ತೊಟ್ಟಿಲುಕಾರ್ಯಕ್ರಮ,ವಿಜಯಮಹಾಂತನೆAದು ಹೆಸರಿಟ್ಟ ಶ್ರೀಗಳು
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ಪುರಸಭೆ ವ್ಯಾಪ್ತಿಯ ಕರಡಕಲ್ ಗ್ರಾಮದ ವಿಜಯಮಹಾಂತೇಶ್ವರಮಠದಲ್ಲಿ ತೊಟ್ಟಿಲು ಕಾರ್ಯಕ್ರಮ ನಡೆದು ಹೆಣ್ಣುಮಗುವಿಗೆ ವಿಜಯಮಹಾಂತಮ್ಮ ಗಂಡುಮಗುವಿಗೆ ವಿಜಯಮಹಾಂತೇಶ ಎಂದು ಬಸವಲಿಂಗಶ್ರೀಗಳು ಶಿರೂರವರು ಹೆಸರಿಟ್ಟ ಕಾರ್ಯಕ್ರಮ ನಡೆಯಿತು
ಇದೇನಿದು ಮಠದಲ್ಲಿ ತೊಟ್ಟಿಲು ಕಾರ್ಯಕ್ರಮ ಎಂದು ಆಶ್ಚರ್ಯವಾಯಿತೇ ಕರಡಕಲ್ಲಿನ ವಿಜಯಮಹಾಂತೇಶ್ವರಮಠದಲ್ಲಿ ಮಹಾಂತ ಶಿವಯೋಗಿಗಳ ಸ್ಮರಣೋತ್ಸವ ಹಾಗೂ ಅನುಭವ ಮಂಠಪದ ಉದ್ಘಾಟನೆ ನಿಮಿತ್ಯವಾಗಿ ದಿನಾಂಕ೧ರಿAದ ಪ್ರವಚನ ಕಾರ್ಯಕ್ರಮ ನಡೆಯುತ್ತಿದ್ದು ಸದರಿ ಪ್ರವಚನದಲ್ಲಿ ವಿಜಯಮಹಾಂತೇಶನ ಹುಟ್ಟಿನ ಸಂದರ್ಭವನ್ನು ಹೇಳುವಾಗ ತೊಟ್ಟಿಲುಕಾರ್ಯಕ್ರಮ ನಡೆಯಿತು
ಎರಡು ಶಿಶುಗಳನ್ನು ತೊಟ್ಟಿಲಲ್ಲಿ ಹಾಕುವ ಕಾರ್ಯಕ್ರಮ ನಡೆಯಿತು ತೊಟ್ಟಿಲನ್ನು ಹಾಗೂ ಅನುಭವ ಮಂಟಪವನ್ನು ತಳಿರು ತೋರಣದಿಂದ ಮಹಿಳೆಯರು ಶೃಂಗಾರಗೊಳಿಸಿದ್ದರು ಮಕ್ಕಳನ್ನು ತೊಟ್ಟಿಲಲಿ ಹಾಕುತ್ತಲೆ ಜೋಗುಳಹಾಡಲಾಯಿತು ನಂತರದಲ್ಲಿ ಶಿರೂರಿನ ಬಸವಲಿಂಗಶ್ರೀಗಳು ಮಕ್ಕಳಿಗೆ ನಾಮಕರಣ ಮಾಡಿದರು
ನಂತರದಲ್ಲಿ ಇಲಕಲ್ಲಿನ ಗುರುವಿಜಯಮಹಾಂತಶ್ರೀಗಳು ಮಾತನಾಡಿ ವಿಜಯಮಹಾಂತ ಶಿವಯೋಗಿಗಳು ತುಮಬಾ ಮೃದುಸ್ವಭಾವದವರಾಗಿದ್ದರು ಅವರು ಸದಾ ಭಕ್ತರ ಹಿತವನ್ನೆ ಬಯಸುತ್ತಿದ್ದರು ಭಕ್ತರು ಆರೋಗ್ಯವಾಗಿರಬೇಕು,ಸಿರಿವಂತರಾಗಬೇಕು ಜ್ಞಾನವಂತರಾಗಬೇಕು ಎಂದು ಸದಾಬಯಸುತ್ತಿದ್ದರು ಎಂದು ಹೇಳಿದರು
ಪ್ರವಚನದ ಶರಣಬಸವದೇವರು ಮಗು ಹೆಣ್ಣಿರಲಿ ಗಂಡಿರಲಿ ಯಾವುದೆ ಭಿನ್ನಬೇದ ಮಾಡಬಾರದು ಹೆಣ್ಣಿನಿಂದಲೇ ಜಗವು ಅದಕ್ಕಾಗಿ ಹೆಣ್ಣುಮಕ್ಕಳನ್ನು ಗೌರವಿಸಬೇಕು ಭ್ರೂಣ ತೆಗೆಸುವ ಕೆಲಸ ಹಲವಾರು ಕಡೆ ನಡೆಯುತ್ತಿದೆ ಅದಕ್ಕಾಗಿ ಇಂದು ಮದುವೆಗೆ ಹೆಣ್ಣು ಸಿಗತಾ ಇಲ್ಲ ಹೀಗೆ ಮುಂದುವರೆದರೆ ಪರಸ್ಥಿತಿ ಬಹಳ ಗಂಭೀರವಾಗಲಿದೆ ಅದಕ್ಕಾಗಿ ಹೆಣ್ಣನ್ನು ಗೌರವಿಸಿ ಪ್ರೋತ್ಸಾಹಿಸಿ ಎಂದರು
ಈ ಸಂದರ್ಭದಲ್ಲಿ ಲಿಂಗಸಗೂರು ವಿಜಯಮಹಾಂತೇಶ್ವರ ಶಾಖಾಮಠದ ಸಿದ್ದಲಿಂಗಸ್ವಾಮಿಗಳು ಗ್ರಾಮದ ಗಿರಿಮಲ್ಲನಗೌಡ ಪಾಟೀಲ್, ಭೂಪನಗೌಡ ಪಾಟೀಲ್, ಬಸನಗೌಡ ಪಾಟೀಲ್,ಸೋಮನಾಥ ಪಾಟಿಲ್,ಸೇರಿದಂತೆ ಹಿರಿಕಿರಿಯ ಮುಖಂಡರು ಮಹಿಳೆಯರು ಇದ್ದರು