ಲಿಂಗಸಗೂರು:80ಲಕ್ಷ ವೆಚ್ಚದಲ್ಲಿ ಸಾಲುಮರದ ತಿಮ್ಮಕ್ಕ ಉದ್ಯಾನವನ (ಟೀಪಾರ್ಕ) ಪ್ರಾರಂಭವಾಗಲಿದೆ-ಸುಭಾಸಚಂದ್ರ ನಾಯಕ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ಸುಮಾರು 80ಲಕ್ಷ ರೂ ವೆಚ್ಚದಲ್ಲಿ ಸಾಲುಮರದ ತಿಮ್ಮಕ್ಕ ಉದ್ಯಾನವನ ವೃಕ್ಷೋದ್ಯಾನ ಅಥವಾ ಟೀ ಪಾರ್ಕ ಪಟ್ಟಣದ ಹೊರವಲಯದಲ್ಲಿ ನಿರ್ಮಾಣವಾಗಲಿದೆ ಎಂದು ಉಪವಲಯ ಪ್ರಾದೇಶಿಕ ಅರಣ್ಯ ಅಧಿಕಾರಿ ಸುಭಾಸನಾಯಕ ಹೇಳಿದರು
ಅವರು ಪಟ್ಟಣದ ತಮ್ಮ ಕಛೇರಿಯಲ್ಲಿ ಕಲ್ಯಾಣ ಕರ್ನಾಟಕ ಪತ್ರಿಕೆಯೊಂದಿಗೆ ಮಾತನಾಡುತ್ತಾ ನಾನು ನೂತನವಾಗಿ ತಾಲೂಕಿಗೆ ಆಗಮಿಸಿದ್ದು ತಾಲೂಕಿನ ಅರಣ್ಯದ ಬಗೆಗೆ ಮಾಹಿತಿಯನ್ನು ಪಡೆದುಕೊಂಡು ಆಗುತ್ತಿರುವ ತೊಂದರೆ ತೊಡಕುಗಳನ್ನು ಸರಿಪಡಿಸಿಕೊಂಡು ಉತ್ತಮ ಅರಣ್ಯದ ರಕ್ಷಣೆ ಮತ್ತು ಅಭಿವೃದ್ದಿಗೆ ಸದಾ ಯತ್ನಿಸಲಾಗುವುದು
ತಾಲೂಕಿಗೆ ಸುಮಾರು ೮೦ ಲಕ್ಷ ಸಾಲುಮರದ ತಿಮ್ಮಕ್ಕ ವೃಕ್ಷೋ ಧ್ಯಾನ (ಟೀ ಪಾರ್ಕ) ಮಾಡಲು ಅರಣ್ಯ ಇಲಾಖೆಯಿಂದ ಅನುದಾನ ಮಂಜೂರಿಯಾಗಿದ್ದು ಪಟ್ಟಣದ ಹುಲಿಗುಡ್ಡ ಸೀಮಾಂತರದಲ್ಲಿ ರಾಂಪೂರ ರಸ್ತೆಯ ಪಕ್ಕದಲ್ಲಿರುವ ಅರಣ್ಯ ಇಲಾಖೆಯ ಜಮೀನಿನಲ್ಲಿ ಸದರಿ ಪಾರ್ಕ ನಿರ್ಮಾಣವಾಗಲಿದೆ ಅದಕ್ಕಾಗಿಯೆ ಕೋಟ್ಯಂತರ ಹಣದ ಅವಶ್ಯಕತೆ ಇದ್ದು ಸದ್ಯ ೮೦ ಲಕ್ಷ ಮಾತ್ರ ಬಿಡುಗಡೆಯಾಗಿದ್ದು ಟೆಂಡರ್ ಕರೆಯುವ ಹಂತದಲ್ಲಿದೆ ಟೆಂಡರ್ ಪ್ರಕ್ರಿಯೆ ನಂತರದಲ್ಲಿ ಕಾಮಗಾರಿಯು ಪ್ರಾರಂಭವಾಗಲಿದೆ ಎಂದರು
ಇದರಲ್ಲಿ ಮಕ್ಕಳಿಗೆ ಆಟವಾಡಲು ಪಾರ್ಕ ನಿರ್ಮಾಣ,ನಿವೃತ್ತರು,ವಾಯುವಿಹಾರ ಮಾಡುವವರು ಸೇರಿದಂತೆ ಹಲವಾರು ಜನರಿಗೆ ಅನುಕೂಲವಾಗುವಂತೆ ಪಾರ್ಕ ನಿರ್ಮಾಣವಾಗಲಿದೆ ಅದರಲ್ಲಿ ಹಲವಾರು ಔಷಧಿಯ ಸಸ್ಯೆಗಳನ್ನು ಬೆಳೆಸಲಾಗುತ್ತದೆ ವಿಶ್ರಾಂತಿ ವಿಹಾರ ಮಾಡಲು ಬರುವವರಿಗೆ ನಿಯಮದ ಪ್ರಕಾರ ಪ್ರವೇಶಧನವಿರುತ್ತದೆ ಉದ್ಯಾನವನ ನಿರ್ಮಾಣವಾದರೆ ಪಟ್ಟಣದ ಸೌಂದರ್ಯವು ಹೆಚ್ಚಲಿದೆ ಎಂದರು
ಸದರಿ ಜಮೀನು ಬಗೆಗೆ ಒತ್ತುವರಿಯ ಬಗೆಗೆ ಕೇಳಿಬಂದಿದ್ದು ಈಗಾಗಲೆ ಸರ್ವೇ ಮಾಡಲಾಗಿದೆ ಎಂದು ಹೇಳುತ್ತಿದ್ದರು ನಾನು ಪುನಃ ಮತ್ತೊಮ್ಮೆ ಸರ್ವೇಗೆ ಪತ್ರ ಬರೆದಿರುವುದಾಗಿ ಹೇಳಿದರು ಅರಣ್ಯಭೂಮಿ ಹಾಗೂ ಅರಣ್ಯ ರಕ್ಷಣೆ ಅಭಿವೃದ್ದಿ ನಮ್ಮ ಹೊಣೆಯಾಗಿದ್ದು ಅದರಂತೆ ಕೆಲಸ ಮಾಡುತ್ತೇನೆ ಎಂದರು