ಮಟಕಾ,ಇಸ್ಪೀಟ್,ಕಳ್ಳತನ ತಡೆಯಿರಿ, ವಿನಾಕಾರಣ ಪ್ರಕರಣ ದಾಖಲಿಸುವುದು ನಿಲ್ಲಿಸಿ,ವಜ್ಜಲ್ ಖಡಕ್ ಸೂಚನೆ

Laxman Bariker
ಮಟಕಾ,ಇಸ್ಪೀಟ್,ಕಳ್ಳತನ ತಡೆಯಿರಿ, ವಿನಾಕಾರಣ ಪ್ರಕರಣ ದಾಖಲಿಸುವುದು ನಿಲ್ಲಿಸಿ,ವಜ್ಜಲ್ ಖಡಕ್ ಸೂಚನೆ
WhatsApp Group Join Now
Telegram Group Join Now

ತ್ರೈ ಮಾಸಿಕ ಕೆಡಿಪಿಸಭೆ
ಮಟಕಾ,ಇಸ್ಪೀಟ್,ಕಳ್ಳತನ ತಡೆಯಿರಿ, ವಿನಾಕಾರಣ ಪ್ರಕರಣ ದಾಖಲಿಸುವುದು ನಿಲ್ಲಿಸಿ,ವಜ್ಜಲ್ ಖಡಕ್ ಸೂಚನೆ

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು:ತಾಲೂಕಿನ ಹಟ್ಟಿಯಲ್ಲಿ ಮಟಕಾ ಇಸ್ಪೀಟ್ ಕಳ್ಳತನ ಹೆಚ್ಚುತಿದ್ದು ಪೊಲೀಸ್ ಅವುಗಳನ್ನು ತಡೆಯಲು ಯತ್ನಿಸಬೇಕೆ ಹೊರತು ಹೊಲಮನೆಯಲ್ಲಿದ್ದವರ ಮೇಲೆ ವಿನಾಕಾರಣ ಪ್ರಕರಣ ದಾಖಲಿಸುವುದನ್ನು ನಿಲ್ಲಿಸಬೇಕೆಂದು ಹಟ್ಟಿ ಪಿಐ ಹೊಸಕೇರಪ್ಪನಿಗೆ ಶಾಸಕ ವಜ್ಜಲ್ ಖಡಕ್ ಸೂಚನೆ ನೀಡಿದರು
ಪಟ್ಟಣದ ತಾಲೂಕಾ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ತ್ರೆöÊಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆವಹಿಸಿದ ಅವರು ತಾಲೂಕಿನ ಹಟ್ಟಿ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಮಟಕಾ, ಇಸ್ಪೀಟ್ ಜೂಜಾಟ ಹೆಚ್ಚಾಗುತ್ತಿದ್ದು ಅವರನ್ನು ನಂಬಿದ ಹೆಂಡರು ಮಕ್ಕಳು ಬೀದಿ ಪಾಲಾಗುತ್ತಿದ್ದಾರೆ ಅಂತವುಗಳನ್ನು ತಡೆಯಲು ಯತ್ನಿಸಿ ಹೊಲದಲ್ಲಿ ಕುಡಿಯಲ್ಲಿ ಕುಳಿತವರ ಮೇಲೆ ಕುಡಿದು ವಾಹನ ಚಲಾಯಿಸಿದ ಪ್ರಕರಣ ಹಾಕುವುದು ಮನೆಯಲ್ಲಿ ಕುಳಿತವರಿಗೆ ಯಾವುದೋ ಪ್ರಕರಣದಲ್ಲಿ ಸೇರಿಸುವುದು ಯಾಕೆ ಮಾಡುತ್ತಿರಿ ಅಲ್ಲದೆ ಕಳ್ಳತನಗಳು ಹೆಚ್ಚುತ್ತಿವೆ ಅವುಗಳು ನಡೆಯದಂತೆ ಎಚ್ಚರವಹಿಸಿ ಕೆಲಸ ಮಾಡಬೇಕು ವಿನಾಕಾರಣ ಯಾರ ಮೇಲೆಯು ಪ್ರಕರಣ ದಾಖಲಿಸಬೇಡಿ ಹಾಗೂ ವಿಚಾರಣೆ ನೆಪದಲ್ಲಿ ಇಡೀ ದಿನ ಎರಡು ದಿನ ಠಾಣೆಯಲ್ಲಿ ಕೂಡಿಸುವುದು ಯಾವನ್ಯಾಯ ಯಾರೊ ಆಗಿಬರದವರು ಬಂದು ಕೇಸುಕೊಟ್ಟರೆ ಅದರ ನೆಪದಲ್ಲಿ ಸರಿತಪ್ಪು ನೋಡದೆ ಮನಸಿಗೆ ಬಂದAತೆ ವರ್ತಿಸುವುದು ಸರಿಯಲ್ಲ ಮಾನವೀಯತೆ ದೃಷ್ಟಿಯಿಂದಲೂ ನೋಡುವುದು ಅವಶ್ಯವಿರುತ್ತದೆ ಮೊದಲು ಕಾನೂನುಬಾಹಿರ ಚಟುವಟಿಕೆಯನ್ನು ನಿಲ್ಲಿಸಲು ಯತ್ನಿಸಿ ಎಂದು ಶಾಸಕ ಮಾನಪ್ಪ ವಜ್ಜಲರು ಖಡಕ್ಕಾಗಿಯೆ ಸೂಚಿಸಿದರು ಅಲ್ಲದೆ ಲಿಂಗಸಗೂರಿನಲ್ಲಿ ತಳ್ಳುಬಂಡಿಯ ನೆಪದಲ್ಲಿ ಹಲವಾರು ಜನ ಮಾಮೂಲಿ ವಸೂಲಿ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ ಅದನ್ನು ನಿಯಂತ್ರಿ ಎಲ್ಲೆಡೆ ಸಿಸಿಕ್ಯಾಮರಾ ಅಳವಡಿಸಿ ಎಂದರು
ತಾಲೂಕಾ ಅಧಿಕಾರಿಗಳು ಸಭೆಗೆ ತಾವು ಬರದೆ ತಮ್ಮ ಪರವಾಗಿ ಕೃಷಿ ಇಲಾಖೆ,ಆರೋಗ್ಯ ಇಲಾಖೆ ಹಾಗೆ ಪುರಸಭೆಯ ಮುಖ್ಯಾಧಿಕಾರಿಗಳು ತಮ್ಮ ಪರವಾಗಿ ಕಳುಹಿಸಿದ್ದರು ನಿಮಗೆ ಮಾಹಿತಿ ಸರಿಯಾಗಿ ಇರುವುದಿಲ್ಲ ಹೇಗೆ ಉತ್ತರಿಸುತ್ತೀರಿ ನೀವು ಪ್ರಗತಿ ವರದಿ ಕೊಡದಿದ್ದರೆ ತಾಲೂಕಿನ ಸಮಸ್ಯೆ ಹೇಗೆ ಅರ್ಥವಾಗಬೇಕು ಎಂದು ಸಭೆಗೆ ಬಾರದವರ ಮೇಲೆ ಕ್ರಮಕ್ಕೆ ಸೂಚಿಸಿ ಕೆಲಸ ಮಾಡುವುದಿದ್ದರೆ ಸರಿಯಾಗಿ ಮಾಡಿ ಇಲ್ಲವೇ ಜಾಗ ಖಾಲಿ ಮಾಡಿ ಎಂದರು
ಜೆಜೆಎA ಕೆಲಸ ಮಾಡುವ ಗುತ್ತಿಗೆದಾರರು ಕೆಲಸವೇ ಪ್ರಾರಂಭವಾಗಿರದ ಕಡೆಯಲ್ಲಿ ನಾಮಫಲಕ ಹಾಕಿದ್ದಾರೆ ಕೆಲಸ ಪ್ರಾರಂಭ ಹಾಗೂ ಮುಕ್ತಾಯವೆಂದು ಮೊದಲೇ ಹಾಕಿರುವುದು ಎಷ್ಟು ಸರಿ ಅದಕ್ಕೆಲ್ಲ ನೀವೆ ಹೊಣೆಗಾರರು ಆಗುತ್ತೀರಿ ಎಂದು ಕುಡಿಯುವ ನೀರು ಎಇಇಯವರಿಗೆ ತಗ್ಗುದಿನ್ನೆಯಾಗದಂತೆ ಕ್ರಮವಹಿಸಬೇಕು ಎಂದರು ತಾಲೂಕಿನ ಕೊಳವೆಬಾವಿ ನೀರು ಪೋರೈಡ್ ಯುಕ್ತವಾಗುತ್ತಿದೆ ಅದನ್ನು ಸರಿಪಡಿಸುವ ಬಗೆಗೆ ಯತ್ನಿಸಬೇಕು ಎಂದು ತಾ,ಪಂ ಅಧಿಕಾರಿ ಉಮೇಶ ಹೇಳಿದರು
ಶಿಕ್ಷಣ ಇಲಾಖೆಗೆ೧೭ಕೋಟಿ ಹಣ ನೀಡಲಾಗಿದೆ ಅದರ ಬಳಕೆ ಸರಿಯಾಗಿಯಾಗಬೇಕು ಕೊರತೆಯಾದರೆ ಮಾಹಿತಿ ನೀಡಿ ತಾಲೂಕಿನಲ್ಲಿ ಮಕ್ಕಳಿಗೆ ಶೂ ಖರೀದಿಯಲ್ಲಿ ಭಾರಿ ಅವ್ಯವಹಾರವಾಗಿದೆ ಎಂದು ಮಾಧ್ಯಮದಲ್ಲಿ ಬಂತು ಮತ್ತು ಮೇಲಾಧಿಕಾರಿಗಳು ತನಿಖೆ ಮಾಡಲು ಪತ್ರ ಬರೆದಿದ್ದಾರೆ ನೀವೇಕೆ ವಿಳಂಬ ಮಾಡುತ್ತಿದ್ದೀರಿ ಅಲ್ಲದೆ ಸ್ಥಳಿಯವಾಗಿಯೆ ತನಿಖೆ ತಂಡ ಮಾಡುವುದರಿಂದ ಸರಿಯಾಗಿ ತನಿಖೆ ಸಾಧ್ಯವಾಗುವುದಿಲವೆಂದರು ಅಲ್ಲದೆ ಎಸ್ ಎಸ್ ಎಲ್ ಸಿ ಪರೀಕ್ಷೆ ಉತ್ತಮಗೊಳಿಸಲು ಶ್ರಮವಹಿಸಬೇಕು ಎಂದರು
ಜೆಸ್ಕಾA, ಸಾರಿಗೆ ,ಸಿಡಿಪಿಓ ಸಮಾಜ ಕಲ್ಯಾಣ,ಪ,ಪಂ ಇಲಾಖೆ ಆಹಾರ ಹೀಗೆ ನಾನಾ ಇಲಾಖೆಗಳ ಚರ್ಚೆ ನಡೆಯಿತು
ಈ ಸಂದರ್ಭದಲ್ಲಿ ತಹಸೀಲ್ದಾರ ಶಂಶಾಲA ತಾ,ಪಂ ಅಧಿಕಾರಿ ಉಮೇಶ,ನೀರಾವರಿ ಇಲಾಖೆ ಅಧಿಕಾರಿಗಳು ಸೇರಿದಂತೆ ವೇದಿಕೆಯಲ್ಲಿದ್ದರು ಪಿಕರ‍್ಡ ಬ್ಯಾಂಕ್ ಅಧ್ಯಕ್ಷ ಬಸನಗೌಡ ಮೇಟಿ, ಅಧಿಕಾರಿಗಳಾದ ಸಮಾಜ ಕಲ್ಯಾಣದ ರಾಜಕುಮಾರ, ಪಶು ಇಲಾಖೆಯ ಡಾ ರಾಚಪ್ಪ ಆರೋಗ್ಯ ಇಲಾಖೆಯ ಪ್ರಾಣೇಶ, ಪ,ಪಂ ಇಲಾಖೆಯ ಮಂಜುಳಾ ಅಸುಂಡಿ,ಸಿಡಿಪಿಓ ಇಲಾಖೆಯ ಎಂ ಡಿ ಗೋಕುಲ, ಪಿಐ ಪುಂಡಲಿಕ ಪಟ್ಟತ್ತರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು

WhatsApp Group Join Now
Telegram Group Join Now
Share This Article