ಸರ್ಜಾಪೂರ ಗ್ರಾ,ಪಂ ಪಿಡಿಓ ಮೇಲೆ ಕ್ರಮಕ್ಕೆ ಒತ್ತಾಯ: ಗ್ರಾಮೀಣ ಕೂಲಿ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಅನಿರ್ಧಿಷ್ಟಾವಧಿ ಧರಣಿ

Laxman Bariker
ಸರ್ಜಾಪೂರ ಗ್ರಾ,ಪಂ ಪಿಡಿಓ ಮೇಲೆ ಕ್ರಮಕ್ಕೆ ಒತ್ತಾಯ: ಗ್ರಾಮೀಣ ಕೂಲಿ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಅನಿರ್ಧಿಷ್ಟಾವಧಿ ಧರಣಿ
WhatsApp Group Join Now
Telegram Group Join Now

ಸರ್ಜಾಪೂರ ಗ್ರಾ,ಪಂ ಪಿಡಿಓ ಮೇಲೆ ಕ್ರಮಕ್ಕೆ ಒತ್ತಾಯ:
ಗ್ರಾಮೀಣ ಕೂಲಿ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಅನಿರ್ಧಿಷ್ಟಾವಧಿ ಧರಣಿ

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸುಗೂರ :ತಾಲೂಕಿನ ಹಲವು ಗ್ರಾಮ ಪಂಚಾಯತಿಗಳಲ್ಲಿ ಹಲವಾರು ಸಮಸ್ಯೆಗಳಿಂದಾಗಿ ಗ್ರಾಮಗಳ ಅಭಿವೃದ್ಧಿ ಕುಂಟಿತಗೊAಡಿದೆ ಗ್ರಾಮೀಣ ಕೂಲಿ ಕಾರ್ಮಿಕರಿಗೆ ಸಮಯಕ್ಕೆ ಸರಿಯಾಗಿ ವೇತನ ಪಾವತಿ ಮಾಡದಿರುವುದರಿಂದ ಕೂಲಿ ಕಾರ್ಮಿಕರು ತೊಂದರೆ ಅನುಭವಿಸುತ್ತಿದ್ದಾರೆ ಕೂಡಲೆ ಗ್ರಾಮ ಪಂಚಾಯತಿಗಳ ಸಮಸ್ಯಗಳನ್ನು ಪರಿಹರಿಸಬೇಕು ಎಂದು ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ಹಾಗೂ ರಾಜ್ಯ ಮಹಿಳಾ ಒಕ್ಕೂಟ ಎಸಿ ಕಛೇರಿ ಆವರಣದಲ್ಲಿ ಅನಿರ್ಧಿಷ್ಟಾವಧಿ ಧರಣಿ ಮಾಡುತ್ತಿರುವರು
ಎನ್‌ಎಮ್‌ಎಮ್‌ಸ್ ಆಯಪ್ ಮೂಲಕ ಬಿಎಪ್ ಮತ್ತು ಜಿಕೆಎಮ್ ಬೇಕಾಬಿಟ್ಟಿಯಾಗಿ ಹಾಜರಾತಿ ತೆಗೆದುಕೊಳ್ಳುತ್ತಾರೆ ಕೂಲಿ ಕಾರ್ಮಿಕರ ಸರಿಯಾದ ಸಮಯಕ್ಕೆ ಹಾಜರಾತಿ ಪಡೆದೆಯಿರುವದರಂದ ತೊಂದರೆಯಾಗುತ್ತಿದೆ ಮೇಸ್ತಿçಗಳಿಗೆ ಹಾಜರಾತಿಯನ್ನು ತೆಗೆದುಕೊಳಲು ಅವಕಾಶ ಮಾಡಿಕೊಡಬೇಕು.
ಕೂಲಿ ಕಾರ್ಮಿಕರು ಕೆಲಸ ಮಾಡುವ ಸ್ಥಳದಲ್ಲಿ ಕಾರ್ಮಿಕರಿಗೆ ಯಾವುದೇ ಸೌಲಭ್ಯಗಳನ್ನು ನೀಡುವುದಿಲ್ಲ. ಕುಡಿಯುವ ನೀರು, ನೆರಳು ಹಾಗೂ ಪ್ರಥಮ ಚಿಕಿತ್ಸೆಯಂತ ಯಾವುದೇ ಸೌಲಭ್ಯಗಳಿರುವುದಿಲ್ಲ. ಕೂಲಿ ಕಾರ್ಮಿಕರಿಗೆ ಸರ್ಕಾರದ ನಿಯಮದಂತೆ ವೇತನ ಪಾವತಿ ಮಾಡುವುದಿಲ್ಲ ಹಾಗೂ ಕಳೆದ ೧೬ ವರ್ಷಗಳಿಂದ ಕೂಲಿ ಕಾರ್ಮಿಕರಿಗೆ ಸಂಪೂರ್ಣ ವೇತನ ಪಾವತಿ ಮಾಡಿರುವುದಿಲ್ಲ ಎಂದು ಆಗ್ರಹಿಸಿರುವರು.
ಸರ್ಜಾಪೂರು ಗ್ರಾ.ಪಂ ಪಿಡಿಓ ಶೋಭಾರಾಣಿ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ತಮ್ಮ ಪತಿಯ ಹೊಲದಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡಿದ್ದಾರೆ ಇದರ ಬಗ್ಗೆ ಪತ್ರಿಕೆಗಳ ವರದಿಯಿಂದ ಎಚ್ಚಿತ್ತು ಪಿಡಿಓ ಸರ್ಕಾರಕ್ಕೆ ಹಣ ಮರುಪಾವತಿ ಮಾಡಿದರು. ಅವರ ವಿರುದ್ಧ ಮೇಲಾಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳದೆರಿವದು ಖಂಡನೀಯ.
ಹೊನ್ನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ರಾಮನಾಯಕನ ದೊಡ್ಡಿಗೆ ಕುಡಿಯುವ ನೀರಿಗಾಗಿ ತಾಲೂಕು ಪಂಚಾಯತಿ ಅನುದಾನದಲ್ಲಿ ಕೊಳವೆಬಾವಿ ಹಾಕಿಸಿದ್ದು ಆದರೆ ದೊಡ್ಡಿಗೆ ೨೪ ಗಂಟೆ ವಿದ್ಯುತ್ ಸಂಪರ್ಕ ಇರುವುದಿಲ್ಲ ದೊಡ್ಡಿಯಲ್ಲಿರುವ ಮನೆಗಳಿಗೆ ವಿದ್ಯುತ್ ಮೀಟರ್ ಅಳವಡಿಸಿದ್ದಾರೆ ಕೂಡಲೇ ಮೀಟರ್ ಅಳವಡಿಸಿದ ಗುತ್ತಿಗೆದಾರ ಹಾಗೂ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಈ ದೊಡ್ಡಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿ ತಾ.ಪಂ ಇಓ ಅವರಿಗೆ ಮನವಿ ಮಾಡಿರುವರು.
ಸಂದರ್ಭದಲ್ಲಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ಮುಖಂಡರಾದ ಗುಂಡಪ್ಪ ಯರಡೋಣ, ಮಂಜು, ಹನುಮಂತ, ಕುಬೇರ ಕುಪೆಗುಡ್ಡ, ದುರ್ಗಪ್ಪ, ಬಸವಂತಪ್ಪ,ಮAಜುನಾಥ, ಮೋಕ್ಷಮ್ಮ, ವೀರೇಶ ಹುಲಿಗೆವ್ವ, ಯಲ್ಲಪ್ಪ, ನಿಂಗಮ್ಮ ದುರಗಮ್ಮ, ಲಕ್ಷಿö್ಮ, ಶರಣಮ್ಮ, ದೇವಮ್ಮ, ಯಲ್ಲಮ್ಮ, ಮಾಳಮ್ಮ, ಅಜರಬೇಗಂ, ಅಂಬಮ್ಮ,ಹನುಮವ್ವ ಹಾಗೂ ಇತರರು ಇದ್ದರು.

WhatsApp Group Join Now
Telegram Group Join Now
Share This Article