ಗ್ಯಾರಂಟಿ ಯೋಜನೆಗಳ ಪ್ರಗತಿ ವರದಿ ಸಭೆ
ಫಲಾಭವಿಗಳಿಗೆ ಸರಕಾರದ ಯೋಜನೆಗಳ ತಲುಪಿಸಲು ಯತ್ನಿಸಿ-ವೆಂಕಟೇಶ
ಹಟ್ಟಿಯಿಂದ ಬೆಳಗಾವಿಗೆ ಸ್ಲೀಪರ್ ಬಸ್ ಬಿಡಬೇಕು,ಯುವನಿಧಿ ಸದ್ಭಳಕೆಯಾಗಲಿ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ಸರಕಾರದ ಗ್ಯಾರಂಟಿ ಯೋಜನೆಗಳನ್ನು ಫಲಾನುಭವಿಗಳಿಗೆ ಯಾವುದೆ ತೊಂದರೆಯಾಗದAತೆ ತಾಂತ್ರಿಕ ತೊಂದರೆಗಲಿದ್ದರೆ ಸರಿಪಡಿಸಿ ಯೋಜನೆಗಳನ್ನು ತಲುಪಿಸಲು ಯತ್ನಿಸಿ ಎಂದು ಗ್ಯಾರಂಟಿ ಯೋಜನೆಗಳ ತಾಲೂಕಾಧ್ಯಕ್ಷ ವೆಂಕಟೇಶ ಗುತ್ತೇದಾರ ಹೇಳಿದರು
ಅವರು ಪಟ್ಟಣದ ತಾಲೂಕಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಪ್ರಗತಿ ವರದಿಯ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡುತ್ತಾ ಅರ್ಹ ಫಲಾಭವಿಗಳ ಪ್ರಗತಿಗಾಗಿ ಸರಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳನ್ನು ತಾಲೂಕಿನಲ್ಲಿ ಅರ್ಹ ಫಲಾನುಭವಿಗಳಿಗೆ ತಲುಪಿಸಲು ಅಧಿಕಾರಿಗಳು ಪ್ರಾಮಾಣಿಕವಾಗಿ ಯತ್ನಿಸಬೇಕು ಯಾವುದೆ ತಾಂತ್ರಿಕ ಅಡೆತಡೆಗಳು ಇದ್ದರು ಅವುಗಳನ್ನು ಸರಿಪಡಿಸಿ ಅರ್ಹರಿಗೆ ಯೋಜನೆ ತಲುಪುವಂತಾಗಬೇಕು ಎಂದರು
ಯುವನಿಧಿಯ ರಾಯಚೂರು ಅಧಿಕಾರಿ ಮಾತನಾಡಿ ಜಿಲ್ಲೆಯಲ್ಲಿ ಪದವಿ ಹಾಗೂ ಡಿಪ್ಲೋಮಾ ವಿದ್ಯಾರ್ಥಿಗಳು ಯುವನಿಧಿ ಪಡೆಯುತಿದ್ದು ಅರ್ಹರಿಗೆ ಮುಟ್ಟಿಸಲು ಯತ್ನಿಸಲಾಗುತ್ತಿದೆ ಎಂದಾಗ ಗ್ಯಾರಂಟಿ ಸದಸ್ಯರಾದ ಗದ್ದೆನಗೌಡ ಮಾತನಾಡುತ್ತಾ ತಾಲೂಕಿನ ಅರ್ಜಿ ಹಾಕಿದ ಹಲವಾರು ಯುವಜನತೆಗೆ ಯೋಜನೆ ತಲುಪಿಲ್ಲ ಅರ್ಹರಿಗೆ ದೊರಕುವಂತಾಗಬೇಕು ಎಂದರು ಅಲ್ಲದೆ ಮತ್ತೊಬ್ಬ ಸದಸ್ಯರಾದ ಲಿಂಗರಾಜ ಹಟ್ಟಿ ಮಾತನಾಡುತ್ತಾ ನೀವು ಜಿಲ್ಲೆಯ ಪದವಿಧರರ ಮಾಹಿತಿ ನೀಡಿದರೆ ಹೇಗೆ ತಾಲೂಕಿನ ಮಾಹಿತಿ ನೀಡಿ ನಮ್ಮ ತಾಲೂಕಿನಲ್ಲಿ ಎಷ್ಟು ಪ್ರಗತಿಯಾಗಿದೆ ಎಂಬುದರ ಸ್ಪಷ್ಟ ಚಿತ್ರಣ ದೊರೆಯುವಂತಾಗಬೇಕು ಎಂದರು ಅದಕ್ಕೆ ಅಧಿಕಾರಿ ಮಾತನಾಡುತ್ತಾ ಸದ್ಯ ಅಂತಹ ವ್ಯವಸ್ಥೆ ಇಲ್ಲ ಅದನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ಸರಿಪಡಿಸಲಾಗುತ್ತದೆ
ನಂತರ ಡಿಪೋ ಮೇನೇಜರ ಮಾತನಾಡುತ್ತಾ ತಾಲೂಕಿನಲ್ಲಿ ಶಕ್ತಿ ಯೋಜನೆ ಪ್ರಾರಂಭವಾದಾನಿಂದ ಪ್ರಯಾಣಿಕರ ಹೆಚ್ಚಳವಾಗಿದ್ದು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಹೆಚ್ಚುವರಿ ಬಸ್ ಗಳ ವ್ಯವಸ್ಥೆ ಮಾಡಲಾಗಿದೆ ಎಂದರು ಗ್ಯಾರಂಟಿಗಳ ಮತ್ತೊಬ್ಬ ಸದಸ್ಯರಾದ ನ್ಯಾಮತ್ ಖಾದ್ರಿ ಮಾತನಾಡಿ ಮುದಗಲ್ ಪಟ್ಟಣದಲ್ಲಿ ಪದವಿ ಕಾಲೇಜು ಹತ್ತಿರ ಬಸ್ ನಿಲುಗಡೆ ಮಾಡಬೇಕು ಎಂದರು
ಗೃಹಲಕ್ಷಿö್ಮÃ, ಗೃಹಜ್ಯೋತಿ ಯೋಜನೆಗಳು ಕೆಲ ತಾಂತ್ರಿಕತೊಂದರೆಯಿಂದ ಬಾಕಿ ಅರ್ಜೀಗಳು ಉಳಿದಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು ಅನ್ನಭಾಗ್ಯಯೋಜನೆಯಲ್ಲಿ ಫಾಲಾನುಭವಿಗಳಿಗೆ ನೀಡುವ ಪಡಿತರದಲ್ಲಿ ಒಮದುಕೆಜಿ ಕಡಿತಮಾಡಲಾಗುತ್ತದೆ ಎಂದು ಕೇಳಿದ ಸದಸ್ಯರ ಪ್ರಶ್ನೆಗೆ ಯಾವುದೆ ಉತ್ತರ ದೊರೆಯಲಿಲ್ಲ
ತಾಲೂಕಾ ಪಂಚಾಯಿತಿ ಇಓ ಉಮೇಶರವರು ಪ್ರಾಸ್ತಾವಿಕವಾಗಿ ಮಾತನಾಡಿದರು ಗ್ರೇಡ೨ ತಹಸೀಲ್ದಾರ ಬಸವರಾಜ ಝಳಕಿಮಠ, ಜೆಸ್ಕಾಂ ಅಧಿಕಾರಿ ಬನ್ನೆಪ್ಪ ಕರಿಬಂಟನಾಳ, ಸಿಡಿಪಿಓ ಎಂ ಡಿ ಗೋಕುಲ್, ಗ್ಯಾರಂಟಿ ಯೋಜನೆಗಳ ಸದಸ್ಯರು ಅಧಿಕಾರಿಗಳು ಸೇರಿದಂತೆ ಇದ್ದರು