ಕೂಡ್ಲಿಗಿ ಎನ್ ಎಚ್ನಲಿ ಕಾರ್ ಅಪಘಾತ, ಲಿಂಗಸುಗೂರಿನ ಇಬ್ಬರ ಯುವಕರು ಸಾವು
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸುಗೂರ ಪಟ್ಟಣದಿಂದ ಕೇರಳ ಪ್ರವಾಸಕ್ಕೆ ಹೊರಟಿದ ಕಾರ್ ಅಪಘಾತದ ವಿಜಯನಗರ ಜಿಲ್ಲೆ ಕೂಡ್ಲಗಿ ಹತ್ತಿರ ಹೆದ್ದಾರಿ ರಸ್ತೆ ಡಿವೈಡರಗೆ ಡಿಕ್ಕಿ ಹೊಡೆದ ಪರಿಣಾಮ ರವಿವಾರ ಬೆಳೆಗಿನ ಜಾವ ಕಾರ್ ಜಖಂಗೊಂಡು ವಿನಯ ನಂದಿಕೂಲಮಠ(೨೭) ಚನ್ನಬಸವ ಹುರಕಡಲ್ಲಿ (೨೭) ಸಾವನಪ್ಪಿದ್ದಾರೆ
ಉಳಿದ ಐವರು ಸಾಗರ ಕಟ್ಟಿಮನಿ, ಗೌತಮ್ಮ, ಸಚಿನ್, ಪ್ರಭು, ಕಾರ್ತಿಕರವರಿಗೆ ಗಂಭೀರ ಗಾಯಗಳಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
¸ವಿನಯ ನಂದಿಕೋಲ್ ಮಠ ಸಾಪ್ಟವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ಹೇಳಲಾಗುತ್ತಿದ್ದು ಮತ್ತೊಬ್ಬ ಯುವಕ ಚನ್ನಬಸವ ಹುರಕಡ್ಲಿ ವ್ಯಾಪಾರ ಮಾಡುತ್ತಿದ್ದ ಎಂದು ತಿಳಿದುಬಂದಿದೆ
ಪಟ್ಟಣದ ಪರ್ತಕರ್ತ ಬಿ.ಎ ನಂದಿಕೋಲಮಠ ಸಹೋದರ ಚಂದ್ರಶೇಖg ನಂದಿಕೊಲಮಠ ನಿವೃತ್ತ ಶಿಕ್ಷಕರ ಪುತ್ರ ವಿನಯ ನಂದಿಕೊಲಮಠ ಹಾಗೂ ವ್ಯಾಪಾರಿ ಹುರಕಡಲ್ಲಿ ಮಲ್ಲಿಕರ್ಜುನ ಪುತ್ರ ಚನ್ನಬಸವ ಸ್ಥಳದಲ್ಲಿ ಸಾವುನಪ್ಪಿದ್ದಾರೆ.
ಮೃತರ ಅಂತ್ಯಕ್ರಿಯೆ ಪಟ್ಟಣದ ರುದ್ರಭೂಮಿಯಲ್ಲಿ ಜರಗಿತ್ತು.
ಸಂತಾಪ:-
ತಾಲೂಕಿನ ವಿವಿಧ ಮಠಾಧೀಶರು,ಸ್ವಾಮಿಜಿಗಳು ಹಾಗೂ ಸಮಾಜದ ಭಾಂದವರು ಮತ್ತು ರಾಜಕೀಯ ಗಣ್ಯವ್ಯಕ್ತಿಗಳು ಮೃತರ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವಾನ ಹೇಳಿದರು.