ಸರಕಾರದ ಗ್ಯಾರಂಟಿ ಯೋಜನೆಗಳು ತಳಮಟ್ಟದಲ್ಲಿ ತಲುಪಿಸಲುಯತ್ನ- ವೆಂಕಟೇಶ ಗುತ್ತೇದಾರ

Laxman Bariker
ಸರಕಾರದ ಗ್ಯಾರಂಟಿ ಯೋಜನೆಗಳು ತಳಮಟ್ಟದಲ್ಲಿ ತಲುಪಿಸಲುಯತ್ನ- ವೆಂಕಟೇಶ ಗುತ್ತೇದಾರ
WhatsApp Group Join Now
Telegram Group Join Now

ಸರಕಾರದ ಗ್ಯಾರಂಟಿ ಯೋಜನೆಗಳು ತಳಮಟ್ಟದಲ್ಲಿ ತಲುಪಿಸಲುಯತ್ನ- ವೆಂಕಟೇಶ ಗುತ್ತೇದಾರ

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು:ಬಡಜನತೆಯ ಅನುಕೂಲಕ್ಕಾಗಿ ಸರಕಾರವು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳನ್ನು ತಳಮಟ್ಟದಲ್ಲಿ ತಲುಪಿಸಲು ಶ್ರಮಿಸಲಾಗುವುದೆಂದು ಗ್ಯಾರಂಟಿ ಯೋಜನೆಗಳ ತಾಲೂಕಾಧ್ಯಕ್ಷ ವೆಂಕಟೇಶ ಗುತ್ತೇದಾರ ಹೇಳಿದರು
ಅವರು ಪಟ್ಟಣದ ತಮ್ಮ ಕಾರ್ಯಾಲಯದಲ್ಲಿ ಪತ್ರಿಕೆಯೊಂದಿಗೆ ಮಾತನಾಡುತ್ತಾ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸರಕಾರ ಬಡಜನತೆಗಾಗಿ ಜಾರಿಗೆ ತಂದಿರುವ ಅನ್ನಭಾಗ್ಯ,ಗೃಹಲಕ್ಷಿö್ಮÃ, ಗೃಹಜ್ಯೋತಿ, ಶಕ್ತಿಯೋಜನೆ, ಯುವನಿಧಿ ಯೋಜನೆಗಳು ರಾಜ್ಯ ಸರಕಾರವು ಬಡವರ ಅಭಿವೃದ್ದಿ ದೃಷ್ಟಿಯನ್ನಿಟ್ಟುಕೊಂಡು ಜಾರಿಗೆ ತಂದಿದ್ದು ಅವುಗಳನ್ನು ತಳಮಟ್ಟದಲ್ಲಿ ತಲುಪಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಲಾಗುವುದು
ಈಗಾಗಲೆ ಸರಕಾರದ ಯೋಜನೆಗಳ ಸದುಪಯೋಗವನ್ನು ತಾಲೂಕಿನಲ್ಲಿ ಜನತೆ ಪಡೆದುಕೊಳ್ಳುತ್ತಿದ್ದು ತಾಲೂಕಿನಲ್ಲಿ ಎಷ್ಟು ಜನತೆ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆಂದು ಪ್ರಥಮವಾಗಿ ವರದಿ ಪಡೆಯಲಾಗಿದೆ ಆದರು ಗ್ರಾಮೀಣ ಪ್ರದೇಶದಲ್ಲಿ ದಾಖಲಾತಿಗಳ ಸಮರ್ಪಕವಾಗಿ ದೊರೆಯದೆ ಇನ್ನು ಕೆಲವರು ತೊಂದರೆ ಪಡುತ್ತಿರಬಹುದು ಅಂತವರನ್ನು ಗುರುತಿಸಿ ತಾಂತ್ರಿಕ ತೊಂದರೆಗಳನ್ನು ಸರಿಪಡಿಸಿ ಗ್ಯಾರಂಟಿ ಯೋಜನೆಗಳ ಸದುಪಯೋಗವನ್ನು ಪಡೆಯುವಂತೆ ಪ್ರೇರೇಪಿಸಲಾಗುವುದು
ಗ್ರಾಮಪಂಚಾಯಿತಿಗಳ ಮಟ್ಟದಲ್ಲಿ ತಂಡಭೇಟಿ:ತಾಲೂಕಮಟ್ಟದ ಗ್ಯಾರಂಟಿ ಯೋಜನೆಗಳ ತಂಡ ರಚನೆಯಾಗಿದ್ದು ಅಧ್ಯಕ್ಷರು ಹಾಗೂ ವಿವಿಧ ಪದಾಧಿಕಾರಿಗಳ ತಂದವಿದ್ದು ನಾವು ದಿನಕ್ಕೆ ಎರಡು ಗ್ರಾಮಪಂಚಾಯ್ತಿಗಳಂತೆ ಭೇಟಿ ನೀಡಲಿದ್ದು ಆಯಾ ಗ್ರಾಮಪಂಚಾಯ್ತಿಗಳಲ್ಲಿ ಗ್ಯಾರಂಟಿ ಯೋಜನೆಗಳು ತಲುಪದಿರುವ ಕುಟುಂಬಗಳನ್ನು ಗುರುತಿಸಿ ಅವರಿಗೆ ಇರುವ ತೊಂದರೆಯನ್ನು ತಿಳಿದುಕೊಂಡು ಅಧಿಕಾರಿಗಳ ಮಟ್ಟದಲ್ಲಿ ಇರುವ ತೊಂದರೆ ಸರಿಪಡಿಸಿ ಯೋಜನೆ ತಲುಪಲು ಪ್ರಯತ್ನಿಸಲಾಗುವುದು ಎಂದರು
ಈಗಾಗಲೆ ತಾಲೂಕಾ ಮಟ್ಟದ ಅಧಿಕಾರಿಗಳ ಸಭೆಯನ್ನು ಕರೆಯಲಾಗಿದ್ದು ಅದರಲ್ಲಿ ಮಾಹಿತಿಯನ್ನು ಪಡೆಯಲಾಗಿದೆ ಮೇಲಿಂದ ಮೇಲೆ ಇಂತಹ ಸಭೆಗಳನ್ನು ಮಾಡುವುದರ ಮೂಲಕ ಗ್ಯಾರಂಟಿ ಯೋಜನೆಗಳ ತಲುಪಿಸಲು ನಿರಂತರವಾಗಿ ಯತ್ನಿಸಲಾಗುವುದು ಎಂದು ಅವರು ಹೇಳಿದರು
ಗ್ಯಾರಂಟಿ ಯೋಜನೆಯು ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು ಇದೇ ಮಾದರಿಯಲ್ಲಿ ಬೇರೆ ಬೇರೆ ರಾಜ್ಯಗಳನ್ನು ತಮ್ಮ ರಾಜ್ಯದಲ್ಲಿ ಸದರಿ ಯೋಜನೆ ಪ್ರಾರಂಭಿಸಲು ಯೋಚನೆಯಲ್ಲಿವೆ ಇಂತಹ ಉತ್ತಮ ಯೋಜನೆಗಳ ಸದುಪಯೋಗವನ್ನುಅರ್ಹರು ಪಡೆದುಕೊಳ್ಳಬೇಕೆಂದು ತಿಳಿಸಿದರು

WhatsApp Group Join Now
Telegram Group Join Now
Share This Article