಿ ಮಾಡಬೇಕು ಎಂಬುದರ ಬಗೆಗೆ ಸರಿಯಾದ ಮಾಹಿತಿ ನೀಡಿ ಅದಕ್ಕೆ ತಕ್ಕಂತೆ ಕೆಲಸ ಮಾಡಬೇಕು ಕಾಮಗಾರಿಯ ಸ್ಥಳದಲ್ಲಿ ಯಾವ ಕೆಲಸ ಮಾಡಲಾಗುತ್ತಿದೆ ಎಂದು ನಾಮಫಲಕ ಅಳವಡಿಸಬೇಕು ಗುತ್ತಿಗೆದಾರರ ಹೆಸರು ಹಾಕಬೇಕು ನಮಗೆ ಸಂಪೂರ್ಣ ಮಾಹಿತಿ ನೀಡಿದ ಮೇಲೆ ಕಾಮಗಾರಿಯನ್ನು ಮಾಡಬೇಕು ಎಂದು ಒತ್ತಾಯಿಸಿದರು
ಮೂರುದಿನವಾದರು ಮಾಹಿತಿ ನೀಡಿದ ಗುತ್ತಿಗೆದಾರ ಅಧಿಕಾರಿಗಳು:ಕೆರೆಯ ಕಾಮಗಾರಿಯನ್ನು ದೇವದುರ್ಗದ ಗುತ್ತಿಗೆದಾರ ಮಾಡುತ್ತಿದ್ದಾನೆಂದು ಹೇಳಲಾಗುತ್ತಿದ್ದು ಗ್ರಾಮಸ್ಥರು ಆತನನ್ನು ಸಂಪರ್ಕಿಸಿದರೆ ಆತ ತನ್ನ ಮಗನನ್ನು ಮುಂದೆ ಮಾಡಿ ಆತನ ಮೂಲಕ ವ್ಯವಹಾರ ಮಾಡುತ್ತಿದ್ದಾನೆ ಆತನ ಮಗನಿಗೆ ಮಾಹಿತಿ ಕೇಳಿದರೆ ಅದು ನನಗೆ ಏನು ಗೊತ್ತಿಲ್ಲ ಕೆಲಸ ಮಾಡಿಸುತ್ತಿರುವ ಅಷ್ಟೆ ಎಂದು ಹೇಳುತ್ತಿದ್ದಾನೆ ಅಲ್ಲದೆ ಈಗ ಬರುತ್ತಾರೆ ಆಗ ಬರುತ್ತಾರೆ ಎನ್ನುವ ಮಾತುಗಳನ್ನು ಆಡುತ್ತಾನೆ ಅದಕ್ಕೆ ಸಂಬAಧಿಸಿದ ಜೆಇ ಯವರಿಗೆ ವಿಚಾರಿಸಿದಾಗ ಅಂದಾಜು ಪತ್ರಿಕೆ ಕೊಪ್ಪಳದಲ್ಲಿದೆ ಕುಷ್ಟಗಿಯಲ್ಲಿದೆ ನಿಮ್ಮ ವಾಟ್ಸಪ್ ಗೆ ಹಾಕುವೆ ಎಂದು ಸಬೂಬು ಹೇಳುತ್ತಾನೆ
ಸಣ್ಣನೀರಾವರಿ ಇಲಾಖೆ ಕಾಮಗಾರಿ ಗೋಲಮಾಲ್:ತಾಲೂಕಿನಲ್ಲಿ ಸಣ್ಣನೀರಾವರಿ ಇಲಾಖೆಯಿಂದ ಪ್ರತಿವರ್ಷ ಕೋಟ್ಯಂತರ ರೂಗಳ ಕಾಮಗಾರಿ ನಡೆಯುತ್ತಿದ್ದರು ಯಾರೊಬ್ಬರ ಗಮನಕ್ಕೆ ಬರದೆ ಗುತ್ತಿಗೆದಾರ ಹಾಗೂ ಅಧಿಕಾರಿಗಳ ಪಾಲಾಗುತ್ತಿವೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ ಯಾಕೆಂದರೆ ಆಫೀಸ್ ಇರುವುದು ಕುಷ್ಟಗಿ ಹಾಗೂ ಕೊಪ್ಪಳದಲ್ಲಿ ಮಾಹಿತಿ ಪಡೆಯಲು ಅಷ್ಟುದೂರ ಹೋಗಲು ಆಗದು ಲಿಂಗಸಗೂರು ತಾಲೂಕಿಗೆ ಜೆಇಗಳು ಯಾವಾಗಲೋ ಒಮ್ಮೆ ಬಂದುಹೋಗುತ್ತಾರೆ ಇಲ್ಲಿ ಉಪಯೋಗಕಿಂತ ದುರುಪಯೋಗವೆ ಹೆಚ್ಚು ಆಗುತ್ತಿದ್ದು ಅದರಂತೆ ಸದರಿ ಕಾಮಗಾರಿಯು ದುರುಪಯೋಗವಾಗಬಹುದೆ ಎನ್ನುವ ಆತಂಕದಿAದ ಗ್ರಾಮಸ್ಥರು ಅಂದಾಜು ಪತ್ರಿಕೆಗೆ ಪಟ್ಟುಹಿಡಿದು ಕುಳಿತಿದ್ದಾರೆ ಮೂರುದಿನವಾದರು ಇನ್ನು ಸಿಕ್ಕಿಲ್ಲ ಎನ್ನುವುದೆ ವಿಪರ್ಯಾಸ ಅದು ಸಿಗುವುದಾದರು ಎಂದು ಕಾದುನೋಡಭೇಕಾಗಿದೆ?


