ದೀಪಾವಳಿ ಹಬ್ಬಕ್ಕೆ ಹೂ ಹಣ್ಣು ಸಾಮಾಗ್ರಿಗಳ ಖರೀದಿ ಬಲು ಜೋರು
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ದೀಪಾವಳಿ ಹಬ್ಬದ ನಿಮಿತ್ಯವಾಗಿ ಪಟ್ಟಣ ಸೇರಿದಂತೆ ಎಲ್ಲೆಡೆ ಹೂ ಹಣ್ಣು ಪೂಜಾ ಸಾಮಾಗ್ರಿ ಸೇರಿದಂತೆ ಖರೀದಿ ಬಲು ಜೋರಾಗಿರುವುದು ಕಂಡುಬAತು
ಬೆಳಕಿನ ಹಬ್ಬ ದೀಪಾವಳಿ ಆಚರಣೆ ಲಕ್ಷ್ಮೀ ಪೂಜೆಗಾಗಿ ಗ್ರಾಹಕರು ಬೆಳಗಿನಿಂದಲೆ ಚಂಡುಹೂ ಸೇವಂತಿ ಅಡಿಕೆಗೂ ಸೇರಿ ನಾನಾ ಬಗೆಯ ಹೂಗಳು ವಿವಿಧ ಹಣ್ಣುಗಳು ಕುಂಬಳಕಾಯಿ ಕಬ್ಬು ಬಾಳೆಗೊನೆಗಳು ಹೀಗೆ ನಾನಾ ರೀತಿಯ ಪೂಜಾ ಸಾಮಾಗ್ರಿಗಳು ಹಣತೆಗಳ ಖರೀದಿ ಬಲು ಜೋರಾಗಿ ನಡೆದಿರುವುದು ಎಲ್ಲೆಡೆ ಕಂಡು ಬಂತು
ಪಟ್ಟಣದ ಗಡಿಯಾರಚೌಕ, ದೊಡ್ಡ ಹನಮ ಮಂದಿರ ಹೊಸಬಸ್ ನಿಲ್ದಾಣ ಸರ್ಕಲ್ ಹೀಗೆ ಹಲವೆಡೆ ಹಾಕಿರುವ ಅಂಗಡಿಗಳಿಗೆ ತೆರಳಿ ಗ್ರಾಹಕರು ಸಾಮಾಗ್ರಿ ಖರೀದಿಯಲ್ಲಿ ತೊಡಗಿದ್ದರು
ಪಟ್ಟಣದ ಹೊರವಲಯದ ಕ್ರೀಡಾಂಗಣದಲ್ಲಿ ಪಟಾಕಿ ಬಾಣ ಬಿರುಸುಗಳ ಖರೀದಿಯು ಅಷ್ಟೆ ಬಿರುಸಾಗಿಯೆ ನಡೆದಿತ್ತು
ಒಟ್ಟಾರೆಯಾಗಿ ಪಟ್ಟಣದಲ್ಲಿ ಹಬ್ಬದ ಖರಿದಿ ಮಾತ್ರ ಬಲು ಜೋರಾಗಿರುವುದು ಕಂಡುಬಂತು