ಪರಿಸರಜಾಗೃತಿ,ಗಾಂಧೀ ತತ್ವ ನಾಡಿಗೆ ದೊರೆಯಬೇಕು-ಸ್ವಾಮಿ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ನಾಡಿನಲ್ಲಿ ಪರಿಸರ ಜಾಗೃತಿ ಮೂಡಿಬರಬೇಕು ಹಾಗೂ ಗಾಂಧೀಜಿ ನೂಲು ತೆಗೆದ ಚರಕ ಮತ್ತೆ ಜನರ ಕೈಗೆ ಬರಬೇಕು ಎಂದು ಡಾ ಎಚ್ ಕೆ ಸ್ವಾಮಿ ಹೇಳಿದರು
ಅವರು ಬೇಡರಕಾರ್ಲಕುಂಟಿಯ ಕಾಲಜ್ಞಾನಮಠದಲ್ಲಿ ನಡೆದ ೧೫೩ನೇ ಧಾರ್ಮಿಕ ದಾಸೋಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಚರಕದೊಂದಿಗೆ ಪ್ರಾತ್ಯಕ್ಷಿಕೆ ತೋರಿಸುತ್ತಾ ಗಾಂಧೀಝಿಯವರು ಚರಕವನ್ನು ಇಡೀ ದೇಶಕ್ಕೆ ಪರಿಚಯ ಮಾಡಿಸಿ ನಮ್ಮನ್ನು ಸ್ವಾವಲಂಭಿಗಳಾಗಿ ಮಾಡಿದ್ದರು ಬ್ರಿಟಿಷರ ಬಂದ ನಂತರ ಚರಕ ಮೂಲೆ ಸೇರಿತು ಇದರಿಂದ ಹಲವರು ಕೆಲಸಗಳು ಸ್ಥಗಿತವಾಯಿತು ಮತ್ತು ನಿರುದ್ಯೋಗ ತಾಂಡವವಾಡ ತೊಡಗಿತು ಚರಕವೊಂದಿದ್ದರೆ ಅದಕ್ಕೆ ಬೇಕಾಗುವ ಹತ್ತಿ ನೂಲು ತೆಗೆದು ಬಟ್ಟೆ ನೇಯುವುದು ಬಣ್ಣ ಹಾಕುವುದು ಹೀಗೆ ವಿವಿಧ ಕೆಲಸಗಳು ಉದ್ಭವವಾಗುತ್ತವೆ ಅದಕ್ಕಾಗಿ ಪುನಃ ನಮಗೆ ಚರಕ ಬರಬೇಕು ಎಂದು ಹೇಳಿದರು
ಮೂಲತಃ ತರಿಕೇರಿಯವರಾದ ಸ್ವಾಮಿ ಸದ್ಯ ಚಿತ್ರದುರ್ಗದ ನಿವಾಸಿಯಾಗಿದ್ದಾರೆ ಗಾಂಧಿಯವರ ಸಬರಮತಿ ಆಶ್ರಮಕ್ಕೆ ಭೇಟಿ ನೀಡಿ ಅಲ್ಲಿಂದ ಪ್ರಭಾವಿತರಾಗಿ ಸುಮಾರು ೨೦೦೧ರಿಂದ ಪರಿಸರ ಜಾಗೃತಿ ಹಾಗೂ ಗಾಂಧೀ ತತ್ವವವನ್ನು ಪ್ರಚಾರ ಮಾಡುತ್ತಾ ಸಾಗಿದ್ದಾರೆ ಮಹಾರಾಷ್ಟç,ಬಿಹಾರ ಬಾಂಬೆ ಸೇರಿದಂತೆ ಹೊರರಾಜ್ಯದಲ್ಲಿ ಪ್ರಚಾರ ಮಾಡಿದ್ದಾರೆ ಹಾಗೆ ರಾಜ್ಯದಲ್ಲಿ ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿ ಪ್ರಚಾರ ಮಾಡುತ್ತಿದ್ದಾರೆ ಚರಕ ರೈತರದು ಆದರೆ ರೈತರು ಮಿಲ್ ಗಳಲ್ಲಿ ನೆಯ್ದ ಟಾವೆಲ್ ಗಳನ್ನು ಬಳಕೆ ಮಾಡುತ್ತಿದ್ದಾರೆ ಇದು ದುರಂತವಾಗಿದೆ ರೈತರೆ ಚರಕ ಚಳುವಳಿ ಮಾಡಿ ಎಲ್ಲರೂ ಬಳಕೆ ಮಾಡಿದರೆ ರಾಜ್ಯದಲ್ಲಿ ದೇಶದಲ್ಲಿ ನಿರುದ್ಯೋಗ, ಬಡತನ ಶೋಷಣೆ ಸಮಸ್ಯೆಗಳು ನಿಲ್ಲಬಹುದು ಇಂದಿಲ್ಲ ನಾಳೆ ಇತಿಹಾಸ ಮರುಕಳಿಸುತ್ತದೆ ಎಂಬ ಭರವಸೆಯಲ್ಲಿ ಇದುವರೆಗೆ ಸುಮಾರು ೧೫೦೦ ಕಾರ್ಯಕ್ರಮಗಳನ್ನು ನೀಡಿದ್ದೇನೆ ಆದರೆ ಬದಲಾವಣೆ ಮಾತ್ರ ಇದುವರೆಗೂ ಸಫಳವಾಗಿಲ್ಲ ಎನ್ನುವ ನೋವು ನನಗಿದೆ ಎನ್ನುತ್ತಾರೆ
ನೆರೆದ ಜನರಿಗೆ ಪ್ರಾತ್ಯಕ್ಷಿಕವಾಗಿ ಚರಕದಿಂದ ಹೇಗೆ ನೆಯ್ಗೆ ನೆಯಬಹುದು ಎಂಬುದನ್ನು ತೋರಿಸಿದರು ಅಲ್ಲದೆ ಹತ್ತಿಬಟ್ಟೆ ಹಾಗೂ ಇತರೆ ಬಟ್ಟೆಗಳ ಮಾಹಿತಿಯನ್ನು ನೀಡಿದರು
ಈ ಸಂದರ್ಭದಲ್ಲಿ ಶಿವಕುಮಾರಮಹಾಸ್ವಾಮಿಗಳು, ಕರಿಯಪ್ಪ ದೇವಿಕೇರಿ, ನಿರುಪಾದಿ ಕವಿಗಳು,ಸಂಗಮೇಶ ಶರಣರು, ಶಶಿನಾ ಚಿಕ್ಕಹೆಸರೂರು ರಾಚೂಟಯ್ಯಸ್ವಾಮಿ, ಬಸವರಾಜ ರಂಗಾಪೂರು ಸಏರಿದಂತೆ ಇದ್ದರು