ತಾ,ಪಂ ಇಓ ಉಮೇಶ ಕಛೇರಿಗೆ ಸರಿಯಾಗಿ ಬರೋಲ್ಲ,ಜನರಿಗೆ ಸಿಗೋಲ್ಲ ಆರೋಪ!!
ಅಧಿಕಾರಿ ವಾಹನ ಸರಿಯಾಗಿದ್ರು ರಿಪೇರಿ ಇದೆ ಎನ್ನುವ ಇಓಉಮೇಶ!!
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ತಾಲೂಕಾ ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ ಯಾವಾಗ ನೋಡಿದರು ಕಛೇರಿಗೆ ಬರೋಲ್ಲ,ಜನರಿಗೆ ಸಿಗೋಲ್ಲ ಹೀಗಾದರೆ ಜನರ ಸಮಸ್ಯೆಗಳಿಗೆ ಪರಿಹಾರ ದೊರಕುವುದಾದರು ಯಾವಾಗ?ಇವರ ಮೇಲೆ ಸೂಕ್ತಕ್ರಮ ಜರುಗಿಸಬೇಕು ಎಂದು ದಲಿತ ಸಂಘಟನೆಯ ದುರಗಪ್ಪ ಡಬ್ಬೇರಮಡು ಆರೋಪಿಸುತ್ತಾರೆ
ತಾಲೂಕಾ ಪಂಚಾಯ್ತಿ ಅಧಿಕಾರಿ ಉಮೇಶರವರು ನಮ್ಮ ತಾಲೂಕಿಗೆ ಅಧಿಕಾರಿಯಾಗಿ ಬಂದಾಗಿನಿಂದ ಕಛೇರಿಗೆ ಬರುತ್ತಿರುವುದು ಅಪರೂಪವೆಂದೆ ಹೇಳಬೇಕು ಅವರು ಕೆಲಸ ಮಾಡಲು ಬಂದಿದ್ದಾರೆಯೋ ಅಥವ ಕೇವಲ ವೇತನದ ಅಧಿಕಾರಿಯೋ ತಿಳಿಯದಾಗಿದೆ ಇವರ ಮೇಲೆ ಅಧಿಕಾರಿಗಳು ಜನಪ್ರತಿನಿಧಿಗಳು ಗಮನಹರಿಸಿ ಸೂಕ್ತಕ್ರಮ ಜರುಗಿಸಬೇಕು ಎಂದು ಅವರು ಹೇಳುತ್ತಾರೆ
ಅಲ್ಲದೆ ಇವರು ಜನರಿಗೆ ಸಿಗದೆ ಓಡಾಡುವುದಾದರೆ ತಾಲೂಕಿನ ಕುಡಿಯುವ ನೀರು ವಿವಿಧ ಸರಕಾರಿ ಯೋಜನೆಗಳ ಮಾಹಿತಿ ಇತ್ಯಾದಿ ಜನಸಾಮಾನ್ಯರ ಕೆಲಸ ಕಾರ್ಯಗಳು ಆಗುವುದಾದರು ಯಾವಾಗ ಗ್ರಾಮೀಣ ಪ್ರದೇಶದಿಂದ ನಿತ್ಯವು ಹಲವಾರು ಜನರು ಸಮಸ್ಯೆಯನ್ನು ಹೊತ್ತುಕೊಂಡು ಬರುತ್ತಾರೆ ಆದರೆ ಇಓ ಇಲ್ಲವೆಂಬ ಖಾಲಿಖುರ್ಚಿಯನ್ನು ನೋಡುತ್ತಲೆ ಹಿಂದಿರುತ್ತಾರೆ
ಅಲ್ಲದೆ ಬಸವರಾಜ ಆನೆಹೊಸೂರು ಎನ್ನುವವರು ಜನವರಿ ೧೩ರಂದು ತಾಲೂಕಾ ಪಂಚಾಯ್ತಿಗೆ ಒಂದೆ ದಿನ ಎರಡು ಸಲ ಭೇಟಿ ನೀಡಿದರು ಇಓ ಸೇರಿದಂತೆ ಯಾವ ಅಧಿಕಾರಿಗಳು ಇರಲಿಲ್ಲವೆಂದು ಜಿ,ಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಫೋಟೊಗಳ ಸಹಿತ ಮನವಿ ಸಲ್ಲಿಸುತ್ತಾರೆ

ಇಲಾಖೆ ವಾಹನ ಸರಿ ಇದ್ದರು ರಿಪೇರಿ ಇದೆ ಎನ್ನುವ ಇಓ:ಇವತ್ತು ನೀವು ಕಛೇರಿಯಲ್ಲಿ ಇಲ್ಲವಲ್ಲ ಎಂದಾಗ ನಾನು ರಾಯಚೂರಿಗೆ ಹೊರಟಿದ್ದೀನಿ ಲೋಕಾಯುಕ್ತ ಕರೆ ಇದೆ ಎಂದು ಹೇಳುತ್ತಾರೆ ನಿಮ್ಮ ವಾಹನ ಇಲ್ಲೆ ಇದೆ ಬಸ್ ನಲ್ಲಿ ಹೊರಟಿದ್ದೀರಾ? ಎಂದರೆ ಇಲಾಖೆಯ ವಾಹನ ರಿಪೇರಿ ಇದೆ ಅದು ಸ್ಟಾರ್ಟ ಆಗುವುದಿಲ್ಲ ಎಲ್ಲೆಂದರಲ್ಲಿ ನಿಲ್ಲುತ್ತದೆ ಅದಕ್ಕಾಗಿ ಖಾಸಗಿ ವಆಹನ ತೆಗೆದುಕೊಂಡು ಹೋಗುತ್ತಿದ್ದೇನೆ ಎನ್ನುತ್ತಾನೆ ಆದರೆ ಕಛೇರಿ ವಾಹನದ ಚಾಲಕನನ್ನು ವಿಚಾರಿಸಿದರೆ ನಮ್ಮದು ಹೊಸ ವಾಹನ ರಿಪೇರಿ ಇದೆ ಎಂದು ಯಾವನು ಹೇಳಿದ ನಿಮಗೆ ಎಂದು ನಮಗೆ ಪ್ರಶ್ನೆ ಮಾಡುತ್ತಾನೆ ಇದರಲ್ಲಿ ಇಓ ಉಮೇಶ ಎಂಥ ಸುಳ್ಳು ಹೇಳುತ್ತಿದ್ದಾನೆ ಎಂದು ಅರ್ಥೈಯಿಸಬಹುದಲ್ಲವೇ?
ರಾಯಚೂರು ಲೋಕಾಯುಕ್ತ ಕಛೇರಿಗೆ ಹೋಗಿದ್ದು ನಿಜವೇ?: ಇಓ ಉಮೇಶ ಹೇಳುವ ವಾಹನದ ಸುಳ್ಳು ಕೇಳಿದ ನಂತರ ಸಂಶಯ ಹೆಚ್ಚಾಯಿತು ಹಾಗಾದರೆ ಲೋಕಾಯುಕ್ತ ಕಚೇರಿಗೆ ಹೋಗಿರುವುದು ನಿಜವೇ ಎನ್ನುವ ವಿಷಯದ ಬೆನ್ನುಹತ್ತಿ ಲೋಕಾಯುಕ್ತರಿಗೆ ಕಚೇರಿಗೆ ಫೋನ್ ಮಾಡಲಾಯಿತಾದರು ಅಲ್ಲಿಂದ ಸರಿಯಾದ ಮಾಹಿತಿ ತಿಳಿಯಬೇಕಾಗಿದೆ
ತಾ,ಪಂ ಇಓ ಉಮೇಶ ಹೀಗೆ ಇಲ್ಲಿಗೆ ಅಧಿಕಾರಿಯಾಗಿ ಬಂದಾಗಿನಿಂದ ಸರಿಯಾಗಿ ಆಫಿಸಿಗೆ ಬರುವುದಿಲ್ಲ ಎನ್ನುವ ಸಾಕಷ್ಟು ದೂರುಗಳಿದ್ದು ಕೇಳಿದವರಿಗೆ ಹಾರಿಕೆಯ ಉತ್ತರ ನೀಡುತ್ತಿದ್ದು ಮೇಲಾಧಿಕಾರಿಗಳು ಕೂಡಲೇ ಸೂಕ್ತಕ್ರಮ ಜರುಗಿಸಬಹುದೆ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ
ಹೇಳಿಕೆ:ನಾನು ಯಾವಾಗಲೂ ಆಫಿಸಿನಲ್ಲಿ ಇರುತ್ತೇನೆ, ಕೆಲಸ ಇದ್ದಾಗ ಹೊರಹೋಗುತ್ತೇನೆ ಬೆಳಗ್ಗೆ ಇಲ್ಲವೇ ಸಂಜೆ ಆಫಿಸಿಗೆ ಬಂದೇ ಬರುತ್ತೇನೆ ಬೇಕಾದರೆ ನೀವು ಇಂದಿನಿಂದಲೆ ಪರೀಕ್ಷೆ ಮಾಡಬಹುದು-ಉಮೇಶ ಇಓ ತಾ,ಪಂ ಕಾರ್ಯನಿರ್ವಾಹಕ ಅಧಿಕಾರಿ ಲಿಂಗಸಗೂರು