ಇಂತವರು ಇರುತ್ತಾರೆ!!!? (ಪರಿಚಯ ಲೇಖನ)
ಲಕ್ಷಾಂತರ ಬೆಲೆಬಾಳುವ ಭೂಮಿ ಶಾಲೆಗೆ ದಾನ, ವೇತನವಿಲ್ಲದೆ ಮಕ್ಕಳಿಗೆ ಪಾಠ ಮಾಡುವ ಶಿಕ್ಷಕ ಬಸವರಾಜ ಮಾಲಿಪಾಟೀಲ್
ಕಲ್ಯಾಣ ಕರ್ನಾಟಕ ವಾರ್ತೆ
ದೇವದುರ್ಗ:ಸರಕಾರಿ ಶಾಲೆಯಲ್ಲಿ ರಚನೆಯಾಗುವ ಎಷ್ಟೊ ಎಸ್ಡಿಎಂಸಿಗಳು ಬರುವ ಅನುದಾನದಲ್ಲಿ ನಮಗೇನು ಪಾಲು ಎಂದು ಕಾದುಕುಳಿತು ಶಿಕ್ಷಕರೊಡನೆ ತಕರಾರು ಮಾಡುವ ಹಲವಾರು ಜನರ ನಡುವೆ ಅಪರೂಪದ ವ್ಯಕ್ತಿಗಳು ಇರುವುದುಂಟು ಅಂತಹ ಅಪರೂಪದಲ್ಲಿ ಅಪರೂಪದ ವ್ಯಕ್ತಿ ದೇವದುರ್ಗ ತಾಲೂಕಿನ ಹೇರುಂಡಿ ಗ್ರಾಮದ ಹವ್ಯಾಸಿ ಶಿಕ್ಷಕ ಬಸವರಾಜ ಮಾಲಿಪಾಟೀಲ್
sಸರಕಾರಿ ಶಾಲೆಗಳು ಉಳಿದರೆ ಬಡವರ ಮಕ್ಕಳು ಶಿಕ್ಷಣ ಪಡೆದಾರು ಎನ್ನುವ ಆಲೋಚನೆ ಮಾಡುವ ಕಾಲ ಬಂದಿದೆ ಏಕೆಂದರೆ ಖಾಸಗಿ ಶಾಲೆಗಲ ಅಬ್ಬರದಲ್ಲಿ ರಾಜ್ಯದಲ್ಲಿ ಹಲವಾರು ಸರಕಾರಿ ಶಾಲೆಗಳು ಬಾಗಿಲು ಮುಚ್ಚುತ್ತಿವೆ ಇದು ಹೀಗೆ ಮುಂದುವರೆದರೆ ಅಪಾಯಕಾರಿ ಕಟ್ಟಿಟ್ಟಬುತ್ತಿ ಎಂಬುದು ವಿಚಾರವಮತರ ಮಾತಾಗಿದೆ
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಹೇರುಂಡಿ ಎಂಬ ಪುಟ್ಟ ಗ್ರಾಮ ಈ ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇದ್ದು ಇದರಲ್ಲಿ ಒಂದನೇ ತರಗತಿಯಿಂದ ಎಂಟನೆ ತರಗತಿಯವರೆಗೆ ಮಕ್ಕಳು ಶಿಕ್ಷಣ ಪಡೆಯುತಿದ್ದಾರೆ ಇಲ್ಲಿ ಶಾಲೆ ಇದೆ ಮಕ್ಕಳು ಅಕ್ಷರ ಕಲಿಯುತಿದ್ದಾರೆ ಎನ್ನುವುದೆ ಖುಷಿಯ ವಿಚಾರ ಯಾಕೆಂದರೆ ಒಂದು ಹಂತದಲ್ಲಿ ಅಕ್ಷರ ಕಲಿಕೆಯಲ್ಲಿ ಅತ್ಯಂತ ಹಿಂದುಳಿದ ತಾಲೂಕು ಎಂದು ಕರೆಯಲಾಗುತ್ತಿತ್ತು ಇಂತಹ ತಾಲೂಕಿನ ಹೇರುಂಡಿ ಗ್ರಾಮದಲ್ಲಿ ನಮ್ಮ ಪತ್ರಿಕೆಗೆ ಅಪರೂಪದ ವ್ಯಕ್ತಿಯೊಬ್ಬರು ಕಂಡಿದ್ದು ಅವರ ಸೇವೆ ಅದ್ಭುತವಾಗಿದೆ ಅದು ಏನು ಅಂತೀರಾ?
ದೇವದುರ್ಗ ತಾಲೂಕಿನಲ್ಲಿ ನೀರಾವರಿ ಬಂದಿರುವುದರಿAದ ಭೂಮಿಯ ಬೆಲೆ ಗಗನಕ್ಕೆ ಏರಿದೆ ಆದರು ಅದನ್ನು ಬದಿಗೆ ಸರಿಸಿ ಬಸವರಾಜ ಮಾಲಿಪಾಟೀಲ್ ತಮ್ಮ ಜಮೀನನ್ನು ಸರಕಾರಿ ಶಾಲೆಗೆ ದಾನ ಮಾಡಿದ್ದಾರೆ ಅಲ್ಲದೆ ಅವರಿಗೆ ೬೫ ವರ್ಷ ವಯಸಾಗಿದ್ದು ಮನೆಯಲ್ಲಿ ಕೂಡದೆ ಶಾಲೆಗೆ ಬಂದು ಮಕ್ಕಳಿಗೆ ಹಿಂದಿ ಭಾಷೆಯ ಪಾಠವನ್ನು ಹೇಳಿಕೊಡುತ್ತಿದ್ದಾರೆ ಸದರಿ ಶಾಲೆಯಲ್ಲಿ ಹಿಂದಿ ಶಿಕ್ಷಕರು ಇಲ್ಲದಿರುವುದರಿಂದ ಆ ಖಾಲಿಸ್ಥಾನವನ್ನು ಮತ್ತು ಇದರಿಂದ ಮಕ್ಕಳು ಹಿಂದಿ ಪಾಠದಿಂದ ವಂಚಿತರಾಗಬಾರದೆಂದು ಯಾವುದೆ ವೇತನವನ್ನು ಪಡೆಯದೆ ವಿದ್ಯಾರ್ಥಿಗಳಿಗೆ ಹಿಂದಿಪಾಠ ಮಾಡುತ್ತಾ ನಮ್ಮೂರಿನ ಮಕ್ಕಳು ಅಕ್ಷರ ಕಲಿಯುವಲ್ಲಿ ಹಿಂದೆ ಬೀಳಬಾರದು ಎಂಬ ದೂರದೃಷ್ಟಿಯಿಂದ ಶಾಲೆಗೆ ಭೂಮಿ ನೀಡಿದ್ದಲ್ಲದೆ ಉಚಿತವಾಗಿ ಹಿಂದಿ ಪಾಠವನ್ನು ಮಾಡುತ್ತಿದ್ದಾರೆ ಎಂದರೆ ಅವರ ಸೇವೆ ಬೆಲೆಕಟ್ಟಲಾಗದ ಸೇವೆಯಾಗಿದೆ ಸರಕಾರ ಇಂತವರನ್ನು ಗುರುತಿಸಿ ಪ್ರೋತ್ಸಾಹಿಸಿದರೆ ಇಂತಹ ಮನಸುಗಳು ಇನ್ನು ಹೆಚ್ಚಾಗಬಹುದು ಹಲವಾರು ಸ್ವಹಿತಾಸಕ್ತಿಗಳ ನಡುವೆ ಇಂತಹ ಅಪರೂಪದ ವ್ಯಕ್ತಿಗಳು ಇರುತ್ತಾರೆ ಅಲ್ಲವೇ!!?
ಮಾಹಿತಿ:ರಾಜನಗೌಡ್ರ ಕಲಾವಿದರು ಲಿಂಗಸಗೂರು, ಪರಿಚಯಲೇಖನ-ಲಕ್ಷ್ಮಣ ಬಿ


