ಸರಕಾರಿ ಆದರ್ಶ ವಿದ್ಯಾಲಯ ದಾಖಲೆಯ ಫಲಿತಾಂಶ,ಹರ್ಷ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ಪಟ್ಟಣದಲಿರುವ ಸರಕಾರಿ ಆದರ್ಶ ಮಹಾವಿದ್ಯಾಲಯದ ೧೧ನೇ ಬ್ಯಾಚಿನ ವಿದ್ಯಾರ್ಥಿಗಳು ಹತ್ತನೇ ತರಗತಿ ಪರೀಕ್ಷೆಯಲ್ಲಿ ದಾಖಲೆಯ ಫಲಿತಾಂಶ ಬಂದಿದ್ದು ಪಾಲಕರು ಶಿಕ್ಷಕರು ಆಡಳಿತ ಮಂಡಳಿ ಸೇರಿದಂತೆ ಹರ್ಷ ವ್ಯಕ್ತಪಡಿಸಿದ್ದಾರೆ
೨೦೨೪-೨೫ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸರಕಾರಿ ಆದರ್ಶ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಅತ್ಯಂತ ಉತ್ತಮ ಫಲಿತಾಂಶ ಪಡೆದಿದ್ದು ದಾಖಲೆಂi ಫಲಿತಾಂಶವಾಗಿದೆ ಎಂದು ಮುಖ್ಯ ಶಿಕ್ಷಕರಾದ ದೊಡ್ಡನಗೌಡ ಪಾಟೀಲ್ ಪತ್ರಿಕೆಗೆ ಮಾಹಿತಿ ನೀಡುತ್ತಾರೆ ೧೯ ವಿದ್ಯಾರ್ಥಿಗಳು ಶೇ ೯೫ಕ್ಕೂ ಹೆಚ್ಚು ಅಂಕ ಪಡೆದಿದ್ದಾರೆ ೪೦ ವಿದ್ಯಾರ್ಥಿಗಳು ಶೇ೯೦ಕ್ಕೂ ಹೆಚ್ಚು ಅಂಕಪಡೆದರೆ ಡಿಸ್ಟಿಂಕ್ಷನ್ ೫೦ ವಿದ್ಯಾರ್ಥಿಗಳು, ಫಸ್ಟಕ್ಲಾಸ್ ೨೫ ವಿದ್ಯಾರ್ಥಿಗಳು ಪಡೆದಿದ್ದು ತಾಲೂಕಿಗೆ ಮೊದಲಸ್ಥಾನ,ಜಿಲ್ಲೆಗೆ ಮೂರನೆ ಸ್ಥಾನ ರಾಜ್ಯಕ್ಕೆ ನಾಲ್ಕನೆ ಸ್ಥಾನ ಪಡೆದಿದ್ದಾರೆಂದು ಅವರು ಕಲ್ಯಾಣ ಕರ್ನಾಟಕ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ
ವಿದ್ಯಾರ್ಥಿಗಳ ಈ ಸಾಧನೆಗೆ ಮುಖ್ಯೋಪಾಧ್ಯಾಯರು, ಶಾಲೆಯ ಸಮಸ್ತಿ ಶಿಕ್ಷಕರು, ಪಾಲಕರು ಎಸ್ಡಿಎಂಸಿ ಅಧ್ಯಕ್ಷರು ಸರ್ವಸದಸ್ಯರು ಹರ್ಷವ್ಯಕ್ತಪಡಿಸಿದ್ದಾರೆ