ದೇವರಭೂಪುರ:ರಾಜಿನಾಮೆಗೆ ಒತ್ತಾಯ,ಗ್ರಾಮಪಂಚಾಯ್ತಿ ಅಧ್ಯಕ್ಷ ಆತ್ಮಹತ್ಯೆ

Laxman Bariker
WhatsApp Group Join Now
Telegram Group Join Now

ದೇವರಭೂಪುರ:ರಾಜಿನಾಮೆಗೆ ಒತ್ತಾಯ,ಗ್ರಾಮಪಂಚಾಯ್ತಿ ಅಧ್ಯಕ್ಷ ಆತ್ಮಹತ್ಯೆ

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು:ತಾಲೂಕಿನ ದೇವರಭೂಪುರ ಗ್ರಾಮಪಂಚಾಯ್ತಿ ಅಧ್ಯಕ್ಷನಿಗೆ ಕೆಲವರು ರಾಜೀನಾಮೆ ನೀಡಲು ಒತ್ತಾಯ ಮಾಡಿದ್ದರಿಂದ ಮನನೊಂದು ಅಧ್ಯಕ್ಷ ದ್ಯಾವಣ್ಣ ಜಗಲೇರ್ ಆತ್ಮಹತ್ಯೆ ಮಾಡಿಕೊಂಡಿರುವದಾಗಿ ಲಿಂಗಸಗೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ
ತಾಲೂಕಿನ ದೇವರಭೂಪುರ ಗ್ರಾಮ ಪಂಚಾಯ್ತಿಗೆ ಐದಬಾವಿ ಗ್ರಾಮದ ದ್ಯಾಮಣ್ಣ ಜಗಲೇರ ಅಧ್ಯಕ್ಷನಾಗಿ ಆಯ್ಕೆಯಾಗಿದ್ದ ಅಧಿಕಾರವಹಿಸಿಕೊಂಡು ೧೫ ತಿಂಗಳಿಗೆ ರಾಜೀನಾಮೆಗೆ ಒತ್ತಾಯಿಸಿದ್ದಾರೆ ಮಾತಿನ ಪ್ರಕಾರ ಎರಡು ವರ್ಷದ ಆರುತಿಂಗಳ ಎಂದು ಮಾತಾಗಿತ್ತು ಎನ್ನಲಾಗುತ್ತಿದ್ದು ಅಧಿಕಾರವಹಿಸಿಕೊಂಡು ೧೫ನೇ ತಿಂಗಳಿಗೆ ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದಾರೆ ನಾನು ರಾಜೀನಾಮೆ ಕೊಡುವುದಿಲ್ಲವೆಂದಾಗ ನಾವೆಲ್ಲರೂ ಸೇರಿ ನಿನ್ನನ್ನು ಅವಿಶ್ವಾಸ ಮಾಡುತ್ತೇವೆಂದು ಬೆದರಿಕೆ ಹಾಕಿದ್ದರಂತೆ ಅದರಂತೆ ದ್ಯಾವಣ್ಣ ಜಗಲೇರ ಅಕ್ಟೋಬರ ೨೪ರಂದು ರಾಜೀನಾಮೆ ಸಲ್ಲಿಸಿದ್ದ ಅಲ್ಲದೆ ನೀನು ರಾಜೀನಾಮೆಯನ್ನು ವಾಪಸ್ಸು ಪಡೆಯುತ್ತಿ ಅದಕ್ಕಾಗಿ ನ್ಮಮೋಡನೆ ಬರಬೇಕು ಎಂದು ನಿಂಗಪ್ಪ ಕನ್ನೇರಿ, ಅಮರೇಶ ಹುಬ್ಬಳ್ಳಿ, ಅಯ್ಯಾಳಪ್ಪ ಕರ್ನಾಳ, ನಾಗಪ್ಪ ಅಡಿವಿಬಾವಿದೊಡ್ಡಿ, ಹನಮಂತ ಎಣ್ಣೇರ ಸೋಮಲಿಂಗಪ್ಪ ಜಗಲಿ ಒತ್ತಾಯಿಸಿದ್ದಾರೆ ನಾನು ರಾಜೀನಾಮೆ ವಾಪಸ್ ಪಡೆಯುವುದಿಲ್ಲ ಆದರೆ ನಿಮ್ಮೊಂದಿಗೆ ಬರುವುದಿಲ್ಲವೆಂದು ಹೇಳಿದಾಗ ದ್ಯಾವಣ್ಣನಿಗೆ ಆರೋಪಿತರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಇದರಿಂದ ಮನನೊಂದು ದ್ಯಾವಣ್ಣನು ದಿನಾಂಕ ೨೮-೧೦-೨೪ರ ಸಂಜೆ ಆರರಿಂದ ೨೯ರ ಬೆಳಗಿನ ಆರರ ಅವಧಿಯಲ್ಲಿ ಆರೋಪಿತರ ಹೊಲದಲ್ಲಿ ಗಿಡಕ್ಕೆ ಹಗ್ಗದಿಂದ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ದ್ಯಾವಣ್ಣ ಪುತ್ರ ಸೋಮಲಿಂಗ ಪ್ರಕರಣ ದಾಖಲಿಸಿದ್ದು ಪೊಲೀಸರು ತನಿಖೆ ನಡೆಸಿದ್ದಾರೆ

WhatsApp Group Join Now
Telegram Group Join Now
Share This Article