ಲಿಂಗಸಗೂರು: ಕಾರಿನಲ್ಲಿಟ್ಟ 3ಲಕ್ಷಹಣದ ಕ್ಯಾಶ್ ಬ್ಯಾಗ್ ಕದ್ದಕಳ್ಳರು
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು: ಬ್ಯಾಂಕಿನಿಂದ ಡ್ರಾ ಮಾಡಿ ಕಾರಿನಲ್ಲಿ ಇಟ್ಟಿದ್ದ 3ಲಕ್ಷಹಣ ಹಾಗೂ ಮೂರು ಬ್ಯಾಂಕ್ ಪಾಸ್ ಬುಕ್ ಬುಧವಾರ ಮಧ್ಯಾಹ್ನ ಕಳ್ಳತನ ವಾದ ಪ್ರಕರಣ ದಾಖಲಾಗಿದ್ದು ಪೊಲೀಸ್ ಪತ್ತೆಕಾರ್ಯದಲಿ ತೊಡಗಿದ್ದಾರೆ
ದಿ10-07-24ರಂದು ತಾಲ್ಲೂಕಿನ ಬಯ್ಯಾಪುರ ಗ್ರಾಮದ ತಿಮ್ಮಯ್ಯ ತಂ ಕೃಷ್ಣಯ್ಯ ದಾಸರ ಎನ್ನುವವರು ತಮ್ಮ ಟ್ರ್ಯಾಕ್ಟರ ಮೇಲೆ ಮೂರು ಲಕ್ಷ ಸಾಲಪಡೆದಿದ್ದರು ಸದರಿ ಹಣವನ್ನು ಎಸ್ ಬಿ ಐ ಬ್ಯಾಂಕಿನಿಂದ ಬುಧವಾರ ಮಧ್ಯಾಹ್ನ 12-30ಸುಮಾರಿಗೆ ಡ್ರಾ ಮಾಡಿಕೊಂಡು ಹಣವನ್ನು ಕ್ಯಾಶ್ ಬ್ಯಾಗಿನಲಿ ಹಾಕಿಕೊಂಡು ತಮ್ಮ ಕಾರ್ ನಲಿ ಪಟ್ಟಣದ ರಾಯಚೂರು ರಸ್ತೆಯಲಿರುವ ಮಹಿಂದ್ರ ಟ್ರ್ಯಾಕ್ಟರ್ ಶೋಂ ರೂಂ ಹತ್ತಿರ ಕಾರ್ ನಿಲ್ಲಿಸಿ ಕ್ಯಾಶ್ ಬ್ಯಾಗ್ ಕಾರಿನಲ್ಲಿಟ್ಟು ಶೋಂ ರೂಂ ನ ಮ್ಯಾನೇಜರ ಹತ್ತಿರ ಮಾತನಾಡಲು ಒಳಹೋಗಿದ್ದಾರೆ
ಮ್ಯಾನೇಜರ್ ನನ್ನು ಭೇಟಿಯಾಗಿ ಹೊರಬಂದು ಕಾರಿನಲಿ ನೋಡಿದರೆ ಕ್ಯಾಶ್ ಬ್ಯಾಗ್ ಕಳ್ಳರು ಕದ್ದೊಯ್ಯದಿದ್ದರು ಕಾರಿನ ಚಾಲಕ ಹುಲಗಪ್ಪ ತಂ ಯಮನಪ್ಪನನ್ನು ವಿಚಾರಿಸಿದರೆ ನಾನು ಶೌಚಕ್ಕೆ ಹೋಗಿದ್ದೆ ನೋಡಿಲ್ಲ ಎಂದಿದ್ದಾನೆ
ಹಾಡಹಗಲೆ ಹಣ ಕಳೆದುಕೊಂಡ ತಿಮ್ಮಯ್ಯ ಲಿಂಗಸಗೂರು ಠಾಣೆಯಲಿ ಕಳ್ಳತನ ಪ್ರಕರಣ ದಾಖಲಿಸಿದ್ದಾರೆ
ಹೆಚ್ಚುತ್ತಿರುವ ಕಳ್ಳತನ ಗಳು:ಪಟ್ಟಣ ಹಾಗೂ ಸುತ್ತಮುತ್ತ ಕಳ್ಳತನ ದ ಪ್ರಕರಣ ಗಳು ಹೆಚ್ಚು ತಿದ್ದು ಸಾರ್ವಜನಿಕ ರು ಆತಂಕಕ್ಕೆ ಈಡಾಗಿದ್ದಾರೆ