ಲಿಂಗಸುಗೂರಿನ ವಿದ್ಯಾರ್ಥಿನಿ ಕೂಲೆ ಆರೋಪಿ ಪೊಲೀಸರಿಗೆ ಶರಣು
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸುಗೂರ:ಪಟ್ಟಣದ ರಾಜಾಭಕ್ಷಾ ದರ್ಗಾ ಓಣಿಯ ವೈಹಿದ ಎಂಬವರ ಮಗಳು ಶಿಫಾ ಎಂಬ ಸ್ನಾತಕೋತ್ತರ ವಿದ್ಯಾರ್ಥಿನಿ ಸಿಂಧನೂರಿನಲ್ಲಿ ಕೊಲೆಯಾಗಿದ್ದು ಕೂಲೆ ಆರೋಪಿ ಶೇಕ್ ಮೋಬಿನ್(೨೭) ಲಿಂಗಸುಗೂರ ಈತನು ಸ್ಥಳೀಯ ಪೊಲೀಸ್ ಠಾಣೆಯ ಪಿ.ಐ ಪುಂಡಲಿಕ ಪಟಾತರ ಎದರು ಶರಣಾಗಿದ್ದು ಸಿಂಧನೂರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿಫಾ ಸಿಂಧನೂರಿನ ಕುಷ್ಟಗಿ ರಸ್ತೆಯಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೆಜಿನಲ್ಲಿ ಎಂ.ಎಸ್ಸಿ ಸ್ನಾತಕೂತರ ಪದವಿ ಓದುತ್ತಿದ್ದು ನಿತ್ಯವು ಲಿಂಗಸುಗೂರನಿಂದ ಸಿಂಧನೂರವರಗೂ ಬಸ ಮೂಲಕ ಸಂಚರಿಸುತ್ತಿದಳು ಗುರುವಾರ ವಿದ್ಯಾರ್ಥಿನಿ ಶಿಫಾಳನ್ನು ಹಿಂಬಾಲಿಸಿದ ಲಿಂಗಸುಗೂರ ಪಟ್ಟಣದ ಟೈಲ್ಸ್ ಕೆಲಸ ಮಾಡುತ್ತಿರುವ ಶೇಕ್ ಮೋಬಿನ ಎಂಬ ಯುವಕ ಸಿಂಧನೂರಿನ ಹೂಸ ಲೆಔಟನಲ್ಲಿ ಕುತ್ತಿಗೆಗೆ ಚಾಕುನಿಂದ ಇರಿದು ಕಲ್ಲು ಎತ್ತಾಕಿ ಕೊಲೆ ಮಾಡಿರುವದು ಎಂದು ತಿಳಿದಿದೆ.
ಶರಣಾದ ಯುವಕ ಶೆಕ್ ಮೋಬಿನ್ ಹಾಗೂ ಕೊಲೆಯಾದ ವಿದ್ಯಾರ್ಥಿನಿ ಇಬ್ಬರು ಪರಸ್ಪರ ಪ್ರೀತಿ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ವಿದ್ಯಾರ್ಥಿನಿ ಕುಟುಂಬದವರು ಪ್ರೀತಿಗೆ ವಿರೋಧ ವ್ಯಕ್ತಪಡಿಸಿದರಿಂದ ಕೂಲೆಯ ಘಟಣೆ ಜರಗಿದೆ.