ವಸತಿ ನಿಲಯಗಳಿಗೆ ವಿಶೇಷ ಜಿಲ್ಲಾಧಿಕಾರಿ ಧೀಡಿರ ಭೇಟಿ ಅವ್ಯವಹಾರ ತನಿಖೆ

Laxman Bariker
ವಸತಿ ನಿಲಯಗಳಿಗೆ ವಿಶೇಷ ಜಿಲ್ಲಾಧಿಕಾರಿ ಧೀಡಿರ ಭೇಟಿ ಅವ್ಯವಹಾರ ತನಿಖೆ
WhatsApp Group Join Now
Telegram Group Join Now

ವಸತಿ ನಿಲಯಗಳಿಗೆ ವಿಶೇಷ ಜಿಲ್ಲಾಧಿಕಾರಿ ಧೀಡಿರ ಭೇಟಿ ಅವ್ಯವಹಾರ ತನಿಖೆ

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸುಗೂರ:ಸರಕಾರದ ಆದೇಶದಂತೆ ಬಾಗಲಕೋಟೆಯ ಕೃಷ್ಣಾ ಮೇಲ್ದಂಡ ಯೋಜನೆಯ ಪುನರ ವಸತಿ ಭೂಸ್ವಾಧಿನ ವಿಶೇಷ ಜಿಲ್ಲಾಧಿಕಾರಿ ರಮೇಶ ಕೂಲಾರ ಇವರು ಪಟ್ಟಣದ ಸಮಾಜ ಕಲ್ಯಾಣ ಬಿ.ಸಿ.ಎಂ ಅಲ್ಪ ಸಂಖ್ಯಾತ ವಸತಿ ನಿಲಯಗಳಿಗೆ ಧೀಡಿರನೆ ಭೇಟಿ ನೀಡಿ ಪರೀಶಿಲಿಸಿದರು.
ಹಲವಾರು ವಸತಿ ನಿಲಯಗಳಿಗೆ ಬಯ್ಯೋಮೆಟ್ರಿಕ್ ಪದ್ಧತಿ ಇರದೆರುವದು ಮತ್ತು ವಿದ್ಯಾರ್ಥಿಗಳಿಗೆ ಕಿರಾಣಿ ಅಂಗಡಿಗಳಿAದ ಕಳಪೆ ಆಹಾರ ಪೂರೈಸುತ್ತಿದ್ದು ಮತ್ತು ಹಲವಾರು ವರ್ಡನಗಳು ಹಾಸ್ಟೆಲಗಳಿಗೆ ಭೇಟಿ ನೀಡದೆ ಇರುವದು ಮತ್ತು ದಾಖಲೆಗಿಂತ ಹೆಚ್ಚಿನ ವಿದ್ಯಾರ್ಥಿಗಳು ವಾಸಿಸುತ್ತಿದ್ದು ಹಾಗೂ ಶೌಚಾಲಯ ಕೂರತೆ ವಾರ್ಡನಳು ವಸತಿ ನಿಲಯಗಳಿಗೆ ಭೇಟಿ ನೀಡದೆ ಇರುವದು ಹಾಗೂ ೧೦ ವರ್ಷಗಳಿಂದ ತಾಲೂಕಿನಲ್ಲಿರುವ ವಾರ್ಡನಗಳ ವರ್ಗಾವಣೆಗೆ ಒತ್ತಾಯಿಸಿ ಬಂದ ದೂರುಗಳ ಹಿನ್ನಲೆಯಲ್ಲಿ ವಸತಿ ನಿಲಯಗಳಿಗೆ ಬೇಟಿ ನೀಡಿ ಪರಿಶಿಲಿಸಿದರು.
ಸ್ಥಳದಲ್ಲಿ ಇದ್ದ ಸಮಾಜ ಕಲ್ಯಾಣ ಬಿಸಿಎಮ ಹಾಗೂ ಅಲ್ಪಸಂಖ್ಯಾತ ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡು ಅವರ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ನಿಮ್ಮ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದೆಂದು ಸೂಚಿಸದರು.
ಇಲ್ಲಿಯವರಗೆ ೩ ವರ್ಷಗಳಿಂದ ವಸತಿ ನಿಲಯ ಬಾಗಿಲುಗಳಿಗೆ ಆಹಾರ ಗುತ್ತಿಗೆದಾರರು ಆಹಾರ ಸಾಮಗ್ರಿಗಳುನ್ನು ಪೂರೈಸದೆ ಇರುವದರಿಂದ ವಾರ್ಡನಗಳು ಸ್ಥಳೀಯ ಕಿರಾಣಿ ಅಂಗಡಿಯಲ್ಲಿ ಆಹಾರಗಳನ್ನು ಖರಿದಿಸುವದರಿಂದ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದು ಹಾಗೂ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಿ ಬೊಗಸ್ ಬಿಲ್ ಮೂಲಕ ಪ್ರತಿ ತಿಂಗಳು ಲಕ್ಷಾಂತರ ರೂ ಹಣ ಲೂಟಿ ಮಾಡುತ್ತಿರುವ ಸಂಬAಧಿಸಿದ ವಾರ್ಡನ ಹಾಗೂ ಅಧಿಕಾರಿಗಳ ವಿರುದ್ದ ಕ್ರಮ್ಮ ಜರಗಿಸಲಾಗುವುದೆಂದು ತಿಳಿಸಿದರು.
ಪಟ್ಟಣದ ಅಂಬೇಡ್ಕರ್ ವಸತಿ ನಿಲಯ ಕಟ್ಟಡ ಮುಂದೆ ಹರಿಯುತ್ತಿರುವ ಕೂಳಚೆ ನೀರನ್ನು ಸರಿಪಡಿಸಿ ಸ್ವಚ್ಛೆತ್ತೆ ಕಾಪಾಡಲು ಪುರಸಭೆ ಮುಖ್ಯಾಧಿಕಾರಿ ರೆಡ್ಡಿ ರಾಯಣಗೌಡವರಿಗೆ ಸೂಚಿಸಿದರು ಜಿಲ್ಲಾಧಿಕಾರಿ ವಸತಿನಿಲಯಗಳಿಗೆ ಭೇಟಿ ನೀಡಿದಾಗ ವಾರ್ಡನಗಳು ನಾಪತ್ತೆಯಾಗಿದ್ದರು ಎನ್ನಲಾಗುತ್ತಿದೆ
ಈ ಸಂದಭÀðದಲ್ಲಿ ತಹಶಿಲ್ದಾರ ಸೈಯದ್ ಶಂಶಾಲಾA, ಬಿ.ಸಿ.ಎಂ ಅಧಿಕಾರಿ ರಮೇಶ ರಾಥೋಡ, ಅಲ್ಪಸಂಖ್ಯಾತ ಇಲಾಖೆ ಅಧಿಕಾರಿ ಷಡಾಕ್ಷರಿ, ವಾರ್ಡನಗಳಾದ ನಾಗರತ್ನ,ಭಿಮಣ್ಣ ಹಾಗೂ ಸಿಬ್ಬಂದಿಗಳು ಇದ್ದರು.

WhatsApp Group Join Now
Telegram Group Join Now
Share This Article