ಜಿಲ್ಲೆಯಲ್ಲಿ ಕಳ್ಳತನ, ಅಪಘಾತ ತಡೆಯಲು ಸತತ ಪ್ರಯತ್ನ-ಎಸ್ಪಿ ಪುಟ್ಟಮಾದಯ್ಯ ಕ

Laxman Bariker
ಜಿಲ್ಲೆಯಲ್ಲಿ ಕಳ್ಳತನ, ಅಪಘಾತ ತಡೆಯಲು ಸತತ ಪ್ರಯತ್ನ-ಎಸ್ಪಿ ಪುಟ್ಟಮಾದಯ್ಯ  ಕ
WhatsApp Group Join Now
Telegram Group Join Now

ಜಿಲ್ಲೆಯಲ್ಲಿ ಕಳ್ಳತನ, ಅಪಘಾತ ತಡೆಯಲು ಸತತ ಪ್ರಯತ್ನ-ಎಸ್ಪಿ ಪುಟ್ಟಮಾದಯ್ಯ

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು:ಜಿಲ್ಲೆಯಲ್ಲಿ ನಡೆಯುತ್ತಿರುವ ಅಪಘಾತ ಪ್ರಕರಣಗಳು ಹಾಗೂ ಕಳ್ಳತನ,ಕೊಲೆ ಪ್ರಕರಣ ಸೇರಿದಂತೆ ಅಹಿತಕರ ಘಟನೆಗಳನ್ನು ತಡೆಯಲು ಪೊಲೀಸ್ ಇಲಾಖೆಯಿಂದ ಸತತ ಪ್ರಯತ್ನ ಮಾಡಲಾಗುತ್ತಿದೆ ಎಂದು ಎಸ್ಪಿ ಎಂ ಪುಟ್ಟಮಾದಯ್ಯ ಹೇಳಿದರು
ಅವರು ಪಟ್ಟಣದಲ್ಲಿ ನಡೆದಿರುವ ಕೊಲೆ ಪ್ರಕರಣದ ಸ್ಥಳ ಪರಿಶೀಲನೆ ಮಾಡಿ ನಂತರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಲಿಂಗಸಗೂರು ಪಟ್ಟಣದಲ್ಲಿ ನಿನ್ನೆ ನಡೆದ ಕೊಲೆಪ್ರಕರಣದ ಸ್ಥಳ ಪರಿಶೀಲನೆ ಮಾಡಲಾಗಿದ್ದು ಘಟನೆಯ ಬಗೆಗೆ ತನಿಖೆ ಮಾಡಲಾಗುವುದು ಅಲ್ಲದೆ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣಗಳು ನಡೆಯುತ್ತಿವೆ ಪೊಲೀಸ್ ಅವುಗಳನ್ನು ಭೇದಿಸುತ್ತಲೆ ಇದೆ ನಿಯಂತ್ರಣಕ್ಕಾಗಿ ಅಗತ್ಯ ಕ್ರಮಕೈಗೊಳ್ಳುತ್ತಿದ್ದರು ಮರುಕಳಿಸುತ್ತಿವೆ ಅಪಘಾತ ಪ್ರಕರಣಗಳು ಸಹಿತ ಎಷ್ಟೇ ನಿಯ<ತ್ರಣಕ್ಕೆ ತಂದರು ಮೇಲಿಂದ ಮೇಲೆ ಘಟಿಸುತ್ತಲೆ ಇವೆ ಜನರಲ್ಲಿ ಜಾಗೃತಿ ತರುವ ಕೆಲಸವನ್ನು ಪೊಲೀಸ್ ಇಲಾಖೆ ಸತತವಾಗಿ ಮಾಡುತ್ತಾ ಬರುತ್ತಿದೆ ಎಂದರು
ಅಲ್ಲದೆ ಪಟ್ಟಣದಲ್ಲಿ ನಕಲಿನೋಟು ಚಲಾವಣೆ ಮಾಡುವ ವ್ಯಕ್ತಿಯನ್ನು ವಿಜಯಪುರದ ಪೊಲೀಸ್ ಬಂದು ಬಂಧಿಸಿದರು ಲಿಂಗಸಗೂರ ಪೊಲೀಸ್ ಮೌನವೇಕೆ ಎಂದಾಗ ಅದರ ಬಗೆಗೆ ಹೆಚ್ಚಿನ ಮಾಹಿತಿ ಇಲ್ಲ ನಿಯಂತ್ರಣಕ್ಕೆ ಯತ್ನಿಸಲಾಗುವುದು ಪಟ್ಟಣದಲ್ಲಿ ಪಾದಚಾರಿ ಓಡಾಡಲು ಹಲವಾರು ಕಡೆಯಲ್ಲಿ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ಕೇಳಿದಾಗ ಅದರ ಬಗೆಗೆ ಈಗಾಗಲೆ ಪುರಸಭೆಯ ಗಮನಕ್ಕೆ ತರಲಾಗಿದೆ ಪಟ್ಟಣದ ಬೈಪಾಸ್ ರಸ್ತೆಯ ಎಸ್,ಎಲ್,ವಿ ಹೋಟೇಲ್ ಹತ್ತಿರ ಎಸ್ ಬಿ ಐ ಬ್ಯಾಂಕ್ ಹತ್ತಿರ ಹೊಸಬಸ್ ನಿಲ್ದಾಣ ಸೇರಿದಂತೆ ಹಲವಾರು ಕಡೆಯಲ್ಲಿ ಜನದಟ್ಟಣೆಯನ್ನು ವಾಹನ ದಟ್ಟಣೆಯನ್ನು ತಡೆಯಲು ಸೂಕ್ತಕ್ರಮ ತೆಗೆದುಕೊಳ್ಳಲಾಗುವುದು ಎಂದರು ಅಲ್ಲದೆ ಬಿಡಾಡಿ ದನಗಳು ರಸ್ತೆಯಲ್ಲಿ ಓಡಾಡುವುದು ಮಲಗುವುದು ಕಂಡು ಬರುತ್ತಿದ್ದು ಅದನ್ನು ನಿಯಂತ್ರಣದ ಅಗತ್ಯವಿದೆ ಎಂದರು
ಎಲ್ಲಾ ಅಹಿತಕರ ಘಟನೆಗಳು ತಡೆಯಲು ಸದಾಶ್ರಮಿಸುತ್ತಿರುವುದಾಗಿ ಅವರು ಹೇಳಿದರು
ಈ ಸಂದರ್ಭದಲ್ಲಿ ಪಿಐ ಪುಂಡಲೀಕ್ ಪಟ್ಟತ್ತರ ಸೇರಿದಂತೆ ಇದ್ದರು

WhatsApp Group Join Now
Telegram Group Join Now
Share This Article