ತ್ರೈಮಾಸಿಕ ಕೆಡಿಪಿಸಭೆ
ಅಸ್ಪಷ್ಟ ಮಾಹಿತಿ ನೀಡಿದ ಅಧಿಕಾರಿಗಳು,ತರಾಟೆಗೆ ತೆಗೆದುಕೊಂಡ ಶಾಸಕ ವಜ್ಜಲ್
ಜೆಜೆಎಂ ಕಾಮಗಾರಿಗೆ ನಿಯಮಮೀರಿಹಣ ಖರ್ಚು, ಕುಡಿಯುವ ನೀರಿಗಾಗಿ ಬೋರವೆಲ್ ಕೊರೆಯದೆ ಹಣ ಕಬಳಿಕೆ ತನಿಖೆಯಾಗಲಿ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ಬೇಸಿಗೆ ಸುರುವಾಗಿದೆ ಕುಡಿಯುವ ನೀರಿನ ಸಮಸ್ಯೆ ಇರುವಕಡೆ ಸರಿಪಡಿಸಿ ಎನ್ನುವ ಆದೇಶವಿದೆ ಆದರೂ ತಾಲೂಕಿನಲ್ಲಿ ಒಂದೇಒಂದು ಬೋರವೆಲ್ ಹಾಕಿಲ್ಲ ಎನ್ನುವ ಉತ್ತರ ಅಧಿಕಾರಿಗಳಿಂದ ಬಂದಾಗ ಶಾಸಕ ಮಾನಪ್ಪ ವಜ್ಜಲ್ ಅಧಿಕಾರಿಗಳ ನಡೆಯಬಗೆಗೆ ಗರಂ ಆದ ಘಟನೆ ಜರುಗಿತು
ಪಟ್ಟಣದ ತಾಲೂಕಾ ಪಂಚಾಯ್ತಿ ಸಭಾಂಗಣದಲ್ಲಿ ಶಾಸಕ ಮಾನಪ್ಪ ವಜ್ಜಲ್ ರವರ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ ನಡೆಯಿತು ಅಧಿಕಾರಿಗಳು ಆಯಾ ಇಲಾಖೆಗಳ ಬಗೆಗೆ ಅಸ್ಪಷ್ಟ ಮಾಹಿತಿ ನೀಡುತ್ತಿರುವಂತೆ ಗರಂ ಆದ ಶಾಸಕ ವಜ್ಜಲ್ ಸಭೆಯಿಂದ ಹೊರಹೋದಾಗ ಜನರು ತಮ್ಮ ಸಮಸ್ಯೆಗಳು ಏನಾದವೆಂದು ಪ್ರಶ್ನೆ ಮಾಡುತ್ತಾರೆ ಅವರಿಗೆ ನಾನು ಏನು ಹೇಳಬೇಕು ಅಸ್ಪಷ್ಟ ಮಾಹಿತಿ ನೀಡಿದರೆ ಹೇಗೆ ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ ಕೆಡಿಪಿ ಸಭೆಯಲ್ಲಿ ಜರುಗಿತು
ಸರಕಾರದಿಂದ ಬಡರೈತರಿಗಾಗಿ ಬಂದಿರುವ ಗಂಗಾಕಲ್ಯಾಣ ಕೆಲಸವನ್ನು ಯಾಕೆ ವಿಳಂಬ ಮಾಡುತ್ತೀರಿ ಟಿಸಿ ಸುಟ್ಟರೆ ರೈತರನ್ನು ತಿರುಗಾಡಿಸುತ್ತೀರಿ ದೊಡ್ಡಿ ತಾಂಡ ಸೇರಿ ಹಲವಾರು ಕಡೆಗೆ ವಿದ್ಯುತ್ ಸಮಸ್ಯೆ ಇದೆ ಯಾವುದನ್ನು ನೀವು ಸರಿಪಡಿಸುವ ಕೆಲಸ ಮಾಡಿಲ್ಲ ಎಂದು ಜೆಸ್ಕಾಂ ಅಧಿಕಾರಿ ಕರಿಬಂಟನಾಳರವರಿಗೆ ತರಾಟೆಗೆ ತೆಗೆದುಕೊಂಡರು ೧೧೦ಕೆವಿ ೩ ಬಂದಿವೆ ಸೋಲಾರ ರೈತರಿಗೆ ಉಪಯುಕ್ತ ಇದೆಯಾ ಎನ್ನುವುದನ್ನು ತಿಳಿದು ಮೇಲಾಧಿಕಾರಿಗಳಿಗೆ ಬರೆಯಬೇಕು,ಜನರ ಸಮಸ್ಯೆಗೆ ಸ್ಪಂದಿಸಬೇಕು ಎಂದರು
ಜಲಧಾರೆ ಕಾಮಗಾರಿಯನ್ನು ಗುಣಮಟ್ಟದಿಂದ ಕೂಡಿಲ್ಲವೆಂದು ಅಂದಾಜು ಸಮಿತಿ ವರದಿಯನ್ನು ಸರಕಾರಕ್ಕೆ ನೀಡಿದೆ ಬಿಲ್ ಮಾಡಬಾರದೆಂದು ಹೇಳಿದೆ ಆದರೆ ನೀವು ಗುತ್ತಿಗೆದಾರರಿಗೆ ಯಾವುದೆ ಆದೇಶವಿಲ್ಲದೆ ಬಿಲ್ ಮಾಡಿದ್ದೀರಿ ಇದಕ್ಕೆ ತಕ್ಕಶಿಕ್ಷೆ ನೀವು ಅನುಭವಿಸುತ್ತೀರಿ ಎಂದು ನೀರು ಸರಬರಾಜು ಇಲಾಖೆ ಎಇಇ ಯವರಿಗೆ ಹೇಳಿದರು, ಸರಕಾರಿ ಆಸ್ಪತ್ರೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ, ಅತಿಥಿ ಶಿಕ್ಷಕರಿಗೆ ಸರಿಯಾಗಿ ವೇತನ ದೊರೆಯುತ್ತಿಲ್ಲ, ಕಾಮಗಾರಿಗಳಿಗೆ ಬಂದಿರುವ ಹಣ ಲೂಟಿಯಾಗುತ್ತಿದೆ ಮಾನವೀಯತೆ ಇದ್ದರೆ ಅಭಿವೃದ್ದಿ ಕೆಲಸಗಳನ್ನು ಮಾಡಿ ಇಲ್ಲವಾದರೆ ಜಾಗಖಾಲಿ ಮಾಡಿ ಎಂದು ಅಧಿಕಾರಿಗಳನ್ನು ಹಿಗ್ಗಾಮುಗ್ಗವಾಗಿ ತರಾಟೆಗೆ ತೆಗೆದುಕೊಂಡ ಘಟನೆ ಜರುಗಿತು
ಗ್ಯಾರಂಟಿ ಯೋಜನೆಯ ತಾಲೂಕಾಧ್ಯಕ್ಷ ವೆಂಕಟೇಶ ಗುತ್ತೇದಾರ ಮಾತನಾಡುತ್ತಾ ಬೇರೆ ತಾಲೂಕಿನಲ್ಲಿ ಗ್ಯಾರಂಟಿ ಅಧ್ಯಕ್ಷರು,ಪಿಎಲ್ಡಿ,ಟಿಎಪಿಎಂಸಿ ಸೇರಿಹಲವರನ್ನು ವೇದಿಕೆಗೆ ಕರೆಯುತ್ತಾರೆ ಆದರೆ ಇಲ್ಲಿಯಾಕೆ ಪಾಲನೆಯಾಗುತ್ತಿಲ್ಲವೆಂದಾಗ ಅದು ಪ್ರೋಟೋಕಾಲ್ ಪ್ರಕಾರವಿಲ್ಲವೆಂದು ಎಂ ಎಲ್ ಸಿ ಶರಣಗೌಡ ಪಾಟೀಲ್ ಬಯ್ಯಾಪುರ ಸಮಜಾಯಿಸಿದರು
ಕೃಷಿ,ಶಿಕ್ಷಣ ಸಮಾಜಕಲ್ಯಾಣ,ಪ,ಪಂ ,ಸಿಡಿಪಿಓ ಪಶುಸಂಗೋಪನೆ ಸೇರಿದಂತೆ ಹಲವು ಇಲಾಖೆ ಅಧಿಕಾರಿಗಳು ಚರ್ಚೆಯಲ್ಲಿ ಭಾಗವಹಿಸಿದ್ದರು
ಈ ಸಂದರ್ಭದಲ್ಲಿ ತಹಸೀಲ್ದಾರ ಶಂಶಾಲಂ, ಇಓ ಉಮೇಶ, ಕೆಡಿಪಿ ನೂತನ ಸದಸ್ಯರು ಸೇರಿದಂತೆ ಇದ್ದರು