ಮಹರ್ಷಿ ವಾಲ್ಮೀಕಿ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ::
ವಾಲ್ಮೀಕಿ ನಿಗಮದ ಹಗರಣದ ತನಿಖೆ ನಡೆಯುತಿದ್ದು,ಕಾನೂನಿನ ಮೇಲೆ ಗೌರವವಿದೆ-ಪ್ರಸನ್ನಾನಂದ ಪುರಿ ಸ್ವಾಮೀಜಿ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು: ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ ೧೮೭ ಕೋಟಿ ಹಗರಣದ ಕುರಿತು ನಾನು ಸೂಕ್ಷö್ಮವಾಗಿ ಗಮನಿಸುತ್ತಿದ್ದು ತನಿಖೆ ನಡೆಯುತ್ತಿದೆ ಕಾನೂನಿನ ಮೇಲೆ ಗೌರವವಿದೆ ಎಂದು ವಾಲ್ಮೀಕಿ ಗುರುಪೀಠದ ಜಗದ್ಗುರು ಪ್ರಸನ್ನಾನಂದಪುರಿ ಹೇಳಿದರು
ಅವರು ಮಸ್ಕಿ ತಾಲೂಕಿನ ನೆಲಕೊಳ ಗ್ರಾಮದಲ್ಲಿ ನೂತನವಾಗಿ ಮಹರ್ಷಿ ವಾಲ್ಮೀಕಿ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡುತ್ತಾ ರಾಜ್ಯದಲ್ಲಿ ನಡೆದಿರುವ ವಾಲ್ಮೀಕಿ ಅಭಿವೃದ್ದಿ ನಿಗಮದ ಹಗರಣದ ಕುರಿತು ಸ್ವಾಮೀಜಿ ಯಾಕೆ ಮಾತನಾಡುತ್ತಿಲ್ಲ ಎನ್ನುವ ಮಾತುಗಳನ್ನು ಕೇಳಿದ್ದು ನಾನು ಸುಮ್ಮನೆ ಕುಳಿತಿಲ್ಲ ಎಲ್ಲವನ್ನು ಸೂಕ್ಷö್ಮವಾಗಿ ಗಮನಿಸುತ್ತಿದ್ದೇನೆ ಕಾನೂನು ಮುಖ್ಯ ನೂನಿಗಿಂತ ನಾವೆಲ್ಲ ದೊಡ್ಡವರಲ್ಲ ಅದಕ್ಕಾಗಿ ತನಿಖೆ ನಡೆಯಲಿ ಸತ್ಯಾಸತ್ಯತೆ ಹೊರಗಡೆ ಬರಲಿ ಇದರಲ್ಲಿ ನ್ಯಾಯ ಸಿಗುತ್ತದೆ ಎನ್ನುವ ಭರವಸೆ ಇದ್ದು ಕಾನೂನಿನ ಮೇಲೆ ಗೌರವವಿದೆ ಒಂದು ವೇಳೆ ಅನ್ಯಾಯವಾದರೆ ನಾವು ನೀವು ಸೇರಿ ಹೋರಾಟ ಮಾಡೋಣ ಎಂದರು
ಅಲ್ಲದೆ ವಾಲ್ಮೀಕಿ ಸಮಾಜವು ಮುಖ್ಯವಾಹಿನಿಗೆ ಬರಬೇಕಾದರೆ ಪ್ರತಿಯೊಬ್ಬರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಸಮಾಜ ಸುಶಿಕ್ಷಿತವಾದರೆ ಅಭಿವೃದ್ದಿ ಸಾಧ್ಯವಾಗುತ್ತದೆ ಪ್ರತಿಯೊಂದು ಸಮಾಜದ ಜೊತೆಗೆ ಐಕ್ಯತೆ ಏಕತೆ ಸೌಹಾರ್ದಯುತವಾಗಿ ಬಾಂದವ್ಯಗಳನ್ನು ಇಟ್ಟುಕೊಂಡು ಸಹಬಾಳ್ವೆ ನಡೆಸಬೇಕು ಆಗಮಾತ್ರ ಸಮಾಜ ಉದ್ದಾರವಾಗಲು ಸಾಧ್ಯವಾಗುತ್ತದೆ ಎಂದರು
ಕಾರ್ಯಕ್ರಮದ ಪ್ರಾರಂಭದಲ್ಲಿ ಕುಂಭ ಕಲಸ ಬಾಜಭಜಂತ್ರಿ ಡೊಳ್ಳಿನಿಂದಿಗೆ ಸಂಭ್ರಮ ಸಡಗರದೊಂದಿಗೆ ಪೂಜ್ಯರು ಗಣ್ಯರು ಮಹನಿಯರು ಮಹಿಳೆಯರು ಸೇರಿ ಗಂಗಾಮಾತೆಗೆ ಪೂಜೆ ಸಲ್ಲಿಸಿದರು ಮಹರ್ಷಿ ವಾಲ್ಮೀಕಿ ಮೂರ್ತಿಯನ್ನು ಶಾಸಕರು ಹಾಗೂ ಗ್ರಾಮೊದ್ಯೋಗ ಅಭಿವೃದ್ದಿ ಮಂಡಳಿಯ ಅಧ್ಯಕ್ಷರಾದ ಬಸನಗೌಡ ತುರವಿಹಾಳ ಅನಾವರಣಗೊಳಿಸಿದರು
ಕಾರ್ಯಕ್ರಮದ ಕುರಿತು ಜಗದ್ಗುರು ಬಸವಾನಂದ ಸ್ವಾಮೀಜಿಗಳು ಮಡಿವಾಳ ಮಾಚಿದೇವ ಗುರುಪೀಠ, ಪೂಜ್ಯರಾದ ಆತ್ಮನಾಂದ ಸವಾಮೀಜಿ ಉಸ್ಕಿಹಾಳ ಮಾಜಿ ಶಾಸಕರಾದ ಪ್ರತಾಪಗೌಡ ಪಾಟೀಲ್, ರಾಜಾ ವೆಂಕಟಪ್ಪನಾಯಕ, ಅಯ್ಯಪ್ಪನಾಯಕ ಮ್ಯಾಕಲ್, ಭೀಮಣ್ಣನಾಯಕ ಕಾಚಾಪುರ, ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ, ಹನುಮೇಶ ನಾಯಕ ಮಾನ್ವಿ, ಶರಣಬಸವನಾಯಕ ಜಾನೇಕಲ್, ಆರ್ ಕೆ ನಾಯಕ ಸೇರಿದಂತೆ ಇತರರು ಮಾತನಾಡಿದರು
ಅಮೀನಗಡದ ಗಂಗಾದೇವಿ ಮಠದಬಸಲಿಂಗಮ್ಮನವರು ನಾಗಯ್ಯ ತಾತನವರು ಸಾನಿಧ್ಯವನ್ನು ವಹಿಸಿದ್ದರು
ಈ ಸಂದರ್ಭದಲ್ಲಿ ಗ್ರಾ,ಪಂ ಅಧ್ಯಕ್ಷೆ ಬಸಲಿಂಗಮ್ಮ ಗಂ ಭೀಮಣ್ಣ ಕವಿತಾಳ ಪಿಎಸೈ ವೆಂಕಟೇಶನಾಯಕ, ಪಿಡಿಓ ರಆಮಣ್ಣ,ಮೌನೇಶನಾಯಕ,ಬಸವರಾಜನಾಯಕ ತುಗ್ಗಲದಿನ್ನಿ, ಕರಿವಾಳಪ್ಪನಾಯಕ ಕಾಚಾಪೂರ, ಬಸವರಾಜ ಕೊಟೇಕಲ್, ನೆಲಕೊಳ ಗ್ರಾಮದ ಮಲ್ಲಪ್ಪನಾಯಕ, ಶಿವಗ್ಯಾನೆಪ್ಪ, ರಡ್ಡೆಪ್ಪ ಯಮನೂರ ಯತಗಲ್ ಸುಭಾನ್, ಮೌಲಸಾಬ,ಬಂದೇನವಾಜ್, ಯಲ್ಲಪ್ಪ, ಹುಚ್ಚಪ್ಪ, ವಾಲ್ಮೀಕಿ ಸಮಾಜದ ಮುಖಂಡರು ಸೇರಿದಂತೆ ಇದ್ದರು