ಲಿಂಗಸಗೂರು:ಪರಿಶಿಷ್ಟ ಜಾತಿಗೆ ಬಂದ ಅನುದಾನ ಸಮಾಜ ಕಲ್ಯಾಣ ಅಧಿಕಾರಿ ಸಿಬ್ಬಂದಿಯಿಂದ ದುರ್ಬಳಕೆ ಕ್ರಮಕ್ಕೆ ಒತ್ತಾಯ!
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸುಗೂರ:ಸರಕಾರ ಪರಿಶಿಷ್ಠ ಸಮುದಾಯಕ್ಕೆ ಬಂದ ನೂರಾರು ಕೋಟಿ ರೂ ತಾಲೂಕಿನ ಸಮಾಜಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ವಸತಿ ನಿಲಯಗಳ ಮೇಲ್ವಿಚಾರಕರಿಂದ ಅನುದಾನ ದುರ್ಬಳಕೆಯಾಗುತ್ತಿದ್ದು ಇದರಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ತಾ.ಪಂ ಅಧಿಕಾರಿಗಳು ಸೇರಿಹಣ ಲೂಟಿ ನಡೆಸಿದ್ದು ಮೀಸಲು ಕ್ಷೇತ್ರದ ದೌರ್ಭಾಗ್ಯವೆ ಸರಿ ಕೂಡಲೆ ಸಮಗ್ರವಾಗಿ ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿಸ್ಥರ ವಿರುದ್ದ ಕಾನೂನು ಕ್ರಮಕ್ಕೆ ದಲಿತ ಮುಖಂಡ ಭೀಮ ಘರ್ಜನೆ ತಾಲೂಕು ಅಧ್ಯಕ್ಷ ಬಸವರಾಜ ಮರಳಿ ಒತ್ತಾಯಿಸಿರವರು,
ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ ೨೦೨೦ರಿಂದ ೨೪ರವರೆಗೆ ಆಹಾರ ಸಾಮಗ್ರಿ ಸರಬರಾಜ ಮಾಡುತ್ತಿರುವ ರಾಯಚೂರ ಶಿರಡಿ ಸಾಯಿ ಏಜನ್ಸಿ ಇನ್ನು ಹಳೆದರದಲ್ಲಿ ಅಂದರೆ ಕೊಳಿ ಮಾಂಸ೬೦ರೂ ಮೊಟ್ಟೆ ೪ರೂ ಹುಣಿಸೆಹನ್ನು ಇತರೆ ಬೊಗಸ ಬಿಲ್ ನೀಡಲಾಗುತ್ತದೆ ಈ ಅವಧಿಯಲ್ಲಿ ಯಾವದೆ ವಸತಿ ನಿಲಯಗಳಿಗೆ ನೇರವಾಗಿ ಸರಬರಾಜ ಮಾಡದೆರುವದರಿಂದ ವಸತಿ ನಿಲಯ ಮೇಲ್ವಿಚಾರಕ ವಾರ್ಡನಗಳು ಕಿರಾಣಿಅಂಗಡಿಗಳಿಂದ ಖರೀದಿಸುತ್ತಿರುವದರಲ್ಲಿ ಸಂಪೂರ್ಣ ಗೊಲಮಾಲ ನಡೆದಿದೆ ಹಾಗೂ ವಸತಿ ನಿಲಯ ವಿದ್ಯಾರ್ಥಿಗಳಿಗೆ ಕಾಫಿ ಟೀ ಉಪಹಾರ ಸರಿಯಾಗಿ ನೀಡುತ್ತಿಲ್ಲ ಎಂದು ದೂರಿದರು.
ವಸತಿನಿಲಯಗಳಲ್ಲಿ ಮೂಭೂತ ಸೌಕರ್ಯಗಳ ಕೊರತೆ ಕಾರಣ ವಿದ್ಯಾರ್ಥಿಗಳು ಆಹಾರಕ್ಕಾಗಿ ಸ್ಥಳೀಯ ಸಹಾಯಕ ಆಯುಕ್ತರು ತಹಸೀಲ್ದಾರ ಮನೆಗಳಿಗೆ ರಾತ್ರಿಸಮಯದಲ್ಲಿ ಹಲವಾರು ಬಾರಿ ಹೊಗಿದ್ದಾರೆ,
ಕಛೇರಿ ಉಪಯೋಗಕ್ಕಾಗಿ ಅನಗತ್ಯ ಪೀಟೋಪಕರಣಗಳನ್ನು ಅಕ್ರಮವಾಗಿ ಖರೀದಿಸಿ ಬಿಲ್ ಪಡೆಯುತ್ತಿದ್ದಾರೆ ಹಾಗೂ ಅಡುಗೆ ಇತರೆ ಬಡ ಸಿಬ್ಬಂದಿಗಳಿಗೆ ಕಳೆದ ೯ ತಿಂಗಳಿನಿಂದ ಗೌರವದನ ನೀಡಿಲ್ಲ ತಾಲೂಕಿನಲ್ಲಿ ಒಟ್ಟು ೨೩ ವಸತಿ ನಿಲಯಗಳಿದ್ದು ಈ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಒಟ್ಟು ೪೯೨ವಿದ್ಯಾರ್ಥಿಗಳೂ ಪರೀಕ್ಷೆ ಬರೆದಿದ್ದು ಇದರಲ್ಲಿ ಪಾಸಾದವರು ೩೪೨ ಮಾತ್ರ ಇರುತ್ತದೆ,
ಕಳೆದ ೧೬ವರ್ಷಗಳಿಂದ ತಾಲೂಕಿನಲ್ಲೆ ಕರ್ತವ್ಯ ನಿರ್ವಹಿಸುತ್ತಿರುವ ವಸತಿ ನಿಲಯಗಳ ಮೇಲ್ವೀಚಾರಕರು ವಾರ್ಡನಗಳನ್ನು ಕೂಡ¯ ೆವರ್ಗಾಯಿಸಬೇಕು ಹಾಗೂ ಜಿಲ್ಲಾಧಿಕಾರಿ ವರ್ಗಾವಣೆ ಆದೇಶ ಮಾನ್ಯ ಮಾಡದ ವಾರ್ಡನಗಳಾದ ಶರಣಪ್ಪ ಹಾಗೂ ಮಲ್ಲಿಕಾರ್ಜುನಗೌಡ ವಿರುದ್ದ ಕಾನೂನು ಕ್ರಮ ಜರುಗಿಸಬೇಕು
ಫೆಬ್ರುವರಿಯಲ್ಲಿ ಆಯುಕ್ತರ ಆದೇಶದಂತೆ ಆಗಮಿಸಿದ ತನಿಖಾ ತಂಡ ಲಿಂಗಸುಗೂರಿಗೆ ಆಗಮಿಸದೆ ರಾಯಚೂರಿ ತಾಲೂಕಿನ ಇಲಾಖೆ ದಾಖಲೆ ತರಿಸಿ ಪರಿಶೀಲನೆ ನಾಟಕವಾಗಿದೆ.
ಕಾರಣ ಪಾರದರ್ಶಕ ಆಡಳಿತ ನೀಡವಲ್ಲಿ ವಿಫಲರಾದ ಹಣ ಲೂಟಿ ಹೊಡೆದ ಸಹಾಯಕ ನಿರ್ದೆಶಕರನ್ನು ಮತ್ತು ವಸತಿ ನಿಲಯಗಳ ಮೇಲ್ವೀಚಾರಕನ್ನು ತಕ್ಷಣವೆ ಸೇವೆಯಿಂದ ಅಮಾನತಗೊಳಿಸಲು ಒತ್ತಾಯಿಸಿದ್ದು ಇಲಾಖೆ ಭ್ರಷ್ಠಾಚಾರವನ್ನು ಸರಕಾರ ವಿಧಾನಸಭಾ ಆಧಿವೇಶನದಲ್ಲಿ ಇಲಾಖೆ ಚರ್ಚೆಯಾಗಬೇಕೆಂದು ದಲಿತ ನಾಯಕ ಬಸರಾಜ ಮರಳಿ ತಿಳಿಸಿದ್ದಾರೆ
ಈಸಂದರ್ಭದಲ್ಲಿ ಸಂಘಟನೆಯ ಅಮರೇಶ ಗುಂಡಸಾಗರ,ವಿಶ್ವನಾಥಚಲುವಾದಿ, ನಾಗರಾಜ ತಲೆಕಟ್ಟ. ಇತರರು ಭಾಗವಹಿಸಿದ್ದರು.