ಇಂದು ಕಸಬಾಲಿಂಗಸುಗೂರ ಕುಪ್ಪಿಭೀಮದೇವರ ಜಾತ್ರೆ ರಥೋತ್ಸವ.

Laxman Bariker
ಇಂದು ಕಸಬಾಲಿಂಗಸುಗೂರ ಕುಪ್ಪಿಭೀಮದೇವರ ಜಾತ್ರೆ ರಥೋತ್ಸವ.
WhatsApp Group Join Now
Telegram Group Join Now

ಇಂದು ಕಸಬಾಲಿಂಗಸುಗೂರ ಕುಪ್ಪಿಭೀಮದೇವರ ಜಾತ್ರೆ ರಥೋತ್ಸವ.

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು:ರಾಯಚೂರು ಜಿಲ್ಲೆಯ ಲಿಂಗಸುಗೂರ ಸ್ಥಳೀಯ ಕಸಬಾಲಿಂಗಸುಗೂರ ಗ್ರಾಮದ ಆರಾಧ್ಯದೈವ ಶ್ರೀ ಕುಪ್ಪಿಭೀಮಸೇನ ದೇವರ ಜಾತ್ರಾಮಹೋತ್ಸದಂಗವಾಗಿ ದಿ,೧೫ರಂದು ಸಂಜೆ ೬ಗಂಟೆಗೆ ಸಾರ್ವಜನಿಕ ಮಹಾರಥೋತ್ಸವ ವಿಜ್ರಂಭಣೆಯಿಂದ ಜರುಗುವದು.

ಕಸಬಾ ಲಿಂಗಸುಗೂರ ಉತ್ತರ ಭಾಗಕ್ಕೆ ಹಿಂದಿನ ಕುಪ್ಪಿ ಎಂಬ ಗ್ರಾಮದಲ್ಲಿ ಶ್ರೀ ಕುಪ್ಪಿಭೀಮನ ದೇವಾಲಾಯವಿದ್ದು ಇದು ೧೬-೧೭ನೇಶತಮಾನಕ್ಕೆ ಸೇರಿದ ದೇವಾಲಯವಾಗಿದ್ದು ಇಲ್ಲಿ ಕುಪ್ಪಿಭಿಮನ ವಿಗ್ರಹವನ್ನು ಜನಮೇಜಯ ರಾಜನಿಂದ ಪ್ರತಿಷ್ಠಾಪಿಸಲ್ಪಟ್ಟಿತೆಂಬ ಐತ್ಯಿಯವಿದೆ. ನಂತರ ಹಂಪಿಯ ವ್ಯಾಸರಾಯರು ವಿಶೇಷವಾಗಿ ಅರ್ಚಿಸಿದರು.ಕುಪ್ಪಿಭೀಮ ದೇವಾಲಯವು ದಕ್ಷಿಣಭಿಮುಖವಾಗಿದೆ ಸರಳವಾದ ಅಧಿಷ್ಠಾನದ ಮೇಲೆಗರ್ಭಗೃಹವಿದೆ ಮತ್ತುಸಭಾ ಮಂಟಪಗಳಿವೆ. ಇಲ್ಲಯ ವಾಸ್ತುರಚನೆ ೧೭ನೇ ಶತಮಾನದ ಇಂಡೋಸಾರ್ಸನಿಕ ವಾಸ್ತುಶೈಲಿ ಕಮಾನುಗಳ ರಚನೆಯ ಮಾದರಿ ಹೊಂದಿದೆ.

ರಥ- ಕುಪ್ಪಿಭೀಮತೇರನ್ನು ಮರದಿಂದ ತಯಾರಿಸಲಾಗಿದೆ ಇದರ ಎತ್ತರ ೩೬ಅಡಿ ಈ ತೇರು ತಾಲೂಕಿನಲ್ಲಿಯೇ ದೊಡ್ಡ ತೇರಾಗಿದೆ ರಥದ ನಿರ್ಮಾಣವನ್ನು ಗ್ರಾಮದ ವಿಶ್ವಕರ್ಮ ಬ್ರಾಹ್ಮಣರಾದ ಈರಪ್ಪ ಬಡಿಗೇರ ನಿರ್ಮಿಸಿದ್ದು ಈ ತೇರಿಗೆ ಮೊದಲು ಮರದಿಂದ ನಿರ್ಮಿಸಿದ ಗಾಲಿಗಳಿದ್ದು ನಂತರ ಗಾಲಿಗಳ ಜಿರ್ಣೋದ್ದಾರಕ್ಕಾಗಿ ಗ್ರಾಮಸ್ಥರು ಮತ್ತು ಭಕ್ತಾದಿಗಳು ಸೇರಿ ಶಿಲಾಗಾಲಿಗಳನ್ನು ಮಾಡಿಸಿದರು, ಸ್ಥಳೀಯ ಹರಿದಾಸರಾದ ಅಭಿನವ ಪ್ರಾಣೇಶದಾಸರು ತೇರನ್ನು ಕುರಿತು ಸುಳಾದಿ ರಚಿಸಿರುವರು.

ಪಾದುಕೆ- ಕುಪ್ಪಿಭಿಮನ ಪಾದುಕೆಯನ್ನು ಎತ್ತಿನಚರ್ಮದಿಂದ ಗ್ರಾಮದ ನಡುವಿನಮನಿ ಹುಸೇನಪ್ಪನವರ ಮನೆತನದವರು ಇಂದಿಗೂ ಮಾಡಿಕೊಡುತ್ತಾರೆ
ಮಾರ್ಗಶಿರ ಶುದ್ದ ಪುಣಿಮೆಯಂದು ರಥೋತ್ಸವ ಜರುಗಲಿದ್ದು ಬೆಳಿಗ್ಗೆ ಬ್ರಾಹ್ಮಣರಿಂದ ರಥಾಂಗಹೋಮ ಪೂಜೆ ಜರುಗುವದು ನಂತರ ಸಂಜೆ ಮಹಾರಥೋತ್ಸವ ವಿಜ್ರಂಭಣೆಯಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಜರುಗುವದು
ಈ ದೇವಸ್ಥಾನ ಮುಜರಾಯಿ ಇಲಾಖೆಗೆ ಒಳಪಟ್ಟಿದ್ದು ತಹಶೀಲ್ದಾರ ಅಧ್ಯಕ್ಷತೆಯಲ್ಲಿ ಆಡಳಿತ ಸಮಿತಿ ಇರುತ್ತದೆ ಕುಪ್ಪಿಭೀಮದೇವರ ದರ್ಶನವನ್ನು ಹಲವಾರು ಗಣ್ಯರು ಪಡೆದಿದ್ದು ವಿನೋಭಾಭಾವೆ, ಅಣ್ಣರಾವ ಗಣಮುಖಿ, ಮಾಜಿ ಪ್ರಧಾನಿ ಅಟಲಬಿಹಾರಿ ವಾಜಪೇಯಿ ಅನೇಕ ಭಕ್ತರು ದರ್ಶನ ಪಡೆದು ಪುನಿತರಾಗಿರುವರು.

WhatsApp Group Join Now
Telegram Group Join Now
Share This Article