ತೋಟಗಾರಿಕಾ ಇಲಾಖೆಯಲ್ಲಿ ಲಂಚಾವತಾರ!! ಹಣಕೊಡದೆ ಫೈಲ್ ಮುಂದೆಸಾಗದು!
ಬೆಳೆಪರಿಹಾರ ಅಧಿಕಾರಿಗೆ ಮಾಹಿತಿ ಇಲ್ಲವಂತೆ,,ಆದರೆ ಕೆಲರೈತರು ಪರಿಹಾರ ಪಡೆದಿದ್ದಾರೆ,ಏನಿದರ ಮರ್ಮ!!?
ಕಲ್ಯಾಣ ಕರ್ನಾಟಕ ವಾರ್ತೆ
(ವರದಿ ಕಂತು 1)
ಲಿಂಗಸಗೂರು:ಪಟ್ಟಣದಲಿರುವ ತೋಟಗಾರಿಕಾ ಇಲಾಖೆಯಲ್ಲಿ ಲಂಚದ ಹಾವಳಿ ಮಿತಿಮೀರಿದ್ದು ಲಂಚನೀಡಿದರೆ ಮಾತ್ರ ರೈತರ ಫೈಲ್ ಮುಂದೆಸಾಗುತ್ತವೆ ಇಲ್ಲವಾದರೆ ಗೋವಿಂದ ಎನ್ನುವಂತಾಗಿದ್ದು ಮಾಹಿತಿ ಕೇಳಲುಹೋಗುವ ರೈತರ ಮೇಲೆ ಅಧಿಕಾರಿಗಳು ಅವಾಚ್ಯವಾಗಿ ಬೈಯುವುದು ಜಗಳ ಮಾಡುವ ಹತ್ತಾರು ಘಟನೆಗಳು ನಡೆದಿವೆ ಎಂದು ಹಲವಾರು ರೈತರು ಆರೋಪಿಸುತ್ತಾರೆ
ಸರಕಾರದಿಂದ ಮಂಜೂರಿಯಾದ ವಿವಿಧ ಯೋಜನೆಗಳಲ್ಲಿ ರೈತರು ಸೌಲಭ್ಯಪಡೆಯಬೇಕಾದರೆ ಇಲ್ಲಿಯ ಅಧಿಕಾರಿಗಳಿಗೆ ಲಂಚ ನೀಡಲೇಬೇಕು ಇಲ್ಲವಾದರೆ ನಿಮ್ಮ ಫೈಲ್ ನ್ನು ಇವರು ತಿರುಗಿಯೂ ನೋಡುವುದಿಲ್ಲ ಅದರ ಬಗೆಗೆ ಮಾಹಿತಿ ಕೇಳಲು ಹೋಗಿದ್ದ ರೈತರಾದ ಹನಮನಗೌಡ ಹಾಲಬಾವಿ ದ್ಯಾಮಣ್ಣ ಹಾಲಬಾವಿ, ಸಂಘಟನೆಯ ಹೊಳೆಯಪ್ಪ ಕುಣಿಕೆಲ್ಲೂರು ಸೇರಿದಂತೆ ಹಲವಾರು ರೈತರು ಅಧಿಕಾರಿಗಳಿಂದ ಬೈಗುಳಗಳನ್ನೆ ಬಳುವಳಿಯಾಗಿ ಪಡೆದುಬಂದಿರುವ ಘಟನೆಗಳು ಜರುಗಿವೆ
ಬೆಳೆಪರಿಹಾರ ಮಾಹಿತಿ ಇಲ್ಲವೆಂದ ಅಧಿಕಾರಿ,ಅರ್ಜಿಹಾಕಿದ್ದೇವೆ ಎನ್ನುವ ರೈತರು:ಕಳೆದ ಮಳೆಗಾಲ ಸಂದರ್ಭದಲ್ಲಿ ಮಳೆಬಂದು ತೋಟಗಾರಿಕಾ ಬೆಳೆಗಳು ಹಾನಿಯಾಗಿದ್ದು ಅಂತಹ ಬೆಳೆಗಳಿಗೆ ಇಲಾಖೆಯಿಂದ ಪರಿಹಾರ ದೊರೆಯುವುದು ಸಹಜ ಅದಕ್ಕಾಗಿ ಈರುಳ್ಳಿ ಬೆಳೆದ ತಾಲೂಕಿನ ಹಲವಾರು ರೈತರು ಬೆಳೆಹಾನಿಯಾಗಿದೆ ಎಂದು ಅರ್ಜೀ ಸಲ್ಲಿಸಿದ್ದು ಅದರಲ್ಲಿ ಪರಿಹಾರದ ಹಣ ಪಡೆದಿರುವುದಾಗಿ ಹೇಳುತ್ತಾರೆ ಆದರೆ ಕೆಲರೈತರಿಗೆ ಪರಿಹಾರ ದೊರಕಿಲ್ಲ ಇದುವರೆಗೂ ಇಲಾಖೆಗೆ ಸುತ್ತುತ್ತಲೆ ಇದ್ದಾರೆ ಆದರೆ ಪರಿಹಾರ ಮಾತ್ರ ದೊರೆಯುತ್ತಿಲ್ಲ ಇದಕ್ಕೆ ಅಸಲಿ ಕಾರಣ ಲಂಚವೇ ಆಗಿದೆ ಎನ್ನುವುದು ರೈತರ ಆರೋಪವಾಗಿದೆ
ತಾಲೂಕಿನ ಹೊನ್ನಳ್ಳಿ ಹಾಗೂ ಹಾಲಬಾವಿ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಈರುಳ್ಳಿ ಬೆಳೆನಾಶವಾಗಿದೆ ಎಂದು ಹಲವಾರು ರೈತರು ಅರ್ಜಿಹಾಕಿದ್ದು ಈ ಬಗೆಗೆ ತಾಲೂಕಾ ತೋಟಗಾರಿಕಾ ಅಧಿಕಾರಿ ಶ್ರೀಶೈಲ ವಾಗ್ಮೋರೆಯನ್ನು ಕೇಳಿದರೆ ಇಂತಹದ್ದೊAದು ಯೋಜನೆ ನಮ್ಮ ಜಿಲ್ಲೆಯಲ್ಲಿಯೆ ಇಲ್ಲ ಅದುಹೇಗೆ ಸಾಧ್ಯ ಇದರ ಬಗೆಗೆ ನನಗೆ ಮಾಹಿತಿ ಇಲ್ಲವೆಂದು ಹೇಳುತ್ತಾನೆ ಆದರೆ ರೈತರು ಈಗಾಗಲೆ ಹಲವಾರು ಜನ ಅರ್ಜಿಸಲ್ಲಿಸಿದ್ದಾರೆ ಕೆಲವರು ಪರಿಹಾರ ಮೊತ್ತವನ್ನು ಪಡೆದಿದ್ದೇವೆ ಎಂದು ಹೇಳುತ್ತಾರೆ
ಫೋನ್ ಸ್ವಿಚ್ ಆಫ್ ಮಾಡಿಸಿದ ಅಧಿಕಾರಿ:ವಿಯದ ಕುರಿತು ಅಧಿಕಾರಿ ಹಾಗೂ ರೈತರಿಗೆ ಮಾಹಿತಿ ಹೇಳಿದ ಸಿಬ್ಬಂದಿ ನಡುವೆ ಕರೆಮಾಡಿ ಇದರಲ್ಲಿ ಯಾರು ಸುಳ್ಳು ಎಂದು ತಿಳಿಯಲು ಮಾತನಾಡಿಸಲು ಯತ್ನಿಸಿದರೆ ಕೂಡಲೇ ತಾಲೂಕಾ ಅಧಿಕಾರಿ ತಮ್ಮ ಸಿಬ್ಬಂದಿಗೆ ಮಾಹಿತಿ ನೀಡಿ ಸ್ವಿಚ್ ಆಫ್ ಮಾಡಿಸಿದ ಘಟನೆ ನಡೆಯಿತು
ಲಂಚದಹಣ ನೀಡಿದರೆ ನೀರಿಲ್ಲದ ಹೊಲದಲ್ಲಿ ಬೆಳೆಇದೆ ಎಂದು ಪರಿಹಾರ:ಹೌದು ರೈತರೆ ಹೇಳುವ ಪ್ರಕಾರ ತಾಲೂಕಿನ ಗ್ರಾಮವೊಂದರಲ್ಲಿ ರೈತರ ಹೊಲದಲ್ಲಿ ಅಸಲಿಗೆ ನೀರು ಇಲ್ಲವೆಂದು ಹೇಳಲಾಗುತ್ತಿದ್ದು ಅಂತಹ ಹೊಲದಲ್ಲಿ ತೋಟಗಾರಿಕಾ ಬೆಲೆ ಬೆಳೆಯಲಾಗಿದೆ ಎಂದು ಪರಿಹಾರ ಹಾಕಲಾಗಿದೆ ಎನ್ನಲಾಗುತ್ತಿದೆ ಇದರಲ್ಲಿ ನೀರಿನ ಸಾಧ್ಯತೆ ಪ್ರಮಾಣಕೊಟ್ಟವರು ಸಹಿತ ಬೋಗಸ್ ಪ್ರಮಾಣಪತ್ರ ನೀಡಲಾಗಿದ್ದು ಅವರ ಮೇಲೆ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ
ಸದರಿ ಇಲಾಕೆಯಲ್ಲಿ ಲಂಚದ ಹಾವಳಿ ಹೆಚ್ಚಾಗಿದೆ ಎಂದು ಆರೋಪಿಸಲಾಗುತ್ತಿದ್ದು ಪತ್ರಿಕೆಯು ಕಂತುಕಂತಾಗಿ ಹಗರಣವನ್ನು ಬಯಲಿಗೆ ಎಳೆಯಲಿದೆ ನಿರೀಕ್ಷಿಸಿ