ಜಲದುರ್ಗ : ನದಿಯಲ್ಲಿ ಈಜಲು ಹೊದ ವ್ಯಕ್ತಿ ಶವವಾಗಿ ಪತ್ತೆ,
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು: ಫೆ.6.ತಾಲ್ಲೂಕಿನ ಜಲದುರ್ಗದ ಕೃಷ್ಣಾ ನದಿಯಲ್ಲಿ ಮಂಗಳವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಈಜಲು ಹೋದ ಶಿವಪ್ಪ ಬಸಪ್ಪ (30) ಹುಸೇನ್ ಪುರ ಎಂಬ ವ್ಯಕ್ತಿ ಇಂದು ಬೆಳಿಗ್ಗೆ ಶವವಾಗಿ ಪತ್ತೆಯಾಗಿದ್ದಾನೆ.
ಜಲ ದುರ್ಗದಲ್ಲಿ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ಕುಟಂಬ ಸಮೇತ ದೇವರ ದರ್ಶನ ಕ್ಕೆ ಎಂದು ಹೋದ ಮೃತ ವ್ಯಕ್ತಿ ಶಿವಪ್ಪ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಈಜಲು ನದಿಗೆ ಇಳಿದಿದ್ದು,ನದಿಯ ಮಧ್ಯೆ ಭಾಗದ ಆಳವಾದ ಪ್ರದೇಶಕ್ಕೆ ಹೋಗುತ್ತಿದ್ದಂತೆ ಹೊರಬರಲು ಆಗದೇ ನಾಪತ್ತೆಯಾಗಿದ್ದ,ಈ ಬಗ್ಗೆ ಪ್ರತ್ಯೇಕ್ಷ ದರ್ಶಿಗಳ ಮಾಹಿತಿ ಮೇರೆಗೆ ಲಿಂಗಸಗೂರು ಅಗ್ನಿ ಶಾಮಕ ದಳದ ಹೊನ್ನಪ್ಪ ರವರು ತಮ್ಮ ಸಿಬ್ಬಂದಿಗಳ ತಂಡದೊಂದಿಗೆ ನಾಪತ್ತೆಯಾದ ವ್ಯಕ್ತಿಯ ಶೋಧ ಕಾರ್ಯ ಕ್ಕೆ ಮುಂದಾಗಿದ್ದರು.
ಮೃತ ದೇಹ ಪತ್ತೆಯಾಗುತ್ತಿದ್ದಂತೆ ಲಿಂಗಸಗೂರು ಪೋಲಿಸ್ ಠಾಣಾ ಪೋಲಿಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಳ್ಳಲು ಮುಂದಾಗಿದ್ದಾರೆ.
ಮೃತನಿಗೆ ಪತ್ನಿ,ಎರಡು ಮಕ್ಕಳು ಇದ್ದು ತಮ್ಮ ಸ್ವಂತ ಗ್ರಾಮವಾದ ಕವಿತಾಳ ಸಮೀಪದ ಹುಸೇನ್ ಪುರ ಗ್ರಾಮ ಬಿಟ್ಟು ತೋರಲ ಬೆಂಚಿ ಗ್ರಾಮದಲ್ಲಿ ವಾಸವಿದ್ದ ಎಂದು ಕುಟುಂಬದ ಮೂಲದಿಂದ ತಿಳಿದು ಬಂದಿದೆ.