ಹೋಳಿಹಬ್ಬ:ಮನಸೆಳೆಯುತ್ತಿದೆ ಲಂಬಾಣಿ ಮಹಿಳೆಯರ ವಿಶಿಷ್ಟ ನೃತ್ಯ, ವಿಜೃಂಭಣೆಯಿಂದ ಆಚರಿಸುವ ಹಬ್ಬ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ಹೋಳಿಹಬ್ಬವೆಂದರೆ ಪರಸ್ಪರ ರಂಗು ಎರಚಿ ಸಂಭ್ರಮಿಸುವ ಹೋಕುಳಿ ಹಬ್ಬ ಈ ಹಬ್ಬ ಬಂತೆಂದರೆ ಲಂಬಾಣಿ ಮಹಿಳೆಯರು ಪಟ್ಟಣಕ್ಕೆ ಆಗಮಿಸಿ ಹಾಡು ನೃತ್ಯ ಮಾಡುವುದು ಎಲ್ಲೆಡೆ ಕಂಡುಬರುತಿದ್ದು ನೋಡುಗರ ಮನಸೆಳೆಯುತ್ತಿದೆ
ಹೋಳಿಹಬ್ಬವನ್ನು ಲಂಬಾಣಿ ಜನಾಂಗದವರು ಬಹಳ ವಿಷಶಿಷ್ಟವಾಗಿ ವಿಜೃಂಭಣೆಯಿಂದ ಆಚರಣೆ ಮಾಡುತ್ತಾರೆ ಹಿಂದುಗಳಲ್ಲಿ ಕಾಮನಹಾಡುಗಳ ರೀತಿಯಲ್ಲಿ ಲಂಬಾಣಿಯವರು ಲೇಂಗಿಹಾಡುಗಳನ್ನು ಹಾಡುತ್ತಾರೆ ಲೇಂಗಿಹಾಡುಗಳು ಎಂದರೆ ಪುರುಷರು ಮಹಿಳೆಯರಿಗೆ ಛೇಡಿಸುವ ಹಾಗೂ ಮಹಿಳೆಯರು ಪುರುಷರಿಗೆ ಛೇಡಿಸುವ ಹಾಡುಗಳನ್ನು ಹಾಡುತ್ತಾ ಪ್ರೀತಿ ಪ್ರೇಮ ಸಿಟ್ಟು ಸೆಡವು ಹಾಡುಗಳಲ್ಲಿ ತೋರ್ಪಡಿಸುತ್ತಾ ಹೋಳಿ ಆಚರಿಸುತ್ತಾರೆ
ಹೋಳಿಹುಣ್ಣಿಮೆ ಎಂಟತ್ತು ದಿನ ಮುಂದೆ ಇರುವಾಗಲೆ ಲಂಬಾಣಿ ಮಹಿಳೆಯರು ತಂಡೋಪತAಡಗಳಾಗಿ ಸುತ್ತಮುತ್ತಲ ನಗರ ಗ್ರಾಮಗಳಿಗೆ ತೆರಳಿ ಲಂಬಾಣಿಭಾಷೆಯಲಿ ಹಾಡು ಹೇಳುತ್ತಾ ಅದಕ್ಕೆ ತಕ್ಕಮತೆ ನೃತ್ಯ ಮಾಡುತ್ತಾ ನೋಡುಗರ ಗಮನಸೆಳೆಯುತ್ತಾರೆ ಅಂಗಡಿ ಮುಂಗಟ್ಟುಗಳು ಮನೆಗಳ ಮುಂದೆ ಹಾಡು ನೃತ್ಯ ಮಾಡುತ್ತಾರೆ ಮನೆಯ ಮಾಲೀಕರು ವ್ಯಾಪಾರಸ್ಥರು ಹಾಗೂ ಜನಪ್ರತಿನಿಧಿಗಳು ನೀಡುವ ಹಣ ಇತ್ಯಾದಿ ಪಡೆದು ಸಾಗುವುದು ಸಾಮಾನ್ಯವಾಗಿದೆ
ಜಾಗತಿಕದ ಪ್ರಭಾವದಿಂದ ಹಲವಾರು ಹಬ್ಬಗಳು ಮರೆಯಾಗುತ್ತಿದ್ದರು ಲಂಬಾಣಿ ಮಹಿಳೆಯರು ಮಾತ್ರ ಈ ಹೋಳಿಯ ದಿನದಲ್ಲಿ ತಪ್ಪದೆ ಹಬ್ಬವನ್ನು ಆಚರಿಸುತ್ತಾರೆ ಲಂಬಾಣಿಗರಲ್ಲಿ ವಿಶಿಷ್ಟವಾಗಿ ಆಚರಿಸುವ ಈ ಹೋಳಿಯು ಅದರ ಸೊಬಗನ್ನು ಸಾಂಪ್ರದಾಯಿಕ ಲಂಬಾಣಿ ಪದ್ಯಗಳನ್ನು ಹಾಡುತ್ತಾ ಅದರ ಮಹತ್ವವನ್ನು ಸಾದರ ಪಡಿಸುತ್ತಾರೆ
ಬಹಳ ಜನರಿಗೆ ಲಂಬಾಣಿಭಾಷೆ ಅರ್ಥವಾಗದಿದ್ದರು ಅವರು ಹಾಡುವ ಲಯ ಮತ್ತು ಹಾಕುವ ಹೆಜ್ಜೆಗಳು ನೋಡುಗರ ಮನೆಸೆಳೆಯುತ್ತದೆ ಅಷ್ಟೊಂದು ಆಕರ್ಷಕವಾಗಿ ಹಾಡುತ್ತಾರೆ
ತಾಲೂಕಿನಲ್ಲಿ ಹಲವಾರು ತಾಂಡಾಗಳಿದ್ದು ಎಲ್ಲಾ ತಾಂಡಾಗಳಿಲ್ಲಯೂ ಇಂತಹ ಹಾಡುಗಳು ಕಂಡುಬರುತ್ತಿದ್ದು ಕೆಲತಾಂಡದವರು ಮಾತ್ರ ನಗರಕ್ಕೆ ಬಂದು ಹಾಡುನೃತ್ಯ ಮಾಡುತ್ತಾರೆ ಅದರಂತೆ ತಾಲೂಕಿನ ಗೋನವಾಟ್ಲ ತಾಂಡಾದ ಮಹಿಳೆಯರು ನೃತ್ಯ ಮಾಡುವುದು ಕಂಡುಬಂತು
ಹೇಳಿಕೆ:ಹೋಳಿಹಬ್ಬವನ್ನು ವಿಜೃಂಭಣೆಯಿಂದ ತಾಲೂಕಿನ ಎಲ್ಲಾ ತಾಂಡಾಗಳಿಲ್ಲಿ ಆಚರಣೆ ಮಾಡಲಾಗುತ್ತಿದೆ ಮಹಿಳೆಯರು ಹೊರಹೋಗಿ ಹಾಡುಹಾಡಿ ಹಣಬೆಡುವುದು ಮಾಡುತ್ತಿರುವುದರಿಂದ ಕೆಲವೊಮ್ಮೆ ಮುಜುಗರಕ್ಕೂ ಒಳಗಾಗುತ್ತಿದ್ದಾರೆ ಇದರಿಂದ ತಾಂಡಗಳಲ್ಲಿ ಮಾತ್ರ ಆಚರನೆ ಇರಲಿ ನಗರಕ್ಕೆ ಹೋಗಿ ಹಾಡುವುದು ಆದಷ್ಟು ತಡೆಯಲು ಯತ್ನಿಸುತ್ತಿದ್ದೇವೆ-ಲಾಲಾಪ್ಪ ರಾಠೋಡ್ ಅಧ್ಯಕ್ಷರು ತಾಲೂಕಾ ಬಂಜಾರ ಸಮಿತಿ