ರಾಜ್ಯ ಸರಕಾರ ರೈತರಿಗೆ ಸ್ಪಂದಿಸುವ ಕೆಲಸ ಮಾಡುತ್ತಿಲ್ಲ- ವಿಜಯೇಂದ್ರ

Laxman Bariker
ರಾಜ್ಯ ಸರಕಾರ ರೈತರಿಗೆ ಸ್ಪಂದಿಸುವ ಕೆಲಸ ಮಾಡುತ್ತಿಲ್ಲ- ವಿಜಯೇಂದ್ರ
WhatsApp Group Join Now
Telegram Group Join Now

ನಮ್ಮಭೂಮಿ ನಮ್ಮ ಹಕ್ಕು ಆಂದೋಲನ::
ರಾಜ್ಯ ಸರಕಾರ ರೈತರಿಗೆ ಸ್ಪಂದಿಸುವ ಕೆಲಸ ಮಾಡುತ್ತಿಲ್ಲ- ವಿಜಯೇಂದ್ರ
ರಾಯಚೂರು ಜಿಲ್ಲೆಯಲ್ಲಿ ೭ಸಾವಿರ ಎಕರೆಗೆ ರೈತರ ಜಮೀನಿಗೆ ವಕ್ಫ್ ನೋಟೀಸ್

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರುರೈತರ ಭೂಮಿ ಮಠ,ಮಂದಿರದ ಭೂಮಿಗಳು ವಕ್ಫ್ ನೋಟಿಸ್ ಬರುತ್ತಿವೆ ಆದರೆ ಸಿದ್ದರಾಮಯ್ಯನವರ ಸರಕಾರ ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿಲ್ಲ ರೈತರ ಬಡವರ ಸಮಸ್ಯೆಗಳಿಗೆ ಸ್ಪಂದನೆ ಮಾಡುತ್ತಿಲ್ಲವೆಂದರೆ ನೀವು ಸರಕಾರ ನಡೆಸುವುದಕಿಂತ ರಾಜೀನಾಮೆ ಕೊಡುವುದು ಸೂಕ್ತ ಎಂದು ಬಿಜೆಪಿಯ ರಾಜ್ಯಾಧ್ಯಕ್ಷರಾದ ಬಿ,ವೈ ವಿಜಯೇಂದ್ರ ಹೇಳಿದರು
ಅವರು ಪಟ್ಟಣದಲ್ಲಿ ಏರ್ಪಡಿಸಿದ ನಮ್ಮಭೂಮಿ ನಮ್ಮ ಹಕ್ಕು ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ರಾಜ್ಯದ ಉಪಚುನಾವಣೆಯಲ್ಲಿ ಮೂರು ಸ್ಥಾನ ಗೆದ್ದು ಬೀಗುತ್ತಿರುವ ಕಾಂಗ್ರೆಸ್ ಮತದಾನ ಮುನ್ನಾದಿನ ಮಹಿಳೆಯರ ಖಾತೆಗಳಿಗೆ ಭಾಗ್ಯಲಕ್ಷಿö್ಮÃ ಹಣ ಹಾಕುವುದುರ ಮೂಲಕ ಗೆದ್ದಿರಿ ಸಿದ್ದರಾಮಯ್ಯನವರು ನಾಡಿನ ಒಳಿತಿಗಾಗಿ ಯಾವುದೆ ಹೋರಾಟವನ್ನು ಮಾಡಲಿಲ್ಲ ಯಡೆಯೂರಪ್ಪನವರು ರಾಜ್ಯದ ಜನರ ಸಮಸ್ಯೆಗಳಿಗಾಗಿ ಸಾಕಷ್ಟು ಸುಧೀರ್ಘವಾಗಿ ಹೋರಾಟ ಮಾಡಿದ್ದಾರೆ ಆ ಮೂಲಕ ಗೆಲುವನ್ನು ಪಡೆದವರು ಯಡೆಯೂರಪ್ಪನವರು ಆದರೆ ಸಿದ್ದರಾಮಯ್ಯನವರು ಅದೃಷ್ಟದ ಮುಖ್ಯಮಂತ್ರಿಯಾಗಿದ್ದಾರೆ ಇದು ಬಹಳ ಕಾಲ ನಡೆಯುವುದಿಲ್ಲ
ಕಾಂಗ್ರೆಸ್ ಸರಕಾರ ವಕ್ಫ್ ಮೂಲಕ ರೈತರ ಜಮೀನುಗಳನ್ನು ಕಸಿಯುವ ಕೆಲಸ ಮಾಡುತ್ತಿದ್ದು ಮೂಡಾಹಗರಣದಲ್ಲಿ ನನ್ನದೇನು ತಪ್ಪಿಲ್ಲವೆಂದು ಹೇಳುತ್ತಲೆ ಸೈಟುಗಳನ್ನು ಹಿಂದಿರುಗಿಸುವ ಕೆಲಸವಾಗಿದೆ ಮಹರ್ಷಿ ವಾಲ್ಮೀಕಿ ನಿಗಮದ ಹಗರಣದಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ
ರಾಜ್ಯದಲ್ಲಿರುವ ಕಾಂಗ್ರೆಸ್ ಸರಕಾರ ಯಾವುದೆ ಅಭಿವೃದ್ದಿ ಕೆಲಸಗಳನ್ನು ಮಾಡುತ್ತಿಲ್ಲ ಬಿಜೆಪಿ ಶಾಸಕರಿಗೆ ಅನುದಾನ ನಿಡುತ್ತಿಲ್ಲ ಅಭಿವೃದ್ದಿಗೆ ಸ್ಪಂದಿಸದ ಸರಕಾರ ರಾಜ್ಯದಲ್ಲಿ ಬಹಳ ದಿನ ನಡೆಯುವುದಿಲ್ಲ ಬಹುಬೇಗನೆ ಕಾಂಗ್ರೆಸ್ ಅಂತ್ಯವಾಗಲಿದೆ ಎಂದು ಮಾಜಿ ಸಚಿವರಾದ ಶಿವನಗೌಡನಾಯಕ ಹೇಳುತ್ತಾ ಮುಂಬರುವ ಚುನಾವಣೆಯಲ್ಲಿ ಈಭಾಗದಿಂದ ಹೆಚ್ಚಿನ ಸ್ಥಣಗಳನ್ನು ಗೆಲ್ಲಿಸಿ ವಿಜಯೇಂದ್ರರವರ ಕೈ ಬಲಪಡಿಸುತ್ತೇವೆ ಎನ್ನುವ ಭರವಸೆಯನ್ನು ಣಿಡಿದರು
ಮಾಜಿ ಸಚಿವ ರೇಣುಕಾಚಾರ್ಯ ಮಾತನಾಡುತ್ತಾ ರಾಜ್ಯ ಸರಕಾರ ಸುಳ್ಳುಹೇಳಿ ಅಧಿಕಾರ ನಡೆಸುತ್ತಿದೆ ವಕ್ಫ್ ರದ್ದಾಗಬೇಕು ರೈತರ ಸಮಸ್ಯೆಗಳಿಗೆ ಸ್ಪಮದಿಸದಿದ್ದರೆ ಸಿದ್ದರಾಮಯ್ಯನವರ ರಾಜೀನಾಮೆ ಖಂಡಿತ ಎಂದರು
ಕಾAಗ್ರೆಸ್ ನವರು ಕೊಡುವ ಯೋಜನೆಗಳು ಶಾಸ್ವತವಾದವುಗಳಲ್ಲಿ ಪ್ರಧಾನಿಯವರು ಘೋಷಣೇ ಮಾಡಿದ ಹಲವಾರು ಜನಪರ ಯೋಜನೆಗಳು ಶಾಶ್ವತವಾದವುಗಳಾಗಿವೆ ಶಾಸಕರು,ಸ್ವಾಮೀಜಿಗಳಂತವರ ಜಂಇನು ವಕ್ಫ್ ಗೆ ಹೋಗಿವೆ ಇನ್ನು ಸಮಾನ್ಯರ ಪಾಡೇನು ಎಂದು ಶಾಸಕ ಮಾನಪ್ಪ ವಜ್ಜಲರು ಹೇಳಿದರು
ಮಾಜಿ ಸಂಸದ ಕೆ ವಿರುಪಾಕ್ಷಪ್ಪ, ಭೈರೇತಿ ಬಸವರಾಜ, ಜನಾರ್ಧನರೆಡ್ಡಿ, ಪ್ರತಾಪಗೌಡ ಪಾಟೀಲ್, ತಿಪ್ಪರಾಜ ಹವಾಲ್ದಾರ ಸೇರಿದಂತೆ ಹಲವರು ಮಾತನಾಡಿದರು ಡಾ ಶಿವರಾಜ ಪಾಟೀಲ್ ಸ್ವಾಗತಿಸಿದರು
ಈ ಸಂದರ್ಭದಲ್ಲಿ ಬಸನಗೌಡ ಬ್ಯಾಗವಾಟ, ಗಂಗಾಧರನಾಯಕ, ಶರಣಪ್ಪಗೌಡ ಜಾಡಲದಿನ್ನಿ, ಎನ್ ಶಂಕ್ರಪ್ಪ, ಕೆ ಕರಿಯಪ್ಪ, ದೊಡ್ಡನಗೌಡ ಪಾಟೀಲ್, ಗಿರಿಮಲ್ಲನಗೌಡ,ವೀರನಗೌಡ ಪಾಟೀಲ್ ಲೆಕ್ಕಿಹಾಳ ಅಯ್ಯಪ್ಪ ವಕೀಲ, ಹುಲ್ಲೇಶ ಸಾಹುಕಾರ, ಸೇರಿದಂತೆ ಇದ್ದರು

WhatsApp Group Join Now
Telegram Group Join Now
Share This Article