ಮೇ16ರಿಂದಕರಡಕಲ್‌ನಲ್ಲಿ ಡಾ ಮಹಾಂತ ಶಿವಯೋಗಿಗಳ ೭ನೇ ಶರಣೋತ್ಸವ ಕಾರ್ಯಕ್ರಮ

Laxman Bariker
ಮೇ16ರಿಂದಕರಡಕಲ್‌ನಲ್ಲಿ ಡಾ ಮಹಾಂತ ಶಿವಯೋಗಿಗಳ ೭ನೇ ಶರಣೋತ್ಸವ ಕಾರ್ಯಕ್ರಮ
oppo_32
WhatsApp Group Join Now
Telegram Group Join Now

ಮೇ16ರಿಂದಕರಡಕಲ್‌ನಲ್ಲಿ ಡಾ ಮಹಾಂತ ಶಿವಯೋಗಿಗಳ ೭ನೇ ಶರಣೋತ್ಸವ ಕಾರ್ಯಕ್ರಮ

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸುಗೂರ: ಪುರಸಭೆ ವ್ಯಾಪ್ತಿಯ ಕರಡಕಲ್ ಗ್ರಾಮದ ಬಸವ ಮಂಟಪ ಶ್ರೀ ವಿಜಯಮಹಾಮತೇಶ್ವರ ಸಂಸ್ಥಾನಮಠದಲ್ಲಿ ದಿನಾಂಕ ೧೬ರಿಂದ ೧೯ರವರಗೆ ಶರಣ ಸಿದ್ಧಾಂತ ವಿದ್ಯಾಪೀಠದ ೫೪ನೇ ಶಿವಾನುಭವ ತರಬೇತಿ ಶಿಬರ ಹಾಗೂ ಡಾ ಮಹಾಂತ ಶಿವಯೋಗಿಗಳ ೭ನೇ ಶರಣೋತ್ಸವ ಮತ್ತು ವಚನ ಕಟ್ಟಿನ ಅಡ್ಡಪಲ್ಲಿಕಿ ಉತ್ಸವ ಜರುಗಲಿದೆ.
ನಾಲ್ಕು ದಿನ ಕಾರ್ಯಕ್ರಮದಲ್ಲಿ ದಿನಾಂಕ ೧೬ರಂದು ಸಂಜೆ ೬.೩೦ಕ್ಕೆ ಶಿವಾನುಭವ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯವನ್ನು ಮಹಾರಾಜ ನಿರಂಜನ ಜಗದ್ಗುರು ಡಾ ತೊಂಟದ ಸಿದ್ದರಾಮ ಮಹಾಸ್ವಾಮಿಗಳು ತೋಂಟದಾರ್ಯ ಮಠ ಗದಗ, ಸಮ್ಮುಖ ಗುರುಬಸವ ಮಹಾಸ್ವಾಮಿಗಳು ವಿರಕ್ತಮಠ ಪಾಂಡೋಮಟ್ಟಿ, ವೇಮನ ಮಹಾಸ್ವಾಮಿಗಳು ಹೇಮ ವೇಮ ಗುರುಪೀಠ ಯರಿಹೊಸಳ್ಳಿ ಹಾಗೂ ಸಮಾರಂಭದ ನೇತೃತ್ವವನ್ನು ಗುರುಬಸವ ಮಹಾಸ್ವಾಮಿಗಳು ಘನಮಠೇಶ್ವರ ಮಠ ಸಂತೆಕೆಲ್ಲೂರು, ಸಿದ್ಧಲಿಂಗ ಮಹಾಸ್ವಾಮಿಗಳು ಚಿತ್ತರಗಿ ಶಾಖಾ ಅನುಭವ ಮಂಟಪ ಲಿಂಗಸುಗೂರು, ಮುಖ್ಯಾತಿಥಿಗಳಾಗಿ ವಿಧಾನ ಪರಿಷತ ಸದಸ್ಯರಾದ ಶರಣಗೌಡ ಪಾಟೀಲ ಬಯ್ಯಾಪೂರ
ದಿನಾಂಕ ೧೭ರಂದು ವಿಶೇಷ ಉಪನ್ಯಾಸ ಕಾರ್ಯಕ್ರಮಗಳು ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣವರು ಕುರಿತು ಸಮಾರಂಭದಲ್ಲಿ ದಿವ್ಯ ಸಾನಿಧ್ಯವನ್ನು ಗುರುಸಿದ್ದರಾಜ ಯೋಗೆಂದ್ರ ಮಹಾಸ್ವಾಮಿಗಳು ಮೂರುಸಾವಿರ ಮಠ ಹುಬ್ಬಳ್ಳಿ, ಹಾಗೂ ಮುಖ್ಯಾತಿಥಿಗಳಾಗಿ ಮಾಜಿ ಸಚಿವರಾದ ಅಮರೇಗೌಡ ಪಾಟೀಲ ಬಯ್ಯಾಪೂರ.
ದಿನಾಂಕ ೧೮ರಂದು ಶರಣೆಯರ ಹೋರಾಟದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು ನಿಡಸೂಸಿ ಹಾಗೂ ಮುಖ್ಯಅತಿಥಿಗಳಾಗಿ ಶಾಸಕ ಮಾನಪ್ಪ ವಜ್ಜಲ, ಮಾಜಿ ಕೇಂದ್ರ ಸಚಿವ ಬಸವರಾಜ ಪಾಟೀಲ ಅನ್ವರಿ.
ದಿನಾಂಕ ೧೯ರಂದು ಶಿವಾನುಭವ ಶಿಬರ ಮಂಗಲ ಸಮಾgಂಭ ಹಾಗು ಡಾ.ಮಹಾಂತ ಶಿವಯೋಗಿಗಳ ೭ನೇ ಶರಣೋತ್ಸವ ಮಹಾಂತ ಜೋಳಿಗೆ ಹಾಗೂ ವಚನ ಕಟ್ಟಿನ ಅಡ್ಡಪಲ್ಲಕಿ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮುರಘಮಠ ಧಾರವಾಡ ಮುಖ್ಯಾತಿಥಿಗಳಾಗಿ ಡಾ.ಬಿ.ಎಚ ಕೆರೂಡಿ, ಗಂಗಮ ವೀರಭದ್ರಪ್ಪ ಕುರುಕುಂದಿ ವಹಿಸಲ್ಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿರುವರು.

WhatsApp Group Join Now
Telegram Group Join Now
Share This Article