ನಕಲಿ ವೈದ್ಯರ ಹಾವಳಿ ತಡೆಗೆ ಆರೋಗ್ಯ ಸಚಿವರಿಗೆ ಮನವಿ,ಕ್ರಮಕ್ಕೆ ಒತ್ತಾಯ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ಜಿಲ್ಲೆ ಹಾಗೂ ಹೊರಜಿಲ್ಲೆ ಲಿಂಗಸಗೂರು ತಾಲೂಕು ಸೇರಿದಂತೆ ಎಲ್ಲೆಡೆ ನಕಲಿ ವೈದ್ಯರ ಹಾವಳಿ ಹೆಚ್ಚುತಿದ್ದು ಕೂಡಲೇ ಆರೋಗ್ಯ ಇಲಾಖೆ ಕ್ರಮ ಜರುಗಿಸಿ ನಕಲಿ ವೈದ್ಯರ ಹಾವಳಿ ತಡೆಯುವಂತೆ ಒತ್ತಾಯಿಸಿ ಆರ್ ಟಿ ಐ ಕಾರ್ಯಕರ್ತ ಎಂ ಡಿ ಇಸ್ಮಾಯಿಲ್ ಆರೋಗ್ಯ ಸಚಿವರಿಗೆ ಮನವಿ ಸಲ್ಲಿಸಿ ಕ್ರಮಕ್ಕೆ ಒತ್ತಾಯಿಸಿದ್ದಾರೆ
ಗ್ರಾಮೀಣ ಪ್ರದೇಶ ಹಾಗೂ ಕೆಲಪಟ್ಟಣಗಳಲ್ಲಿಯು ತಾವುಗಳು ವೈದ್ಯರೆಂದು ಯಾವುದೆ ವೈದ್ಯಕೀಯ ಪದವಿ ಪಡೆಯದೆ ವೈದ್ಯರ ಪ್ರಮಾಣ ಪತ್ರವು ಪಡೆಯದೆ ವೈದ್ಯರ ಸೋಗುಹಾಕಿಕೊಂಡು ರಾಜಾರೋಷವಾಗಿ ಕ್ಲಿನಿಕ್ ಗಳನ್ನು ತೆರೆದು ಆರ್ ಎಂ ಪಿ ಗಳೆಂದು ಹೇಳುತ್ತಾ ಕ್ಲಿನಿಕ್ ಗೆ ನಾಮಫಲಕ ಹಾಕಿಕೊಂಡು ಬಡಜನರಿಗೆ ಸುಲಿಗೆ ಮಾಡುವುದು ಒಂದೆಡೆಯದರೆ ಹಲವಾರು ಕಡೆಗಳಲ್ಲಿ ಜನರ ಜೀವವನ್ನೆ ತೆಗೆದ ಹಲವಾರು ನಿದರ್ಶನಗಳಿವೆ ಬಂಗಾಲಿ ವೈದ್ಯರೆಂದು ಹೇಳುತ್ತಾ ನಾವು ನಿಮಗೆ ಚೇರ್ ಚಿಕಿತ್ಸೆ ನೀಡುತ್ತೇವೆಂದು ಹೇಳುತ್ತಾ ಮುಗ್ದ ಜನರ ಆರೋಗ್ಯದ ಮೇಲೆ ಪ್ರಯೋಗ ಮಾಡುತ್ತಾ ಹಣ ವಸೂಲಿ ಮಾಡುತ್ತಾರೆ ಇನ್ನು ಕೆಲವರು ನಮಗೆ ದೇವರವಶವಿದೆ ಎಂದು ಹೇಳುತ್ತಾ ಜನರಿಗೆ ಇಲ್ಲದ ಸಲ್ಲದ ನಿಯಮಗಳನ್ನು ಹೇಳಿ ಹಣ ಕೀಳುತ್ತಾರೆ ಮತ್ತು ಹೆಣ್ಣುಮಕ್ಕಳಿಗೆ ಪ್ರೇತಭೂತಗಳ ಕಾಟವಿದೆ ಎಂದು ಹೆದರಿಸಿ ಅವರನ್ನು ಬಳಲಸಿಕೊಳ್ಳುವ ಧಂಧೆಯು ನಡೆಯುತ್ತಿದೆ
ಕೂಡಲೇ ಇಂತಹ ಢೋಂಗಿ ವೈದ್ಯರನ್ನು ತಡೆಯದೆ ಹೋದರೆ ಮುಗ್ದ ಜನರ ಹಣ ಹಾಗೂ ಜೀವ ಹೆಣ್ಣುಮಕ್ಕಳ ಮಾನವು ಹಾನಿಯಾಗುತ್ತದೆ ಇಂತಹ ನಕಲಿಗಳನ್ನು ತಡೆಯಬೇಕು
ಜಿಲ್ಲಾ ಹಾಗೂ ತಾಲೂಕಾ ಆರೋಗ್ಯ ಅಧಿಕಾರಿಗಳ ಹೆದರಿಕೆ ಇಲ್ಲದೆ ನಿರ್ಭಯವಾಗಿ ಕ್ಲಿನಿಕ್ ಆಸ್ಪತ್ರೆಗಳನ್ನು ನಡೆಸುತ್ತಿರುವವರ ಮೇಲೆ ಆರೊಗ್ಯ ಇಲಾಖೆಯ ನಿಯಮದಡಿಯಲ್ಲಿ ಕ್ರಮಜರುಗಿಸಿ ಅನಧೀಕೃತ ಕ್ಲಿನಿಕ್ ಗಳನ್ನು ಕೂಡಲೇ ಬಂದ್ ಮಾಡಿಸಿ ಅಂತಹ ನಕಲಿಗಳ ಮೇಲೆ ಕ್ರಮ ಜರುಗಿಸಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಿಗೆ ಬರೆದ ಮನವಿಯನ್ನು ಸಚಿವರಿಗೆ ಸಲ್ಲಿಸಿ ಒತ್ತಾಯಿಸಿದ್ದಾರೆ