ಗಣೇಶಮೂರ್ತಿಗಳಿಗೆ ರಂಗು ತುಂಬಿ ಬದುಕು ಕಟ್ಟಿಕೊಳ್ಳುವ ಸುಮಿತ್ರಾ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರ:ಸಾಮಾನ್ಯವಾಗಿ ಗಣೇಶಮೂರ್ತಿಗಳನ್ನು ಪುರುಷರೆ ಮಾಡುತ್ತಾರೆ ಆದರೆ ಲಿಂಗಸಗೂರು ಪಟ್ಟಣದಲ್ಲಿ ಮಹಿಳೆಯಿಂದ ಗಣೇಶಮೂರ್ತಿಗಳ ತಯಾರಿಕೆ ಹಾಗೂ ಅವುಗಳಿಗೆ ರಂಗು ರಂಗಾದ ಬಣ್ಣಗಳನ್ನು ತುಂಬುವ ಕಲೆ ಕರಗತ ಮಾಡಿಕೊಂಡಿದ್ದು ಗಣೇಶಮೂರ್ತಿಗಳಿಗೆ ರಂಗುತುಂಬಿ ತನ್ನ ಬದುಕು ಕಟ್ಟಿಕೊಳ್ಳುತ್ತಿದ್ದಾಳೆ ಸುಮಿತ್ರ ಎಂಬ ಮಹಿಳೆ
ಪಟ್ಟಣದ ಕಲಬುರ್ಗಿ ರಸ್ತೆಯಲಿರುವ ಗಣೇಶಮೂರ್ತಿಗಳ ತಯಾರಿಕಾ ಕೇಂದ್ರದಲ್ಲಿ ಈ ಮಹಿಳೆ ಕೆಲಸ ಮಾಡುತ್ತಿದ್ದು ಕಳೆದ ನಾಲ್ಕು ವರ್ಷಗಳಿಂದ ಗಣೇಶಮೂರ್ತಿಗಳ ಕೆಲಸದಲ್ಲಿ ನಿರತವಾಗಿದ್ದಾಳೆ
ಸುಮಿತ್ರಾ ತಾನು ಗಣೇಶಮೂರ್ತಿಗಳ ತಯಾರಿಕೆ ಮಾಡಬಾರದು ಎಂಬ ಆಸಕ್ತಿ ಅಂತಹ ಕಲೆಯನ್ನು ಕಲಿಯಬೇಕೆಂಬ ಬಯಕೆಗೆ ಅವರ ಪತಿ ಸಾಥ್ ನೀಡುತ್ತಿದ್ದನಂತೆ ನಂತರದಲ್ಲಿ ಅವರ ಸಹೋದರ ಚೈತನ್ಯನ ಸಹಕಾರದಿಂದ ಇದೀಗ ಗಣೇಶಮೂರ್ತಿಗಳನ್ನು ತಯಾರಿ ಮಾಡುತ್ತಿದ್ದಾಳೆ
ಅವರನ್ನು ಪತ್ರಿಕೆ ಮಾತನಾಡಿಸಿದಾಗ ತಮ್ಮ ಅನುಭವಗಳನ್ನು ಪತ್ರಿಕೆಯೊಂದಿಗೆ ಮಾತನಾಡುತ್ತಾ ನಾನು ಗಣೇಶಮೂರ್ತಿಗಳ ತಯಾರಿಕೆಯಲ್ಲಿ ಎಲ್ಲಾ ಕೆಲಸಗಳನ್ನು ಮಾಡಬಲ್ಲೆ ಮೂರ್ತಿಗಳ ರಚನೆ ಮಾಡುವುದು ಅವುಗಳಿಗೆ ಬಣ್ಣ ತುಂಬುವುದು ಸೇರಿದಂತೆ ಎಲ್ಲಾ ಕೆಲಸಗಳನ್ನು ಮಾಡಬಲ್ಲೆ ಎನ್ನುತ್ತಾರೆ
ಕಳೆದ ನಾಲ್ಕು ವರ್ಷಗಳಿಂದ ಸುಮಿತ್ರಾ ಗಣೇಶ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿದ್ದು ಇದರಿಂದಲೇ ತನ್ನ ಜೀವನ ನಡೆಯುತ್ತಿದೆ ಎಂದು ಸಂತಸವಾಗಿ ನುಡಿಯುತ್ತಾಳೆ ವರ್ಷದ ನಾಲ್ಕು ತಿಂಗಳು ಮಾತ್ರ ಗಣೇಶಮೂರ್ತಿಗಳ ತಯಾರಿಕೆಯಲ್ಲಿ ಬಹಳ ಬಿಜಿಯಾಗಿರುತ್ತಾರೆ ಉಳಿದ ದಿನಗಳಲ್ಲಿ ಬೇರೆ ಬೇರೆ ಕೆಲಸ ಮಾಡಿ ಜೀವನ ನಡೆಸುತ್ತಾಳೆ ಅದರಂತೆ ಗಣೇಶಮೂರ್ತಿ ತಯಾರಿಕೆಯಲ್ಲಿ ಸಣ್ಣಸಣ್ಣ ಮೂರ್ತಿಗಳಿಂದ ಹಿಡಿದು ದೊಡ್ಡ ದೊಡ್ಡ ಮೂರ್ತಿಗಳನ್ನು ಅದರಲ್ಲಿಯು ನಾನಾ ಬಗೆಯ ಗಣೇಶಮೂರ್ತಿಗಳನ್ನು ಇವರು ಮಾಡುತ್ತಾರೆ ಎಲ್ಲಾ ರೀತಿಯ ಗಣೇಶಗಳನ್ನು ಬಹಳ ಸುಲಲಿತವಾಗಿ ನಿರ್ಮಿಸುವುದರ ಜೊತೆಗೆ ಅವುಗಳಿಗೆ ತಕ್ಕದಾದ ಬಣ್ಣಗಳನ್ನು ತುಂಬುವ ಮೂಲಕ ಮೂರ್ತಿಯನ್ನು ಹೆಚ್ಚು ಅಂದಗೊಳಿಸುತ್ತಾರೆ ಇವರ ಮೂರ್ತಿಗಳಿಗೆ ಅಪಾರವಾದ ಬೇಡಿಕೆ ಇದೆ ಎಂದು ಮಾಹಿತಿ ನೀಡುತ್ತಾರೆ
ಇಂದಿನ ಮಹಿಳೆ ಎಲ್ಲಾ ರಂಗದಲ್ಲೂ ಬಂದಿದ್ದರು ಗಣೇಶ ತಯಾರಿಕೆಯಲ್ಲಿ ಅಪರೂಪವಾಗಿತ್ತು ಆದರೆ ಸದರಿ ಮಹಿಳೆ ಗಣೇಶಮೂರ್ತಿಗಳ ತಯಾರಿಕೆಯಲ್ಲಿ ತನ್ನದೆಯಾದ ಛಾಪು ಮೂಡಿಸುತ್ತಿದ್ದಾಳೆ ಅಲ್ಲವೇ..? ಬದುಕನ್ನು ಸವಾಗಿ ಸ್ವೀಕರಿಸಿ ಗಣೇಶಮೂರ್ತಿಗಳಿಗೆ ಬಣ್ಣತುಂಬುವ ಮೂಲಕ ಬದುಕಿಗೂ ಬಣ್ಣ ತುಂಬಿಕೊಳ್ಳುತ್ತಿರುವ ಸುಮಿತ್ರಾಗೆ ಯಶಸ್ಸು ಸಿಗಲಿ ಎಂದು ಪತ್ರಿಕೆ ಹಾರೈಸುತ್ತದೆ