ಲಿಂಗಸುಗೂರ: ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶ ಶೇ೪೮.೩೬ ವಿದ್ಯಾರ್ಥಿನಿ ಶ್ರೇಯ ತಾಲೂಕಿಗೆ ಪ್ರಥಮ
ಫಲಿತಾಂಶದಲ್ಲಿ ಶೇ೧೦ರಷ್ಟು ಕುಸಿತ, ಖಾಸಗಿ ಶಾಲೆಗಳಿಗೆ ಹಿನ್ನೆಡೆ,ಜಿಲ್ಲೆಗೆ ೩ನೇ ಸ್ಥಾನ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸುಗೂರ.:ತಾಲೂಕಿನ ೨೦೨೫ ನೇ ಸಾಲಿನ ಎಸ್,ಎಸ್,ಎಲ್,ಸಿ ಪರೀಕ್ಷಯ ಫಲಿತಾಂಶ ಶೇ೪೮.೩೬ ರಷ್ಟು ಆಗಿದ್ದು ಶೇ೧೦ರಷ್ಟು ಕುಸಿತವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಹುಂಬಣ್ಣ ರಾಥೋಡ ಪತ್ರಿಕೆಗೆ ಮಾಹಿತಿ ನೀಡಿದರು.
ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಸಲ ತಾಲೂಕು ಶೇ೧೦ರಷ್ಟು ಹಿನ್ನೆಡೆಯಾಗಿದ್ದು ಖಾಸಗಿ ಶಾಲೆಗಳು ಸಹಿತ ನಿರೀಕ್ಷಿತ ಫಲಿತಾಂಶ ನೀಡುವಲ್ಲಿ ಹಿನ್ನೆಡೆ ಅನುಭವಿಸಿದಂತಾಗಿದೆ ಆದರೆ ಜಿಲ್ಲೆಗೆ ಮೂರನೆ ಸ್ಥಾನ ಪಡೆದುಕೊಂಡಿದ್ದು ವಸತಿ ಶಾಲೆಯ ವಿದ್ಯಾರ್ಥಿಗಳು ಹೆಚ್ಚಿನ ಅಂಕಪಡೆದಿರುವುದು ವಿಶೇಷವಾಗಿದೆ
ತಾಲೂಕಿನಲ್ಲಿ ಒಟ್ಟು ೬೧೫೯ ವಿದ್ಯಾರ್ಥಿಗಳು ಪರೀಕ್ಷೆ ಬರೆದ್ದಿದು ಅದರಲ್ಲಿ ಗಂಡು ೩೦೫೬ ಹೆಣ್ಣು ೩೧೦೩ ಪರೀಕ್ಷೆ ಬರದಿರುವರು, ಸದರಿ ಪರೀಕ್ಷೆಯಲ್ಲಿ ೧೨೬೮ ಗಂಡು ಹಾಗೂ ೧೭೧೧ ಹೆಣ್ಣು ಒಟ್ಟು ೨೯೭೯ ವಿದ್ಯಾರ್ಥಿಗಳು ತೇರ್ಗಡೆಹೊಂದಿದ್ದು ತಾಲೂಕಿನ ಫಲಿತಾಂಶ ಶೇ೪೮.೩೬ ರಷ್ಟು ಆಗಿದೆ ಎಂದು ಹೇಳಿದರು.
ಶ್ರೇಯ ತಂ ಸೋಮಲೆಪ್ಪ ವಿದ್ಯಾರ್ಥಿ ೬೨೫ ಅಂಕಗಳಿಗೆ ೬೨೨ ಅಂಕ ಶೇ೯೯.೫೨ ಪಡದು ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಅಡವಿಬಾವಿಗೆ ಹಾಗೂ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ, ದ್ವಿತೀಯ ಸ್ಥಾ£ವನ್ನು ಆದರ್ಶ ವಿದ್ಯಾಲಯ ಲಿಂಗಸುಗೂರ ವಿದ್ಯಾರ್ಥಿ ಅಜಯಕುಮಾರ ತಂ ಅಮರೇಶ ೬೨೫ ಅಂಕಗಳಿಗೆ ೬೨೦ ಅಂಕ ಶೇ೯೯.೨೦ ಪಡೆದಿದ್ದಾನೆ, ತೃತೀಯ ಸ್ಥಾನವನ್ನು ಹಟ್ಟಿಯ ಖಾಸಗಿ ಮಸ್ಕಿ ಅಬ್ದುಲ್ಲಾ ಸ್ಮಾರಕ ಪ್ರೌಢಶಾಲೆ ವಿದ್ಯಾರ್ಥಿನಿ ನೂರೆ ಮಸೀರಾ ತಂ ಫಾರೂಕ ೬೨೫ ಅಂಕಗಳಿಗೆ ೬೧೯ ಅಂಕಗಳನ್ನು ಪಡೆದ್ದು ಶೇ೯೯.೦೪ ಫಲಿತಾಂಶವನ್ನು ಪಡೆದುಕೊಂಡಿದ್ದಾರೆ ಎಂದು ಹೇಳಿದರು..
ಪರೀಕ್ಷೇಯಲ್ಲಿ ಉತ್ತಮ ಸಾಧನೆ ಮಾಡಿರುವ ವಿದ್ಯಾರ್ಥಿಗಳಿಗೆ ತಾಲೂಕು ಆಡಳಿತ, ಶಾಲೆ ಪ್ರಾಚಾರ್ಯರು, ಸಿಬ್ಬಂದಿ ವರ್ಗ ಅಭಿನಂದಿಸಿ ಹರ್ಷ ವ್ಯಕ್ತ ಪಡಿಸಿರುವರು.