:ಮನೆಗೆ ಬಂದ ನಾಗರಹಾವು ಕಾಯಿ ಒಡೆದು ಪೂಜೆ ಸಲ್ಲಿಸಿದ ಜನ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರ:ಹಾವು ಎದ್ದರೆ ನಿದ್ದೆಯಲ್ಲಿಯು ಹೆದರುವ ಜನರ ನಡುವೆ ಇಲ್ಲೊಬ್ಬರ ಮನೆಗೆ ನಿಜನಾಗರ ಬಂದಾಗ ಹೆದರದೆ ಹಾವಿಗೆ ತೆಂಗಿನಕಾಯಿ ಒಡೆದು ಪೂಜೆ ಸಲ್ಲಿಸಿ ಕೈಮುಗಿದ ಅಪರೂಪದ ಘಟನೆ ಜರುಗಿದೆ
ರಾಯಚೂರು ತಾಲೂಕಿನ ಜಂಗಿರಾಂಪೂರ ತಾಂಡದಲ್ಲಿ ಇಂತಹದ್ದೊಂದು ಘಟನೆ ಇಂದು ಜರುಗಿದೆ ಸೋಮವಾರ ಬೆಳಗ್ಗೆ ತಾಂಡಾದ ಸುನೀಲ್ ಪವಾರ ಎನ್ನುವವರ ಮನೆಯ ಮುಂದೆ ನಿಜನಾಗರ ಕಾಣಿಸಿಕೊಂಡು ಹೆಡೆ ಬಿಚ್ಚಿದಾಗ ಮನೆಯ ಮಾಲೀಕ ಹಾವಿಗೆ ತೆಂಗಿನ ಕಾಯಿ ಒಡೆದು ಪೂಜೆ ಸಲ್ಲಿಸಿ ಕೈಮುಗಿದಿದ್ದಾನೆ ನಂತರ ಹಾವು ಹಿಡಿಯುವವರನ್ನು ಕರೆತಂದು ಹಾವನ್ನು ಹಿಡಿದು ಕಾಡಿಗೆ ಬಿಡಲಾಯಿತು ಎನ್ನಲಾಗುತ್ತಿದೆ
ಸದರಿ ದೃಶ್ಯವನ್ನು ಗ್ರಾಮದ ಜನತೆ ಆಶ್ಚರ್ಯಚಕಿತವಾಗಿ ನೋಡುತ್ತಾ ಅಪಾರ ಜನಸೇರಿ ಇಂತಹದ್ದೊಂದು ಘಟನೆಗೆ ಪ್ರತ್ಯಕ್ಷವಾಗಿದ್ದರು