ತಹಸೀಲ್ ಆಫೀಸ್ ಹಣಗೋಲಮಾಲ್:
ಸಹಾಯಕ ಆಯುಕ್ತ,ತನಿಖಾಧಿಕಾರಿ ಗಜಾನನ ಬಾಲೆ ತನಿಖೆ ಪ್ರಾರಂಭ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ಪಟ್ಟಣದ ತಹಸೀಲ್ದಾರ ಕಛೇರಿಯಲ್ಲಿ 1ಕೋಟಿ 87 ಲಕ್ಷ ಹಣ ಸಿಬ್ಬಂದಿಯ ಸಂಬಂಧಿಕರ ಖಾತೆಗೆ ವರ್ಗಾವಣೆಯಾಗಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ತನಿಖಾಧಿಕಾರಿಯನ್ನು ನೇಮಕ ಮಾಡಿದ್ದು ಹಗರಣದ ಬೆನ್ನುಹತ್ತಿ ತನಿಖೆ ಪ್ರಾರಂಭ ಮಾಡಿದ್ದಾರೆ
ಪಟ್ಟಣದ ತಹಸೀಲ್ ಕಾರ್ಯಾಲಯಕ್ಕೆ ಬಂದಿರುವ ಧಾರ್ಮಿಕ ದತ್ತಿ ಹಾಗೂ ಪರಿಸರ ವಿಕೋಪದಡಿಯಲ್ಲಿ ಬಂದಿರುವ ಹಣದಲ್ಲಿ ಸಿಬ್ಬಂದಿ ಯಲ್ಲಪ್ಪ ಎನ್ನುವವರು ತಮ್ಮ ಸಂಬಂಧಿಕರ ಖಾತೆಗೆ ಕೆನರಾ ಬ್ಯಾಂಕಿನಿಂದ ವರ್ಗಾವಣೆ ಮಾಡಿದ್ದಾರೆ ಎಂಬ ಮಾಹಿತಿ ಬರುತ್ತಿರುವಂತೆ ಎಚ್ಚೆತ್ತುಕೊಂಡಿರುವ ಇಲಾಖೆ ರಾಯಚೂರು ವಿಭಾಗದ ಸಹಾಯಕ ಆಯುಕ್ತರಾದ ಗಜಾನನ ಬಾಲೆ ಎನ್ನುವವರನ್ನು ತನಿಖಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದ್ದು ಅವರೊಡನೆ ಸಿದ್ದಪ್ಪ ಎನ್ನುವವ ಇದ್ದಾರೆ
ಬೆಳಗಿನಿಂದ ತಹಸೀಲ್ದಾರ ಕಛೇರಿಯ ವಿವಿಧ ಸಿಬ್ಬಂದಿಗಳು ಹಾಗೂ ತಹಸೀಲ್ದಾರರಿಂದ ಮಾಹಿತಿಯನ್ನು ಕಲೆಹಾಕುತ್ತಿದ್ದು ಸ್ಥಳಿಯ ಕೆನರಾಬ್ಯಾಂಕಿಗೂ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ
ಅವರು ಕಲ್ಯಾಣ ಕರ್ನಾಟಕ ಪತ್ರಿಕೆಯೊಂದಿಗೆ ಮಾತನಾಡಿ ಹಗರಣದ ಕುರಿತು ತನಿಖೆಯನ್ನು ನಡೆಸಲಾಗುತ್ತಿದೆ ತನಿಖಾ ನಂತರವೇ ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದರು