ಸ್ವಾಮಿ ವಿವೇಕಾನಂದರು ಯುವ ಜನತೆಗೆ ಸ್ಫೂರ್ತಿಯ ಚಿಲುಮೆ – ಕೆ.ಶಿವನಗೌಡ ನಾಯಕ.
ಕಲ್ಯಾಣ ಕರ್ನಾಟಕ ವಾರ್ತೆ
ರಾಯಚೂರು – ಸ್ವಾಮಿ ವಿವೇಕಾನಂದರು ಯುವ ಜನತೆಗೆ ಸ್ಫೂರ್ತಿಯ ಚಿಲುಮೆಯಂತಿದ್ದು ವಿವೇಕಾನಂದರ ಚಿಂತನೆ, ಸಂದೇಶಗಳು ಎಂದೆಂದಿಗೂ ಪ್ರಸ್ತುತವಾಗಿವೆ ಎಂದು ಮಾಜಿ ಸಚಿವ ಕೆ.ಶಿವನಗೌಡ ನಾಯಕ ಹೇಳಿದರು.
ಆಂದ್ರಪ್ರದೇಶದ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನದ ಹತ್ತಿರ ಜೈ ಭಾರತ ಮಾತಾ ಸೇವಾ ಸಮಿತಿ ವತಿಯಿಂದ ಹಮ್ಮಿಕೊಂಡ ಸ್ವಾಮಿ ವಿವೇಕಾನಂದರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು,
ಯುವ ಜನತೆಗೆ ಸ್ಫೂರ್ತಿಯ ಚಿಲುಮೆಯಂತಿದ್ದ ವಿವೇಕಾನಂದರ ಚಿಂತನೆ, ಸಂದೇಶಗಳು ಎಂದೆಂದಿಗೂ ಪ್ರಸ್ತುತ. ಸ್ವಾಮಿ ವಿವೇಕಾನಂದರ ಜೀವನ ಸಂದೇಶಗಳಲ್ಲಿ ವಿಶೇಷವಾಗಿ ಯುವಜನರ ಮೇಲೆ ಪ್ರಭಾವ ಬೀರುವ, ಬಾಳು ಬೆಳಗುವ ಅಂಶಗಳಿದ್ದು . ಯುವಜನತೆಯ ಆದರ್ಶವಾಗಿರುವ ಈ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರು ಬೆಳಗಿದ ಜ್ಞಾನದ ದೀವಿಗೆ ಜಗತ್ತಿನ ಅದೆಷ್ಟೋ ಯುವಕ,ಯುವತಿಯರ ಬದುಕಿನಲ್ಲಿ ಹೊಸ ಚೈತನ್ಯ ತಂದಿದೆ, ಸಮಾಜವನ್ನು ತಿದ್ದುವ ಸಂದೇಶಗಳ ಮೂಲಕವೇ ಜನತೆಯ ಮನಗೆದ್ದಿದ್ದರು. ವಿವೇಕಾನಂದರು ತಮ್ಮ ಸಂದೇಶ, ತತ್ವ, ಆದರ್ಶ, ಚಿಂತನೆಗಳ ಮೂಲಕ ಅಮರರಾಗಿದ್ದಾರೆ ಎಂದು ಕೆ.ಶಿವನಗೌಡ ನಾಯಕ ಹೇಳಿದರು.
ಈ ಸಂದರ್ಭದಲ್ಲಿ ಪೂಜ್ಯ ಶ್ರೀ ಹವಾ ಮಂಜುನಾಥ ಮಹಾಸ್ವಾಮಿಗಳು, ಸೇರಿದಂತೆ ಅನೇಕ ಮಠಾಧೀಶರು, ಜಂಬಣ್ಣ ನೀಲಗಲ್ ದೇವದುರ್ಗ ಬಿಜೆಪಿ ಮಂಡಲ ಅಧ್ಯಕ್ಷರು, ಹರ್ಷಾನಂದ ಗುತ್ತೇದಾರ ಆಳಂದ್,ಶಂಕ್ರಣ್ಣ ಕಜಿಗಾರ್,ವೈಜಾನಾಥ ವಕೀಲರು ಜೈ ಭಾರತ ಮಾತಾ ವಕ್ತರಾರು ಅನೇಕ ಮುಖಂಡರು, ವಿವೇಕಾನಂದ ಅನುಯಾಯಿಗಳು ಭಾಗವಹಿಸಿದ್ದರು.