ಮೃಗಶಿರ ಮಳೆಗೆ ಸರ್ಜಾಪುರ ಕೆರೆ ಭರ್ತಿ ,ಗ್ರಾಮಸ್ಥರಿಗೆ ಸಂತಸ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು: ಕಳೆದ ಎರಡು ದಿನಗಳಿಂದ ಸುರಿದ ಮೃಗಶಿರ ಮಳೆಗೆ ಸರ್ಆಪುರ ಕೆರೆ ತುಂಬಿದ್ದು ಗ್ರಾಮಸ್ಥರು ಹರ್ಷಗೊಂಡಿದ್ದಾರೆ
ತಾಲ್ಲೂಕಿನ ಸರ್ಜಾಪುರ ಗ್ರಾಮದಲಿ ನೀರಿನ ತೊಂದರೆ ಕಾಣಿಸಿಕೊಳುವುದು ಸರ್ವೇ ಸಾಮಾನ್ಯ ವಾಗಿದೆ ಕಳೆದ ವರ್ಷ ಮಳೆ ಬಾರದೆ ಸಾಕಷ್ಟು ನೀರಿನ ತೊಂದರೆ ಉಂಟಾಗಿತ್ತು ಆದರೆ ಈ ಸಲ ಮಳೆಗಾಲದ ಪ್ರಾರಂಭದಲಿಯೆ ಸುರಿದ ಮೃಗಶಿರ ಮಳೆಯಿಂದ ಸರ್ಜಾಪುರ ಕೆರೆ ಸಂಪೂರ್ಣ ವಾಗಿ ತುಂಬಿದೆ ಎಂದು ಗ್ರಾಮಸ್ಥರು ಹರಗಷ ವ್ಯಕ್ತಪಡಿಸುತ್ತಾರೆ
ಹೇಳಿಕೆ:ಗ್ರಾಮಪಂಚಾಯಿತಿ ಅಧ್ಯಕ್ಷೆ ರತ್ಮಮ್ಮನಾಯಕ ರವರ ಪತಿ ಸಾಬಣ್ಣನಾಯಕ ಪತ್ರಿಕೆ ಯೊಂದಿಗೆ ಮಾತನಾಡಿ ಈ ಹಿಂದೆ ಕೆರೆಯ ಹೂಳನ್ನು ತೆಗೆಸಿರುವುದರಿಂದ ಕೆರೆಯಲ್ಲಿ ಹೆಚ್ಚಿನ ಪ್ರಮಾಣದಲಿ ನೀರು ಸಂಗ್ರಹ ವಾಗಿತ್ತದೆ ಒಂದು ಸಲ ಕೆರೆ ತುಂಬಿದರೆ ಗ್ರಾಮಕ್ಕೆ ಎರಡು ವರ್ಷದ ತನಕ ನೀರಿನ ಸಮಸ್ಯೆ ಉದ್ಭವಿಸುವುದಿಲ್ಲ ಎನ್ನುತ್ತಾರೆ
ಒಟ್ಟಾರೆ ಯಾಗಿ ಸರ್ಜಾಪುರ ಕೆರೆ ತುಂಬಿರುವುದರಿಂದ ಗ್ರಾಮದ ಜನತೆ ಹರ್ಷ ವ್ಯಕ್ತಪಡಿಸುತ್ತಾರೆ