ಯತ್ನಾಳರತ್ತ ಮಚ್ಚುಹಿಡಿದ ವ್ಯಕ್ತಿ ಆಗಮನ,ಕೊಲೆಶಂಕೆ,ವಿಚಾರಣೆ

Laxman Bariker
ಯತ್ನಾಳರತ್ತ ಮಚ್ಚುಹಿಡಿದ ವ್ಯಕ್ತಿ ಆಗಮನ,ಕೊಲೆಶಂಕೆ,ವಿಚಾರಣೆ
WhatsApp Group Join Now
Telegram Group Join Now

ಯತ್ನಾಳರತ್ತ ಮಚ್ಚುಹಿಡಿದ ವ್ಯಕ್ತಿ ಆಗಮನ,ಕೊಲೆಶಂಕೆ,ವಿಚಾರಣೆ

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು: ಪಟ್ಟಣದಲ್ಲಿ ಇಂದು ನಡೆದ ಕಾರ್ಯಕ್ರಮ ದಲಿ ಯತ್ನಾಳ ಮಾತನಾಡುವಾಗ ವ್ಯಕ್ತಿ ಯೊಬ್ಬ ಮಚ್ಚು ಹಿಡಿದು ವೇದಿಕೆಗೆ ಬರುವಾಗ ಪೊಲೀಸ್ ರು ತಡೆದು ವಿಚಾರಣೆ ನಡೆಸುತಿದ್ದಾರೆ
ಪಟ್ಟಣದ ಸರಕಾರಿ ಪಿಯು ಕಾಲೇಜು ಮೈದಾನದಲಿ ಶ್ರೀ ರಾಮ ನವಮಿ ಹಿಂದು ಸಾಮ್ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಪ್ರಮೋದ ಮುತಾಲಿಕ ಹಾಗೂ ಬಸನಗೌಡ ಯತ್ನಾಳ ಆಗಮಿಸಿದ್ದರು ಯತ್ನಾಳ ಮಾತನಾಡುತಿರುವಾಗ ಶ್ರೀ ನಿವಾಸ ಪೂಜಾರಿ ಎಂಬ ವ್ಯಕ್ತಿ ಮಚ್ಚು ಹಿಡಿದು ವೇದಿಕೆಗೆ ಆಗಮಿಸಿದ್ದು ಅಲ್ಲೆ ಇದ್ದ ಪೊಲೀಸ್ ಇದನ್ನು ಗಮನಿಸಿ ವ್ಯಕ್ತಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದು ವಿಚಾರಣೆ ನಡೆಸುತಿದ್ದಾರೆ
ಮಾಹಿತಿ ಪ್ರಕಾರ ಶ್ರೀನಿವಾಸ ಪೂಜಾರಿ ಎಂಬಾತ ಲಿಂಗಸಗೂರು ನಿವಾಸಿಯಾಗಿದ್ದು ಹಟ್ಟಿಕಂಪನಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ತಿಳಿದುಬಂದಿದೆ
ಈತ ಹಣಕಾಸಿನ ಕೊಡುಕೊಳುವ ವ್ಯವಹಾರ ಹೆಚ್ಚು ಮಾಡುತಿದ್ದು ಈತನಿಗೂ ಮತ್ತೊಬ್ಬ ವ್ಯಕ್ತಿಗೂ ಜಗಳವಾಗಿತ್ತು ಆ ಹಿನ್ನೆಲೆಯಲ್ಲಿ ಮಚ್ಚು ಹಿಡಿದು ಬಂದಿದ್ದ ಎನ್ನುವ ಮಾತುಗಳು ಕೇಳಿಬರುತ್ತಿವೆಯಾದರು
ಮಚ್ಚು ಹಿಡಿದು ವೇದಿಕೆಯತ್ತ ಯಾಕೆ ನಡೆದ ಇದು ಕೊಲೆಯ ಶಂಕೆಯೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ
ಲಿಂಗಸಗೂರು ಠಾಣೆಯಲಿ ಎಎಸ್ಪಿ ನೇತೃತ್ವದಲ್ಲಿ ವಿಚಾರಣೆ ನಡೆಯುತ್ತಿದೆ

WhatsApp Group Join Now
Telegram Group Join Now
Share This Article