ಪಿಒಪಿ ಗಣೇಶಮೂರ್ತಿ ನಿಷೇಧವಿದ್ದರು ತಯಾರಿಕೆಗೆ ಕಡಿವಾಣವಿಲ್ಲ

Laxman Bariker
ಪಿಒಪಿ ಗಣೇಶಮೂರ್ತಿ ನಿಷೇಧವಿದ್ದರು ತಯಾರಿಕೆಗೆ ಕಡಿವಾಣವಿಲ್ಲ
WhatsApp Group Join Now
Telegram Group Join Now

ಪಿಒಪಿ ಗಣೇಶಮೂರ್ತಿ ನಿಷೇಧವಿದ್ದರು ತಯಾರಿಕೆಗೆ ಕಡಿವಾಣವಿಲ್ಲ

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು:ಗಣೇಶ ಚೌತಿ ಹತ್ತಿರವಾಗುತ್ತಿರುವಂತೆ ಪಟ್ಟಣ ಸೇರಿದಂತೆ ಎಲ್ಲೆಡೆ ಗಣೇಶಮೂರ್ತಿಗಳ ತಯಾರಿಕೆ ಭರ್ಜರಿಯಾಗಿ ನಡೆದಿದ್ದು ಪಿಒಪಿ ಗಣೇಶಮೂರ್ತಿ ನಿಷೇಧವಿದ್ದರು ತಯಾರಿಕೆಗೆ ಕಡಿವಾಣವಿಲ್ಲದಂತಾಗಿದೆ ಎಂದು ಪರಿಸರವಾದಿಗಳ ಆಕ್ರೋಶವಾಗಿದೆ

ಪಿಒಪಿ ಗಣೇಶಮೂರ್ತಿಗಳ ತಯಾರಿಕೆ ಹಾಗೂ ಮಾರಾಟವನ್ನು ಸರಕಾರ ರದ್ದುಪಡಿಸಿದೆ ಆದರೆ ಪಟ್ಟಣದಲ್ಲಿ ಪಿಓಪಿ ಗಣೇಶಮೂರ್ತಿಗಳ ತಯಾರಿ ಭರ್ಜರಿಯಾಗಿ ನಡೆದಿದೆ ಅಲ್ಲದೆ ವಿವಿಧ ರೀತಿಯಬಣ್ಣಗಳನ್ನು ಹಾಕಲಾಗುತ್ತಿದೆ ಇಂತಹ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡುವಾಗ ನೀರಿನಲ್ಲಿ ಹಾಕುವುದರಿಂದ ನೀರು ಕಲುಷಿತವಾಗುತ್ತದೆ ಅದಕ್ಕಾಗಿ ಸರಕಾರ ಪಿಒಪಿ ಗಣೇಗಮೂರ್ತಿಗಳನ್ನು ತಯಾರಿಕೆ ಮಾಡಬಾರದು ಮತ್ತು ಮಾರಾಟ ಮಾಡಬಾರದು ಎಂಬುದು ಕಟ್ಟು ನಿಟ್ಟಾದ ಆದೇಶವಿದ್ದರು ನಿಯಮವೆನ್ನುವುದು ಕೇವಲ ಕಾಗದದಲ್ಲಿ ಎನ್ನುವಂತಾಗಿದೆ ಪಟ್ಟಣದಲ್ಲಿಯೆ ಪಿಒಪಿ ಗಣೇಶಗಳನ್ನು ತಯಾರು ಮಾಡುತ್ತಿದ್ದರು ಪುರಸಭೆಯವರಾಗಲಿ ಅಥವ ಪೊಲೀಸ್ ಇಲಾಖೆಯಾಗಲಿ ಅತ್ತ ಗಮನಹರಿಸಿಲ್ಲ
ಪಟ್ಟಣದಲ್ಲಿ ಸಣ್ಣ ಗಣೇಶನಿಂದ ಸುಮಾರು ೧೩ ಫೀಟ್ ಎತ್ತರದ ಗಣೇಶನವರೆಗೆ ತಯಾರಿ ಮಾಡಲಾಗುತ್ತಿದ್ದು ಲಕ್ಷಾಂತರದ ಗಣೇಶಗಳು ಇಲ್ಲಿ ದೊರೆಯುತ್ತಿವೆ ಎನ್ನಲಾಗುತ್ತಿದೆ ಹಲವಾರು ದಿನಗಳಿಂದ ಗಣೇಶಮೂರ್ತಿಗಳ ತಯಾರಿಕೆ ಮಾತ್ರ ನಿರಂತರವಾಗಿದೆ
ಗೌರಿ ಗಣೇಶ ಚತುರ್ಥಿ ಹಬ್ಬದ ಸಮಯದಲ್ಲಿ ಗಣೇಶ ವಿಗ್ರಹ ತಯಾರು,ಸಂಗ್ರಹ ಮಾರಾಟ ಮತ್ತು ವಿಸರ್ಜನೆಯಿಂದ ಪರಿಸರಕ್ಕೆ ಹಾನಿಯಾಗುವಂತಹ ವಸ್ತುಗಳು ಮತ್ತು ಲೋಹ ಮಿಶ್ರಿತ ಬಣ್ಣಗಳನ್ನು ಉಪಯೋಗಿಸದೆ ನೈಸರ್ಗಿಕ ಜಲಮೂಲಗಳಿಗೆ ಪೂರಕವಾದ ನೈಸರ್ಗಿಕ ಬಣ್ಣಗಳಿಂದ ತಯಾರಿಸಿರುವ ಮಣ್ಣಿನ ಚಿಕ್ಕಚಿಕ್ಕ ಮೂರ್ತಿಗಳನ್ನು ಖರೀದಿಸಿ ಗೌರಿಗಣೇಶ ಹಬ್ಬ ಆಚರಣೆ ಮಾಡುವುದು ಸೂಕ್ತವೆನ್ನಲಾಗುತ್ತಿದೆ
ಭೌತಿಕ ಹಾಗೂ ರಾಸಾನಿಕ ಗುಣಗಳು ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುವುದಲ್ಲದೆ ಪ್ರಾಣಿ ಪಕ್ಷಿ ಹಾಗೂ ಜಲಚರಗಳ ಜೀವಕ್ಕೆ ಅಪಾಯವಾಗುತ್ತದೆ ಸಾರ್ವಜನಿಕರ ಆರೋಗ್ಯಕ್ಕೆ ಧಕ್ಕೆ ಉಂಟಾಗುತ್ತದೆ
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಈ ಹಬ್ಬದ ಆಚರಣೆಯಿಂದ ನೈಸರ್ಗಿಕ ಜಲಮೂಲ ರಕ್ಷಿಸುವ ನಿಟ್ಟಿನಲ್ಲಿ೨೦೧೬ರಲ್ಲಿ ಆದೇಶ ಹೊರಡಿಸಿ ನಿರ್ಬಂದಿಸಿದ್ದಲ್ಲದೆ ಅದರಂತೆ ಪಿಒಪಿಗಳನ್ನು ತಡೆಯುವಂತೆ ಆದೇಶಿಸುತ್ತದೆ ಆದರು ಎಲ್ಲೆಡೆ ಪಿಒಪಿ ಗಣೇಶಗಳ ತಯಾರಿ ಮಾತ್ರ ಅದ್ದೂರಿಯಾಗಿ ನಡೆದಿದ್ದು ತಡೆಯುವವರಾರು ಎನ್ನುವಂತಾಗಿದೆ

WhatsApp Group Join Now
Telegram Group Join Now
Share This Article