*ಹಾವು ಆಸ್ಪತ್ರೆ ಗೆ ಬಂತು ಕಂಡಿರಾ! ಕಂಡಿರಾ!!?
ಈಚನಾಳ ಪ್ರಾ. ಆ. ಕೇಂದ್ರದ ಮುಂದೆ ನಾಗರಹಾವು ಪ್ರತ್ಯಕ್ಷ*
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು. ಜೂ.13.-ತಾಲೂಕಿನ ಈಚನಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂದೆ ಹಾಡು ಹಗಲೇ ನಾಗರಹಾವೊಂದು ಪ್ರತ್ಯಕ್ಷವಾಗಿ ಒಂದು ಕ್ಷಣ ಆಸ್ಪತ್ರೆ ಸಿಬ್ಬಂದಿಗಳಿಗೆ ಮತ್ತು ಈ ಆರೋಗ್ಯ ಕೇಂದ್ರಕ್ಕೆ ಬಂದ ರೋಗಿಗಳನ್ನು ಬೆರಗಾಗುವಂತೆ ಮಾಡಿತು.
ಸುಮಾರು ನಾಲ್ಕರಿಂದ ಐದು ಅಡಿ ಇರುವ ಈ ನಾಗರಹಾವು ನೋಡಿದ ಆಸ್ಪತ್ರೆಯ ಸಿಬ್ಬಂದಿ ಮಹಮ್ಮದ್ ಜುಬೇರ ಇವರು ತಕ್ಷಣವೇ ಸ್ನೇಕ್ ಕಾಶಿಮಲಿ ಇವರಿಗೆ ದೂರ ವಾಣಿ ಮೂಲಕ ಕರೆ ಮಾಡಿ ಕೂಡಲೇ ಆರೋಗ್ಯ ಕೇಂದ್ರಕ್ಕೆ ಬರುವಂತೆ ತಿಳಿಸಿ ದ್ದಾರೆ.
ತಕ್ಷಣವೇ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಗಮಿಸಿದ ಪಕ್ಕದ ಹಿರೇ ಉಪ್ಪೇರಿ ಗ್ರಾಮದ ಸ್ನೇಕ್ ಕಾಶಿಮಲಿ ಆಸ್ಪತ್ರೆಯ ಮುಂದೆ ಬುಸ್ಸು ಗುಟ್ಟುತ್ತಾ ಓಡಾಡುತ್ತಿದ್ದ ನಾಗರ ಹಾವನ್ನು ಹಿಡಿದು ಆಸ್ಪತ್ರೆಗೆ ಬಂದ ರೋಗಿಗಳು ಮತ್ತು ಆಸ್ಪತ್ರೆಯ ಸಿಬ್ಬಂದಿ ನಿಟ್ಟು ಸಿರು ಬಿಡುವಂತೆ ಮಾಡಿದರು.
ಹಾವನ್ನ ಹಿಡಿದ ಸ್ನೇಕ್ ಕಾಶಿಮಲಿ ಮಾತನಾಡಿ ಇಂತಹ ಸಾವಿರಾರು ಹಾವುಗಳನ್ನು ಹಿಡಿದು ಅರಣ್ಯಕ್ಕೆ ಬಿಟ್ಟಿದ್ದೇನೆ. ಈಗ ಹಿಡಿದ ಹಾವನ್ನು ಸಹ ಜಲದುರ್ಗ ಅರಣ್ಯ ವಲಯದಲ್ಲಿ ಬಿಡುವುದಾಗಿ ಕಾಶಿ ಮಲಿ ತಿಳಿಸಿದರು.