ಆರ್ ಬಿ ಶುಗರ‍್ಸ್ ಕಂಪನಿಯಿಂದ ಒತ್ತುವರಿಯಾಗಿಲ್ಲ,ದೇವಸ್ಥಾನದ ಜಾಗೆ ಸ್ವಚ್ಚ ಮಾಡಲಾಗಿದೆ ಗ್ರಾಮಸ್ಥರ ಮನವಿ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ತಾಲೂಕಿನ ಚಿಕ್ಕುಪ್ಪೇರಿ ಹತ್ತಿರ ಆರಂಭವಾಗುತ್ತಿರುವ ಆರ್ ಬಿ ಶುರ‍್ಸ್ ಕಂಪನಿಯು ಚಿಕ್ಕ ಉಪ್ಪೇರಿ ಗ್ರಾಮದ ಯಾವುದೆ ಸರಕಾರಿ ಜಾಗೆಯನ್ನು ಒತ್ತುವರಿ ಮಾಡಿಲ್ಲ ದೇವಸ್ಥಾನದ ಜಾಗೆಯನ್ನು ಸಮತಟ್ಟು ಮಾಡಿ ಸ್ವಚ್ಚಗೊಳಿಸಲು ಕಂಪನಿಯವರಿಗೆ ಗ್ರಾಮಸ್ಥರೆ ಮನವಿ ಮಾಡಿದ್ದೆವು ಎಂದು ಚಿಕ್ಕುಪ್ಪೇರಿ ಗ್ರಾಮಸ್ಥರು ಸಹಾಯಕ ಆಯುಕ್ತರಿಗೆ ಬರೆದ ಮನವಿಯನ್ನು ಸಲ್ಲಿಸಿದರು
ತಾಲೂಕಿನ ಚಿಕ್ಕುಪ್ಪೇರಿ ಹತ್ತಿರ ನಿರ್ಮಾಣವಾಗುತ್ತಿರುವ ಆರ್ ಬಿ ಶುರ‍್ಸ್ ಕಂಪನಿಯು ಗ್ರಾಮದ ಸರ್ವೇ ನಂ ೬೨ರ ರಂಗಲಿAಗೇಶ್ವರ ಮಠದ ಹತ್ತಿರ ಹೆಚ್ಚಿನ ಪ್ರಮಾಣದಲ್ಲಿ ತಗ್ಗುದಿನ್ನೆಗಳಿದ್ದವು ಆ ಭಾಗದಲ್ಲಿ ದನಕರುಗಳು ಜಾನುವಾರುಗಳು ಬಂದರೆ ತಗ್ಗಿನಲ್ಲಿ ಬಿದ್ದು ಜೀವಹಾನಿಯಾಗುತ್ತಿತ್ತು ಮತ್ತು ದೇವಸ್ಥಾನದ ಸುತ್ತಮುತ್ತ ಸ್ವಚ್ಚತೆ ಇದ್ದಿಲ್ಲ ಅದನ್ನು ಸ್ವಚ್ಚ ಮಾಡುವುದು ಮತ್ತು ಸಮತಟ್ಟು ಮಾಡುವುದು ಅವಶ್ಯಕವಾಗಿತ್ತು ಅದರಂತೆ ನಾವು ಕಂಪನಿಯವರಿಗೆ ಹೇಳಿದಾಗ ಅವರು ನಿರ್ಮಾಣ ಮಾಡುತ್ತಿರುವ ಜಾಗೆಯಿಂದ ನಾವೆ ನಮ್ಮ ನಮ್ಮ ಟ್ರಾö್ಯಕ್ಟರ್ ಇತ್ಯಾದಿಗಳಲ್ಲಿ ಮಣ್ಣು ಕಲ್ಲು ತಂದು ಹಾಕಿದ್ದೇವೆ ಮತ್ತು ಕಂಪನಿಯವರು ಸಮತಟ್ಟು ಮತ್ತು ಸ್ವಚ್ಚತೆಗೆ ಅನುಕೂಲ ಮಾಡಿದ್ದಾರೆ ಇದರಲ್ಲಿ ಕಂಪನಿಯವರು ಯಾವುದೆ ರೀತಿಯ ಸರಕಾರಿ ಜಾಗೆಯನ್ನು ಅಕ್ರಮ ಮಾಡಿರುವುದಿಲ್ಲ
ಚಿಕ್ಕುಪ್ಪೇರಿ ಗ್ರಾಮದ ಸರ್ವೇನಂ೬೨ ರಲ್ಲಿ ಸರಕಾರಿ ಜಾಗೆಯನ್ನು ಅತಿಕ್ರಮಣ ಮಾಡಲು ಸಾಧ್ಯವಿಲ್ಲ ಯಾಕೆಂದರೆ ಆರ್ ಬಿ ಶುಗರ್ ಕಂಪನಿಯವರು ನಮ್ಮ ಗ್ರಾಮದ ಜಾಗೆಯಿಂದ ಸುಮಾರು ಒಂದು ಕಿಮೀ ದೂರದಲ್ಲಿ ಸುಣಕಲ್ ಗ್ರಾಮದ ಸರ್ವೇ ನಂ ೭೭ ಹಾಗೂ ೭೮ರಲ್ಲಿ ನಡೆಯುತ್ತಿದೆ ಇಲ್ಲಿ ಯಾವುದೆ ರೀತಿಯ ಒತ್ತುವರಿಯಾಗಿರುವುದಿಲ್ಲ ಸರಕಾರಿ ಜಮೀನು ಒತ್ತುವರಿಯಾಗಿರುವುದಿಲ್ಲ ಅದು ಸತ್ಯಕ್ಕೆ ದೂರವಾದ ಮಾತಾಗಿದೆ
ತಾಲೂಕಿನಲ್ಲಿ ಹಲವಾರು ಬಡಕುಟುಂಬಗಳಿಗೆ ಆಸರೆ ಎಂಬAತೆ ಆರ್ ಬಿ ಶುಗರ್ ಕಂಪನಿಯು ನಿರ್ಮಾಣವಾಗುತ್ತಿದ್ದು ಇದರಿಂದ ತಾಲೂಕಿನ ಜನತೆಗೆ ಸಾಕಷ್ಟು ಉದ್ಯೋಗ ದೊರೆಯಲಿದೆ ಗುಳೆ ಹೋಗುವದು ತಪ್ಪಲಿದೆ ಸಾವಿರಾರು ಯುವಕರಿಗೆ ಉದ್ಯೋಗ ದೊರೆಯಲಿದೆ ರೈತರಿಗೆ ಕೂಲಿಕಾರ್ಮಿಕರಿಗೆ ಕೆಲಸ ಸಿಗುವದು ಈ ಭಾಗದಲ್ಲಿ ರೈತರು ವಾಣಿಜ್ಯ ಬೆಳೆಗಳಾದ ಕಬ್ಬನ್ನು ಬೆಳೆದು ಸದರಿ ಕಂಪನಿಗೆ ಕಳಿಸುವುದರಿಂದ ರೈತರು ಹೆಚ್ಚಿನ ಪ್ರಮಾಣದಲ್ಲಿ ಆದಾಯ ಗಳಿಸಬಹುದು ರೈತರಿಗೆ ಸರಕು ಸಾಗಣೇ ವೆಚ್ಚ ಕಡಿಮೆಯಾಗಿ ರೈತರಿಗೆ ಆರ್ಥಿಕವಾಗಿ ಲಾಭವಾಗಲಿದೆ ಆರ್ಥಿಕ ಸುಧಾರಣೆಯಾಗಲಿದೆ ನಮ್ಮಲ್ಲಿ ಯಾವುದೆ ರೀತಿಯ ಸರಕಾರಿ ಜಮೀನನ್ನು ಕಂಪನಿಯು ಒತ್ತುವರಿ ಮಾಡಿಲ್ಲವೆಂದು ಸಹಾಯಕ ಆಯುಕ್ತರಿಗೆ ಬರೆದ ಮನವಿ ಸಲ್ಲಿಸಿದರು
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಲಿಂಗನಗೌಡ, ವಿಜಪ್ಪ, ಬಸವರಾಜ, ದೇವಪ್ಪ, ಈರಪ್ಪ, ಬಸವರಾಜ ಕುರಿ, ಅಯ್ಯಣ್ಣ ಮೇಟಿ, ಅಮರಪ್ಪ ಶರಣಗೌಡ, ನಾಗಪ್ಪ ಭಂಗಿ, ಶಂಕರಲಿAಗ ಮಡಿವಾಳ, ಬಸಲಿಂಗಪ್ಪ, ಅಮರಪ್ಪ, ಅಮರೇಗೌಡ, ಹುಲಗಪ್ಪ ಬನ್ನಿಗೋಳ, ಶಿವಪ್ಪ ಗದ್ದೆಪ್ಪ ಸೇರಿದಂತೆ ಹಲವಾರು ಗ್ರಾಮಸ್ಥರು ಸಹಿ ಮಾಡಿದ ಮನವಿ ಸಲ್ಲಿಸಿದರು