೨ಕೋಟಿ ವೆಚ್ಚದ,ಬಿಸಿಎಂ ಇಲಾಖೆಯ ವಸತಿ ನಿಲಯ ಕಾಮಗಾರಿ ಕಳಪೆ ವಿಜಯಸೇನೆ ಆರೋಪ,

Laxman Bariker
೨ಕೋಟಿ ವೆಚ್ಚದ,ಬಿಸಿಎಂ ಇಲಾಖೆಯ ವಸತಿ ನಿಲಯ ಕಾಮಗಾರಿ ಕಳಪೆ ವಿಜಯಸೇನೆ ಆರೋಪ,
WhatsApp Group Join Now
Telegram Group Join Now

೨ಕೋಟಿ ವೆಚ್ಚದ,ಬಿಸಿಎಂ ಇಲಾಖೆಯ ವಸತಿ ನಿಲಯ ಕಾಮಗಾರಿ ಕಳಪೆ ವಿಜಯಸೇನೆ ಆರೋಪ,

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು:ಪಟ್ಟಣದ ಹುಲಿಗುಡ್ಡದಲಿರುವ ಬಿಸಿಎಂ ಇಲಾಖೆಯ ವಸತಿ ನಿಲಯದ ಕಾಮಗಾರಿಯು ತುಂಬಾ ಕಳಪೆಯಾಗಿದ್ದು ಸರಕಾರದ ೨ಕೋಟಿ೨೦ ಲಕ್ಷ ಹಣ ಪೊಲಾಗಿದೆ ಎಂದು ಕರುನಾಡ ವಿಜಯಸೇನೆ ತಾಲೂಕಾಧ್ಯಕ್ಷ ಹನಮಂತ ಬಡಿಗೇರ ಆರೋಪಿಸಿದ್ದಾರೆ
ಅವರು ಪತ್ರಿಕೆಯೊಂದಿಗೆ ಮಾತನಾಡಿ ಮಕ್ಕಳ ಶಿಕ್ಷಣದ ಅನುಕೂಲಕ್ಕಾಗಿ ಸರಕಾರ ಸಾಕಷ್ಟು ಹಣ ಖರ್ಚು ಮಾಡುತ್ತದೆ ಆದರೆ ಅದು ಸದುಪಯೋಗವಾದಾಗ ಮಾತ್ರ ಸಾರ್ಥಕವಾಗುತ್ತದೆ ಆದರೆ ಪಟ್ಟಣದ ಹುಲಿಗುಡ್ಡದಲ್ಲಿ ನಡೆಯುತ್ತಿರುವ ಬಿಸಿಎಂ ಇಲಾಖೆಯ ವಸತಿ ನಿಲಯದ ನೂತನ ಕಟ್ಟಡದ ಕಾಮಗಾರಿಯು ತುಂಬಾ ಕಳಪೆಯಾಗಿರುವುದು ಕಂಡು ಬರುತ್ತದೆ ಉತ್ತಮ ಗುಣಮಟ್ಟದ ಇಟ್ಟಿಗೆಗಳನ್ನು ಬಳಕೆ ಮಾಡಿರುವುದಿಲ್ಲ ಕ್ಯೂರಿಂಗ್ ಆಗದ ಇಟ್ಟಿಗೆ ಬಳಕೆಯಾಗಿವೆ ಅಲ್ಲದೆ ಕಟ್ಟಡದ ಕಾಮಗಾರಿಗೆ ಸರಿಯಾದ ಕ್ಯೂರಿಂಗ್ ಮಾಡಿರುವುದಿಲ್ಲ ಇನ್ನು ಕಟ್ಟಡ ಮುಗಿದಿಲ್ಲ ಆಗಲೆ ಅಲ್ಲಲ್ಲಿ ಕಟ್ಟಡ ಬಿರುಕುಬಿಟ್ಟಿದೆ ನೂರಾರು ಮಕ್ಕಳು ವಾಸಿಸುವ ಕಟ್ಟಡ ಇದಾಗಿದ್ದು ಗುಣಮಟ್ಟದಿಂದ ಕೂಡಿರದಿದ್ದರೆ ಅನಾಹುತವಾದರೆ ಯಾರುಹೊಣೆ ಎನ್ನುವಂತಾಗಿದೆ
ಸರಿಯಾದ ಮರಳು ಬಳಕೆಯಾಗಿಲ್ಲ,ಗುಣಮಟ್ಟದ ಇಟ್ಟಿಗಿ ಬಳಕೆಯಾಗಿಲ್ಲ ಸರಿಯಾಗಿ ಸಿಮೆಂಟ್ ಬಳಕೆಯಾಗಿಲ್ಲ ಈಗಾಗಲೆ ಅಲ್ಲಲ್ಲಿ ಬಿರುಕು ಕಾಣಿಸಿಕೊಂಡಿದೆ ಆದರು ಅಧಿಕಾರಿಗಳು ಇತ್ತ ಗಮನಹರಿಸದಿರುವುದು ದುರಂತವಾಗಿದೆ ಕೂಡಲೆ ಅಧಿಕಾರಿಗಳು ಎಚ್ಚೆತ್ತುಕೊಂಡು ಗುಣಮಟ್ಟದ ಕಾಮಗಾರಿ ನಡೆಯಬೇಕು ಈಗ ಮಾಡಿರುವ ಕಾಮಗಾರಿಗೆ ಬಿಲ್ ಮಾಡಬಾರದು ಬಿಲ್ ತಡೆದು ಗುತ್ತಿಗೆದಾರನನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಪುನಃ ಗುಣಮಟ್ಟದ ಕಾಮಗಾರಿ ನಡೆಸಬೇಕು ಇಲ್ಲವಾದರೆ ಹೋರಾಟ ಮಾಡಲಾಗುವುದೆಂದು ಕರುನಾಡ ವಿಜಯಸೇನೆಯ ತಾಲೂಕಾಧ್ಯಕ್ಷ ಹನಮಂತ ಬಡಿಗೇರ ಒತ್ತಾಯಿಸಿದ್ದಾರೆ

WhatsApp Group Join Now
Telegram Group Join Now
Share This Article