ಭಾರತದ ನಾರಿಯರ ಕುಂಕುಮಕ್ಕೆ ಧಕ್ಕೆ ತಂದವರಿಗೆ ತಕ್ಕಶಾಸ್ತಿ ಮಾಡಲಾಗಿದೆ-ವಜ್ಜಲ್

Laxman Bariker
ಭಾರತದ ನಾರಿಯರ ಕುಂಕುಮಕ್ಕೆ ಧಕ್ಕೆ ತಂದವರಿಗೆ ತಕ್ಕಶಾಸ್ತಿ ಮಾಡಲಾಗಿದೆ-ವಜ್ಜಲ್
WhatsApp Group Join Now
Telegram Group Join Now

ಆಪರೇಷನ್ ಸಿಂಧೂರ ಯಶಸ್ವಿ, ತಿರಂಗಾ ಯಾತ್ರೆಮಾಡಿ ರಾಷ್ಟ್ರ ಪ್ರೇಮವ್ಯಕ್ತ,::

ಭಾರತದ ನಾರಿಯರ ಕುಂಕುಮಕ್ಕೆ ಧಕ್ಕೆ ತಂದವರಿಗೆ ತಕ್ಕಶಾಸ್ತಿ ಮಾಡಲಾಗಿದೆ-ವಜ್ಜಲ್

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು:ಪ್ರವಾಸಕ್ಕೆ ತೆರಳಿದ ಕುಟುಂಬಳ ಮೇಲೆ ದಾಳಿ ಮಾಡಿದ ಉಗ್ರರು ಭಾರತದ ನಾರಿಯರ ಕುಂಕುಮ ಕೆಣಕಿದ್ದಕ್ಕೆ ಉತ್ತರವಾಗಿ ಆಪರೇಷನ್ ಸಿಂಧೂರ ಯಶಸ್ವಿಯಾಗಿ ಮಾಡಿ ಪಾಕಗೆ ತಕ್ಕಶಾಸ್ತಿ ಮಾಡಲಾಗಿದೆ ಎಂದು ಶಾಸಕ ಮಾನಪ್ಪ ವಜ್ಜಲ್ ಹೇಳಿದರು


ಅವರು ಪಟ್ಟಣದಲ್ಲಿ ಆಪರೇಷನ್ ಸಿಂಧೂರ ಯಶಸ್ವಿಗಾಗಿ ನಡೆಸಿದ ತಿರಂಗಯಾತ್ರೆಯಲ್ಲಿ ಭಾಗವಹಿಸಿ ಪಟ್ಟಣದ ದೊಡ್ಡ ಆಂಜನೇಯ ದೇವಸ್ಥಾನದಿಂದ ಪ್ರಾರಂಭವಾಗಿ ಲಕ್ಷ್ಮೀ ದೇವಸ್ಥಾನದ ವರೆಗೆ ತೆರಳಿ ನಂತರ ಮಾತನಾಡುತ್ತಾ ದೇಶದ ಘನತೆಗೆ ಧಕ್ಕೆ ಬಂದಾಗ ಭಾರತ ಸುಮ್ಮನಿರುವುದಿಲ್ಲ ಎಂಬುದನ್ನು ಪಾಕಗೆ ಮನವರಿಕೆಯಾಗುವಂತೆ ಉತ್ತರ ನೀಡಿದೆ ಮಹಿಳಾ ಸೈನಿಕರ ಮುಂದಾಳತ್ವದಲ್ಲಿ ನಡೆದ ಆಪರೇಷನ್ ಸಿಂಧೂರ ಪಾಕ ಒಳಹೊಕ್ಕೆ ಉಗ್ರರ ನೆಲೆಗಳನ್ನು ಧ್ವಂಸ ಮಾಡಿರುವ ಸಾಹಸ ಸಾಮಾನ್ಯವೇನಲ್ಲ ಅದು ಕಿತ್ತೂರ ಚನ್ನಮ್ಮನಂತಹ ಧೀರಮಹಿಳೆಯವರು ಎಂದರು
ಯುವಕರಾದವರು ದೇಶಪ್ರೇಮವನ್ನು ಬೆಳೆಸಿಕೊಳ್ಳಬೇಕು ನಮ್ಮ ನಾಡು ರಕ್ಷಣೆ ನಮಗೆ ಬಹಳ ಮುಖ್ಯವಾಗುತ್ತದೆ ಕೆಲವರು ಭಾರತದಲ್ಲಿಯೆ ಇದ್ದು ಪಾಕಿಸ್ಥಾನಕ್ಕೆ ಮಾಹಿತಿ ನೀಡುವ ಕೆಲಸ ಮಾಡಿದ್ದರು ಅವರನ್ನು ಗುರುತಿಸಿ ಹಿಡಿಯುವ ಕೆಲಸ ಮೋದಿ ನೇತೃತ್ವದ ಸರಕಾರ ಮಾಡಿದ್ದು ತುಂಬಾ ಶ್ಲಾಘನೀಯವಾಗಿದೆ ಅಂತಹ ಮನಸುಗಳಿಗೆ ತಕ್ಕಶಿಕ್ಷೆಯಾಗಲಿದೆ
ಆಪರೇಷನ್ ಸಿಂಧೂರದಲ್ಲಿ ನಾವು ಯಶಸ್ವಿಯಾಗಿರುವುದರಿಂದ ದೇಶದಾದ್ಯಂತ ತಿರಂಗಾ ಯಾತ್ರೆಯನ್ನು ಮಾಡಲಾಗುತ್ತಿದ್ದು ಅದರಂತೆ ಪಟ್ಟದಲ್ಲಿ ಇಂದು ವಿಜಯೋತ್ಸವನ್ನು ಆಚರಿಸುತ್ತಿದೇವೆ
ಸದರಿ ಯಾತ್ರೆಯಲ್ಲಿ ಮಾಜಿ ಸೈನಿಕರು,ನಿವೃತ್ತ ಸರಕಾರಿ ನೌಕರರು, ಶಾಲಾ ಕಾಲೇಜುಗಳ ಶಿಕ್ಷಕರು ಉಪನ್ಯಾಸಕರು ವಿವಿಧ ಶಾಲಾಕಾಲೇಜುಗಳು ವಿದ್ಯಾರ್ಥಿ ವಿದ್ಯಾರ್ಥಿನಿಯರು ತಿರಂಗಾ ರ‍್ಯಾಲಿಯಲಿ ನಡೆದು ಬಂದರು
ಈ ಸಂದರ್ಭದಲ್ಲಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಅಮರೇಶಪ್ಪ ಹೂನೂರು, ಮಾಜಿ ಸೈನಿಕರ ಅಧ್ಯಕ್ಷ ವೀರನಗೌಡ ಪಾಟೀಲ್ ಬಯ್ಯಾಪುರ, ಡಾ ಅಮರೇಗೌಡ ಪಾಟೀಲ್, ಶರಣಪ್ಪ ಮೇಟಿ, ಬಸನಗೌಡ ಮೇಟಿ, ಅಯ್ಯಪ್ಪ ವಕೀಲ ವೀರನಗೌಡ ಪಾಟೀಲ್, ಬಸನಗೌಡ ಚಿತ್ತಾಪುರ, ಜ್ಯೋತಿ ಸುಂಕದ,ನಾಗರತ್ನ ಸಕ್ರಿ ಸೇರಿದಂತೆ ನೂರಾರು ಜನರು ಇದ್ದರು

WhatsApp Group Join Now
Telegram Group Join Now
Share This Article