ಇಂಧನ ಇಲಾಖೆಯ ಕುಂದು ಕೊರತೆ ಸಭೆ: ಮುದಗಲ್-ಹಟ್ಟಿಯಲ್ಲಿ ಉಪವಿಭಾಗ ಕಛೇರಿ ಮಂಜೂರಾತಿಗೆ ವಜ್ಜಲ್ ಒತ್ತಾಯ

Laxman Bariker
ಇಂಧನ ಇಲಾಖೆಯ ಕುಂದು ಕೊರತೆ ಸಭೆ: ಮುದಗಲ್-ಹಟ್ಟಿಯಲ್ಲಿ ಉಪವಿಭಾಗ ಕಛೇರಿ ಮಂಜೂರಾತಿಗೆ ವಜ್ಜಲ್ ಒತ್ತಾಯ
WhatsApp Group Join Now
Telegram Group Join Now

ಇಂಧನ ಇಲಾಖೆಯ ಕುಂದು ಕೊರತೆ ಸಭೆ:
ಮುದಗಲ್-ಹಟ್ಟಿಯಲ್ಲಿ ಉಪವಿಭಾಗ ಕಛೇರಿ ಮಂಜೂರಾತಿಗೆ ವಜ್ಜಲ್ ಒತ್ತಾಯ

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು: ಇಂಧನ ಇಲಾಖೆಯ ಸಚಿವರಾದ ಕೆ ಜಿ ಜಾರ್ಜ ರವರ ಅಧ್ಯಕ್ಷತೆಯಲ್ಲಿ ರಾಯಚೂರಿನಲ್ಲಿ ನಡೆದ ಕುಂದು ಕೊರತೆಯ ಸಭೆಯಲ್ಲಿ ಶಾಸಕ ಮಾನಪ್ಪ ವಜ್ಜಲರು ಮುದಗಲ್ ಹಾಗೂ ಹಟ್ಟಿಯಲ್ಲಿ ಉಪವಿಭಾಗ ಕಛೇರಿಯನ್ನು ಮಂಜೂರು ಮಾಡಬೇಕೆಂದು ಸಚಿವರಿಗೆ ಒತ್ತಾಯಿಸಿದರು


ಬುಧವಾರ ರಾಯಚೂರಿನ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ನಡೆದ ಇಂಧನ ಇಲಾಖೆಯ ಕುಂದು ಕೊರತೆ ಸಭೆಯಲ್ಲಿ ಲಿಂಗಸಗೂರು ಕ್ಷೇತ್ರದ ಶಾಸಕ ಮಾನಪ್ಪ ವಜ್ಜಲರು ಭಾಗಿಯಾಗಿ ಮಾತನಾಡುತ್ತಾ ಕ್ಷೇತ್ರದ ವಿವಿಧ ಗ್ರಾಮಗಳ ಹಾಗೂ ತಾಂಡಾ ಮತ್ತು ದೊಡ್ಡಿಗಳಿಗೆ ಶಾಶ್ವತ ವಿದ್ಯುತ್ ಕಲ್ಪಿಸುವುದು ಹಾಗೂ ಹಲವಾರು ವರ್ಷಗಳಿಂದ ಹಾಕಿರುವ ವಿದ್ಯುತ್ ಕಂಬಗಳು ಹಾಗೂ ತಂತಿಯನ್ನು ಬದಲಾವಣೆ ಮಾಡುವುದು ಅಗತ್ಯವಾಗಿದೆ ಅದಕ್ಕಾಗಿ ಕೂಡಲೇ ಬದಲಾವಣೆಯನ್ನು ಮಾಡಬೇಕು ಮುದಗಲ್ ಹಾಗೂ ಹಟ್ಟಿ ನಗರಗಳಲ್ಲಿ ಉಪವಿಭಾಗ ಕಛೇರಿ ಮಂಜೂರಾತಿಯನ್ನು ಮಾಡುವಂತೆ ಇಂಧನ ಸಚಿವರಾದ ಕೆಜಿ ಜಾರ್ಜರವರಿಗೆ ಒತ್ತಾಯಿಸಿದರು
ಈ ಸಂದರ್ಭದಲ್ಲಿ ಶಾಸಕರಾದ ಶಿವರಾಜ ಪಾಟೀಲ್, ಹಂಪಯ್ಯನಾಯಕ, ಬಸನಗೌಡ ತುರವಿಹಾಳ, ಪರಿಷತ್ ಸದಸ್ಯ ಕೆ ವಸಂತಕುಮಾರ, ಇಂಧನ ಇಲಾಖೆಯ ಮುಖ್ಯಕಾರ್ಯದರ್ಶಿ ಗೌರವ ಗುಪ್ತಾ, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜಕುಮಾರ ಪಾಂಡೆ ರಾಯಚೂರು ಜಿಲ್ಲಾಧಿಕಾರಿ ನಿತೀಶ ಕೆ ಸೇರಿದಂತೆ ಇಲಾಖೆಯ ಅಧಿಕಾರಿಗಳು ಇದ್ದರು

WhatsApp Group Join Now
Telegram Group Join Now
Share This Article